ಇಂದಿರಾ ಗಾಂಧಿ ಮುಕ್ತ ವಿವಿ ಕೋರ್ಸ್‌ಗಳಿಗೆ ಪ್ರವೇಶ ಆರಂಭ

KannadaprabhaNewsNetwork | Published : Jul 27, 2024 12:51 AM

ಸಾರಾಂಶ

ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯವು ಜುಲೈ-2024ರ ಸಾಲಿಗೆ ವಿವಿಧ ಪ್ರಮಾಣಪತ್ರ, ಡಿಪ್ಲೊಮಾ, ಪಿ.ಜಿ. ಡಿಪ್ಲೊಮಾ, ಪದವಿ ಮತ್ತು ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳಿಗೆ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ.

- ಎಂಬಿಎಗೆ ಪ್ರವೇಶ ಪರೀಕ್ಷೆ ಇಲ್ಲದೇ ನೇರ ಪ್ರವೇಶ: ಸಂಯೋಜಕ ಡಾ. ಕೆ.ಅಶೋಕ- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯವು ಜುಲೈ-2024ರ ಸಾಲಿಗೆ ವಿವಿಧ ಪ್ರಮಾಣಪತ್ರ, ಡಿಪ್ಲೊಮಾ, ಪಿ.ಜಿ. ಡಿಪ್ಲೊಮಾ, ಪದವಿ ಮತ್ತು ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳಿಗೆ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ.

ಶುಕ್ರವಾರ ಈ ಕುರಿತು ವಿವಿ ಸ್ಥಳೀಯ ಕಲಿಕಾ ಕೇಂದ್ರ ಸಂಯೋಜಕ ಡಾ. ಕೆ.ಅಶೋಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಂಬಿಎ ಕೋರ್ಸ್‌ಗೆ ಪ್ರವೇಶ ಪರೀಕ್ಷೆ ಇಲ್ಲದೇ ನೇರ ಪ್ರವೇಶ ನೀಡಲಾಗುತ್ತದೆ. ಎಸ್ಸಿ-ಎಸ್ಟಿ, ಒಬಿಸಿ ಹಾಗೂ ದೈಹಿಕ ವಿಕಲಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಶುಲ್ಕ ಮರುಪಾವತಿ ಸೌಲಭ್ಯವಿದೆ. ಆಸಕರು ವೆಬ್‌ಸೈಟಿಗೆ ಭೇಟಿ ನೀಡಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡುವ ಮೂಲಕ ತಮ್ಮ ಅಧ್ಯಯನ ಕೇಂದ್ರದ ಆಯ್ಕೆಯೊಂದಿಗೆ ಜುಲೈ 31ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲಿಸಬಹುದು ಎಂದರು.

ಹೆಚ್ಚಿನ ವಿವರಗಳಿಗೆ ಮೊ: 94493 37272 ಅಥವಾ ದೂ. 080-29607272 ಇಲ್ಲಿಗೆ ಸಂಪರ್ಕಿಸಬಹುದು. ಆಸಕ್ತ ವಿದ್ಯಾರ್ಥಿಗಳು ನಗರದ ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯದಲ್ಲಿರುವ ವಿಶ್ವವಿದ್ಯಾಲಯದ ಸ್ಥಳೀಯ ಕಲಿಕಾ ಕೇಂದ್ರ, ದೂ: 08192-223575, ಮೊ: 98446- 06353, 76760- 00262 ಕೂಡ ಸಂಪರ್ಕಿಸಬಹುದು ಎಂದು ಹೇಳಿದರು.

ಹೊಸ ಕೋರ್ಸ್‌ಗಳು:

ಜುಲೈ-2024ನೇ ಸಾಲಿನಿಂದ ಕಂಸ್ಟ್ರಕ್ಷನ್ ಮ್ಯಾನೇಜಮೆಂಟ್, ಲಾಜಿಸ್ಟಿಕ್ಸ್ ಅಂಡ್ ಸುಪ್ಲೈ ಚೈನ್ ಮ್ಯಾನೇಜಮೆಂಟ್, ಅಗ್ರಿಬ್ಯುಸಿನೆಸ್ ಮ್ಯಾನೇಜ್ಮೆಂಟ್, ಹೆಲ್ತ್ ಕೇರ್ ಅಂಡ್ ಹಾಸ್ಪಿಟಲ್ ಮ್ಯಾನೇಜಮೆಂಟ್ ವಿಷಯಗಳಲ್ಲಿ ಎಂಬಿಎ, ಡಿಸಾಸ್ಟರ್ ರಿಸ್ಕ್ ರಿಡಕ್ಷನ್ ಅಂಡ್ ಮ್ಯಾನೇಜಮೆಂಟ್, ರಿಹ್ಯಾಬಿಲಿಟೇಷನ್ ಸೈಕಾಲಜಿ ವಿಷಯಗಳಲ್ಲಿ ಸ್ನಾತಕೋತ್ತರ ಡಿಪ್ಲೊಮಾ, ತೋಟಗಾರಿಕೆ, ಕೃಷಿ ವೆಚ್ಚ ನಿರ್ವಹಣೆ ವಿಷಯಗಳಲ್ಲಿ ಡಿಪ್ಲೊಮಾ ಹಾಗೂ ಅರ್ಲಿ ಚೈಲ್ಡ್‌ಹುಡ್ ಸ್ಪೆಷಲ್ ಎಜುಕೇಷನ್- ಹಿಯರಿಂಗ್ ಇಂಪೈರ್‌ಮೆಂಟ್, ಇಂಟಲೆಕ್ಚುಯಲ್ ಡಿಸೆಬಿಲಿಟಿ ವಿಷಯಗಳಲ್ಲಿ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಹೊಸದಾಗಿ ಪ್ರಾರಂಭಿಸಲಾಗಿದೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಕಲಿಕಾ ಕೇಂದ್ರದ ನಿರ್ದೇಶಕ ಪ್ರೊ. ವೈ.ವೃಷಭೇಂದಪ್ಪ, ಸಹಾಯಕ ನಿರ್ದೇಶಕ ಡಾ.ಎಂ.ಷಣ್ಮುಗಂ ಇದ್ದರು.

- - - -26ಕೆಡಿವಿಜಿ41ಃ:

ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿ.ವಿ.ಯಡಿ ವಿವಿಧ ಕೋರ್ಸ್‌ಗಳಿಗೆ ಪ್ರವೇಶ ಆರಂಭವಾಗಿರುವ ಕುರಿತು ದಾವಣಗೆರೆಯಲ್ಲಿ ಡಾ. ಕೆ.ಅಶೋಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

Share this article