ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ ಹಿಂದೂ ಸಾಮ್ರಾಟ ವೀರ ಶಿವಾಜಿಯ ಆದರ್ಶಗಳನ್ನು ಇಂದಿನ ಪೀಳಿಗೆಯ ಜನ ಅಳವಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ ತಿಳಿಸಿದರು.ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಗೌರಿಬಿದನೂರು ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜನೆ ಮಾಡಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ 394ನೇ ಜಯಂತಿ ಕಾರ್ಯಕ್ರಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಭಾರತ ದೇಶವನ್ನು ವಿದೇಶಿಯರು ಆಳ್ವಿವಿಕೆಯ ಸಮಯದಲ್ಲಿ ಹಾಗೂ ಭಾರತ ಸಂಸ್ಕೃತಿ ನಶಿಸುವ ವೇಳೆ ಮಹರಾಷ್ಟ್ರದ ಸ್ಥಳಿಯ ಕಾಡು ಪ್ರದೇಶಗಳಲ್ಲಿ ಸೈನ್ಯ ಕಟ್ಟಿ ನಮ್ಮ ಸಂಸ್ಕೃತಿ ಉಳಿವಿಗಾಗಿ ಹೋರಾಡಿದ ಸಾಮ್ರಾಟರಲ್ಲಿ ಮಹಾನ್ ವೀರ ಛತ್ರಪತಿ ಶಿವಾಜಿಯು ಪ್ರಮುಖರು. ಉತ್ತಮ ಯುದ್ಧ ನೀತಿಗಳನ್ನು ಅಳವಡಿಸಿಕೊಂಡು ಖ್ಯಾತರು ಅದರಲ್ಲೂ ಗೇರಿಲ್ಲಾ ಯುದ್ಧಕ್ಕೆ ಹೆಸರಾದ ಛತ್ರಪತಿ ಶಿವಾಜಿಯು ಭಾರತಾಂಬೆಯ ನಾಡುನುಡಿ ಬೆಳವಣಿಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಕಾರಣಿಭೂತರಾದವರು ಶಿವಾಜಿ. ಸೂಕ್ತ ಆಡಳಿತ ವ್ಯವಸ್ಥೆಗಾಗಿ ಹಲವು ಸುಧಾರಣೆಗಳನ್ನು ಮೂರುವರೆ ಶತಕಗಳ ಹಿಂದೆಯೇ ತಂದಿದ್ದರು. ಅವರು ಭಾರತ ದೇಶ ಕಂಡಂತ ಅಪ್ರತಿಮ ರಣವೀರ ತಾರೆ ಎಂದು ಬಣ್ಣಿಸಿದರು.
ತಾಯಿ ಜೀಜಾಬಾಯಿಯು ಹೇಳುತ್ತಿದ್ದ ಮಹಾಭಾರತ, ರಾಮಾಯಣಗಳ ಪೌರಾಣಿಕ ಕಥೆಗಳಿಂದ ಪ್ರೇರಣೆಗೊಂಡ ಶಿವಾಜಿಯ ಮೊದಲನೇ ಗುರುವೇ ತಾಯಿಯಾಗಿದ್ದರು. ತಂದೆಯಿಂದಲೇ ಯುದ್ಧ ಕೌಶಲ್ಯವನ್ನು ಅರಿತಿದ್ದ ಅವರು ತಾಯಿಯ ಆದೇಶವನ್ನು ಪಾಲಿಸಿಕೊಂಡು