ಹದಿಹರೆಯದ ಮಕ್ಕಳ ಸಮಸ್ಯೆಗಳಿಗೆ ವೈದ್ಯರೊಂದಿಗೆ ಸಮಾಲೋಚನೆ ಅಗತ್ಯ: ಮಮತಾ ಗಟ್ಟಿ

KannadaprabhaNewsNetwork |  
Published : Dec 08, 2024, 01:20 AM IST
11 | Kannada Prabha

ಸಾರಾಂಶ

ಅವರು ಲೈಫ್ ನೆಸ್ಟ್ ಟ್ರಸ್ಟ್ ಮಂಗಳೂರು , ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಹರೇಕಳದ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಉಳ್ಳಾಲ

ಪ್ರೌಢಾವಸ್ಥೆಯಲ್ಲಿ ವಿದ್ಯಾರ್ಥಿನಿಯರು ಅನೇಕ ಸಮಸ್ಯೆಗಳನ್ನು ಎದುರಿಸುವುದು ಸಹಜ. ಈ ಕುರಿತು ಹೆತ್ತವರಲ್ಲಿ, ವೈದ್ಯರ ಜೊತೆಗೆ ಸಮಾಲೋಚಿಸಿದಾಗ ಪರಿಹಾರಗಳು ಸಿಗುತ್ತದೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಮಾದರಿ ಶಾಲೆ ಹರೇಕಳದ ವಿದ್ಯಾರ್ಥಿನಿಯರಿಗೆ ವೈದ್ಯರ ಜೊತೆಗೆ ಸಮಾಲೋಚನೆಗೆ ವೇದಿಕೆ ಕಲ್ಪಿಸಿಕೊಟ್ಟ ಲೈಫ್ ನೆಸ್ಟ್ ಸಂಸ್ಥೆಯ ಕಾರ್ಯ ಆರೋಗ್ಯಯುತ ಸಮಾಜಕ್ಕೆ ಪೂರಕ ಎಂದು ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ ಹೇಳಿದ್ದಾರೆ.

ಅವರು ಲೈಫ್ ನೆಸ್ಟ್ ಟ್ರಸ್ಟ್ ಮಂಗಳೂರು , ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಹರೇಕಳದ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ವಿದ್ಯಾರ್ಥಿನಿಯರಿಗಾಗಿ ಆರೋಗ್ಯ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆ ಸಂಚಾಲಕ ಕಡೆಂಜ ಸೋಮಶೇಖರ ಚೌಟ, ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಸಂತ್ ಎನ್. ಕೊಣಾಜೆ, ಶಾಲೆಯ ಮುಖ್ಯ ಶಿಕ್ಷಕಿ ಉಷಾಲತಾ ಎ,. ಲೈಫ್ ನೆಸ್ಟ್ ಟ್ರಸ್ಟ್ ಅಧ್ಯಕ್ಷ ಅಚಲ್ ಆರ್.ಎಂ., ಟ್ರಸ್ಟಿ ಯಶವಂತ್ ರಾವ್, ಕೆ.ಎಸ್ .ಹೆಗ್ಡೆ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ರಚನಾ ಎಸ್. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಕ್ಷೇಮ ಆಸ್ಪತ್ರೆಯ ಮನಶಾಸ್ತ್ರ ವಿಭಾಗದ ತಜ್ಞ ಡಾ. ಶ್ರೀನಿವಾಸ್ ಭಟ್, ಡಾ. ನಿವೇದಾ ರಮೇಶ್ ಮತ್ತು ಆಗ್ನಿತಾ ಐಮನ್ ಉಪಸ್ಥಿತರಿದ್ದರು.

ಶಬ್ದ ಮಾಲಿನ್ಯದಿಂದ ಆಗುವ ಸಮಸ್ಯೆಯ ಬಗ್ಗೆ ಕೆ.ಎಸ್ .ಹೆಗ್ಡೆ ಆಸ್ಪತ್ರೆಯ ಇಎನ್‌ಟಿ ವಿಭಾಗದ ಡಾ. ಶ್ರವಣ್ ಆಳ್ವ ಮಾಹಿತಿ ನೀಡಿದರು. ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ತ್ಯಾಗಂ ಸ್ವಾಗತಿಸಿ , ನಿರೂಪಿಸಿದರು.

PREV

Recommended Stories

ಕಾಂಗ್ರೆಸ್ ಸರ್ಕಾರದಿಂದ ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಒತ್ತು: ಶಾಸಕ ರಮೇಶ್‌ ಬಂಡಿಸಿದ್ದೇಗೌಡ
ಸರ್ಕಾರಿ ಶಾಲೆ ಉನ್ನತಿಗೆ ಎಲ್ಲರ ಸಹಕಾರ ಅಗತ್ಯ