ಸಂವಿಧಾನದ ಆಶಯಕ್ಕೆ ಬದ್ಧರಾಗಿ ನಡೆದುಕೊಳ್ಳಿ: ತಹಶೀಲ್ದಾರ ವಿಶ್ವನಾಥ ಮುರುಡಿ

KannadaprabhaNewsNetwork |  
Published : Jan 27, 2024, 01:17 AM ISTUpdated : Jan 27, 2024, 01:18 AM IST
ಗಣರಾಜ್ಯೋತ್ಸವದಲ್ಲಿ ತಹಶೀಲ್ದಾರ ವಿಶ್ವನಾಥ ಮುರುಡಿ ಮಾತನಾಡಿದರು.  | Kannada Prabha

ಸಾರಾಂಶ

ದೇಶದ ಜನರೆಲ್ಲರಿಗೂ ಅಂಬೇಡ್ಕರರ ಸಂವಿಧಾನ ಸ್ಫೂರ್ತಿಯಾಗಿದ್ದು, ಅದರ ಆಶಯಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳುವ ಮೂಲಕ ಜೀವನ ನಡೆಸಬೇಕಾಗಿದೆ.

ಕನಕಗಿರಿ: ಸಂವಿಧಾನ ಆಶಯಗಳಿಗೆ ಬದ್ಧರಾಗಿ ನಡೆದಾಗ ಮಾತ್ರ ಗಣರಾಜ್ಯೋತ್ಸವ ಆಚರಣೆಗೆ ಅರ್ಥ ಬರುತ್ತದೆ ಎಂದು ತಹಶೀಲ್ದಾರ ವಿಶ್ವನಾಥ ಮುರುಡಿ ಹೇಳಿದರು.ಅವರು ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ ಮೈದಾನದಲ್ಲಿ ತಾಲೂಕಾಡಳಿತದಿಂದ ಹಮ್ಮಿಕೊಂಡಿದ್ದ ೭೫ನೇ ಗಣರಾಜ್ಯೋತ್ಸವ ನಿಮಿತ್ತ ಧ್ವಜಾರೋಹಣ ನೆರವೇರಿಸಿ ಶುಕ್ರವಾರ ಮಾತನಾಡಿದರು.ದೇಶದ ಜನರೆಲ್ಲರಿಗೂ ಅಂಬೇಡ್ಕರರ ಸಂವಿಧಾನ ಸ್ಫೂರ್ತಿಯಾಗಿದ್ದು, ಅದರ ಆಶಯಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳುವ ಮೂಲಕ ಜೀವನ ನಡೆಸಬೇಕಾಗಿದೆ. ಸಂವಿಧಾನವನ್ನು ಗೌರವಿಸುವುದರ ಜತೆಗೆ ಅದರಲ್ಲಿ ಅಡಗಿರುವ ಅಂಶಗಳನ್ನು ಪ್ರತಿಯೊಬ್ಬರು ಓದಿ ಅರ್ಥೈಸಿಕೊಂಡು ನಡೆದಾಗ ಮಾತ್ರ ಇಂತಹ ಆಚರಣೆಗೊಂದು ರೂಪ ಬರಲಿದೆ ಎಂದರು.ನಂತರ ತಾಪಂ ಇಒ ಚಂದ್ರಶೇಖರ ಕಂದಕೂರು ಮಾತನಾಡಿ, ಎಷ್ಟೋ ಜನರಿಗೆ ಸಂವಿಧಾನ ಎಂದರೆ ಏನು ಎನ್ನುವುದು ಗೊತ್ತಿಲ್ಲ. ಸಂವಿಧಾನವನ್ನು ಓದಿಕೊಂಡವರಾದರೂ ಒಂದಿಷ್ಟು ಸಮಯ ಬಿಡುವು ಮಾಡಿಕೊಂಡು ಸಂವಿಧಾನದ ಕುರಿತು ಪರಿಕಲ್ಪನೆ ನೀಡಿದಾಗ ಅವರಲ್ಲಿಯೂ ಪರಿವರ್ತನೆ ಬರಲಿದೆ ಎಂದು ತಿಳಿಸಿದರು.ಆಕರ್ಷಕ ಪಥಸಂಚಲನ: ಧ್ವಜಾರೋಹಣದ ನಂತರ ಪೊಲೀಸ್ ಇಲಾಖೆ ಹಾಗೂ ವಿವಿಧ ಶಾಲಾ, ಕಾಲೇಜು ವಿದ್ಯಾರ್ಥಿಗಳು ತಿರಂಗಾ ಬಣ್ಣದ ಸಮವಸ್ತ್ರ ತೊಟ್ಟು ಆಕರ್ಷಕ ಪಥಸಂಚಲನ ನಡೆಸಿದರು. ಪ್ರಾಥಮಿಕ, ಪ್ರೌಢ, ಪಿಯುಸಿ ಹಾಗೂ ಪದವಿ ಕಾಲೇಜುಗಳ ಮಕ್ಕಳು ಧ್ವಜಕ್ಕೆ ವಂದನೆ ಸಲ್ಲಿಸಿದರು. ಇದಕ್ಕೂ ಮೊದಲು ತಹಶೀಲ್ದಾರ ಮುರುಡಿ ಅವರಿಂದ ತೆರೆದ ವಾಹನದಲ್ಲಿ ರಾಷ್ಟçಧ್ವಜಕ್ಕೆ ವಂದಿಸಿದರು.ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ: ಶಾಲಾ, ಕಾಲೇಜು ಮಕ್ಕಳಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಡ ಹಾಗೂ ಪಿಯು ವಿಭಾಗದ ವಿಜೇತ ತಂಡಗಳಿಗೆ ತಾಲೂಕು ಆಡಳಿತದಿಂದ ಪ್ರಶಸ್ತಿ ವಿತರಿಸಲಾಯಿತು.ಸಾಧಕರಿಗೆ ಸನ್ಮಾನ: ಪಿಎಚ್‌ಡಿಗೆ ಪದವಿಗೆ ಭಾಜನರಾದ ಯಮನೂರಪ್ಪ ವಡಕಿ, ಪರ್ವಿನ್, ನಾಗೇಶ ಪೂಜಾರ, ಸಿಎ ಪರೀಕ್ಷೆಯಲ್ಲಿ ಉತ್ತಿರ್ಣಗೊಂಡ ವೀರೇಶ ಚೂಡಾಮಣಿ ಅವರನ್ನು ಸನ್ಮಾನಿಸಲಾಯಿತು.ಗ್ರೇಡ್-೨ ತಹಶೀಲ್ದಾರ ವಿ.ಎಚ್ ಹೊರಪೇಟೆ, ಸಿಪಿಐ ಜಗದೀಶ ಕೆ.ಜೆ, ಪಪಂ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ಶಿರಸ್ತೇದಾರ ಪರಶುರಾಮ, ಸ.ಪ.ಪೂ.ಕಾಲೇಜಿನ ಪ್ರಾಂಶುಪಾಲ ಮಾರೆಪ್ಪ ಎನ್, ಉಪನ್ಯಾಸಕ ಪಂಪಾರೆಡ್ಡಿ ಗಚ್ಚಿನಮನಿ ಇದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