ಬರಬೇಕೆಂದು ಸ್ವತಂತ್ರವಾದ ರಾಜ್ಯವನ್ನು ಕಟ್ಟಬೇಕೆಂಬ ಆಲೋಚನೆಯನ್ನು ಮಾಡಿ, ಅದನ್ನು ಸಾದಿಸಿದವರು ಎಂದರು. ಮೊಘಲರಿಗೆ ಪಿರಂಗಿಗಳಿದ್ದವು ದೊಡ್ಡ ದೊಡ್ಡ ಸೈನ್ಯವಿತ್ತು. ಆದರೆ ಗುರು ದಾದಾಜಿ ಕೊಂಡದೇವನಿಂದ ಯುದ್ಧ ತರಬೇತಿ, ದೇವಿಯಿಂದ ಪಡೆದಂತಹ ಒಂದು ಖಡ್ಗ, ಜೊತೆಯಿದ್ದ ನಂಬಿಕಸ್ಥ ಕೆಲವೇ ಕೆಲವು ನೂರಾರು ಜನರ ಸಣ್ಣ ಸೈನ್ಯವನ್ನು ಕಟ್ಟಿಕೊಂಡು ಇಡೀ ಆದಿಲ್ ಶಾಹಿ ಮೊಘಲರ ಔವರಂಗಜೇಬನನ್ನು ಎದುರಿಸಿದ್ದನ್ನು ಅದು ಪವಾಡ ಎನ್ನಬಹುದು. ಅಂತ ಸೈನ್ಯವನ್ನು ಎದುರಿಸುವ ಸಾಧ್ಯವೇ ಇಲ್ಲ ಎದುರಿಸಿ ಸ್ವತಂತ್ರವಾದ ಸಾಮ್ರಾಜ್ಯವನ್ನು ಕಟ್ಟಿ ಭರತ ಖಂಡದಲ್ಲಿ ಹಾಗೂ ವಿಶ್ವದಲ್ಲಿ ಶಿವಾಜಿ ಮಹಾರಾಜ ಅಂದರೆ ಅತ್ಯಂತ ಶೌರ್ಯವಂತ. ಭಾರತ ಕಂಡ ಧೃವತಾರೆ ಎನ್ನುತ್ತಾರೆ. ಸಾಹಸ ಎಂಬ ಹೆಸರಿನ ಮತ್ತೊಂದು ಹೆಸರೇ ಶಿವಾಜಿ ಮಹಾರಾಜ್ ಯುದ್ಧಕ್ಕೆ ಪ್ರೇರಣೆ ವೀರ ಶಿವಾಜಿಯಾಗಿದ್ದಾರೆಂದರು.ಶಿವಾಜಿ ಮಹಾರಾಜರ ಆಡಳಿತ ನಿಜಕ್ಕೂ ಅರ್ಥಪೂರ್ಣ 1674 ರಲ್ಲಿ ಅವರಿಗೆ ಪಟ್ಟಾಭಿಷೇಕವಾಯಿತು 1680ರವರೆಗೂ ಅವರು ರಾಜ್ಯಭಾರವನ್ನು ಮಾಡಿದರು. ಅದಕ್ಕಿಂತ ಮುಂಚೆಯೂ ಸಹ ಸರ್ಕಾರ ಇದ್ದರೂ ಅಧಿಕೃತವಾಗಿ ಅವರಿಗೆ ಪಟ್ಟಾಭಿಷೇಕ ವಾಗಿರಲಿಲ್ಲ, ಧರ್ಮದ ಮಾರ್ಗದಲ್ಲಿ ರಾಜ್ಯಭಾರವನ್ನು ಮಾಡಿದರು. ಹಿಂದೂ ಸಾಮ್ರಾಟ್ ಸಾಮ್ರಾಜ್ಯಕ್ಕೆ ಅಡಿಪಾಯನ ಹಾಕಿದರು. ಶಿವಾಜಿಯ ರೀತಿಯಲ್ಲಿ ಪೇಶ್ವೆಗಳು ಕೂಡ 150 ವರ್ಷ ಹೋರಾಟ ಮಾಡಿದರೂ ಸಹ ಶಿವಾಜಿ ಇಂದಿಗೂ ಖ್ಯಾತಿಯನ್ನು ಪಡೆದಿದ್ದಾರೆ ಇಂದು ಮರಾಠರು ಮತ್ತು ನಾವು ಕನ್ನಡಿಗರು ಎಲ್ಲರೂ ಹಾಲು ಜೇನಿನಂತೆ ಜೀವನ ಮಾಡುತ್ತಿದ್ದೇವೆ. ಯಾವುದೇ ಕೆಲಸವನ್ನು ಪರಸ್ಪರ ಸಹಕಾರದೊಂದಿಗೆ ಹೋಗುತ್ತಿದ್ದೇವೆ ಎಂದು ತಿಳಿಸಿದರು. ತಹಸೀಲ್ದಾರ್ ಮಹೇಶ್ ಪತ್ರಿ ಮಾತನಾಡಿ, ಶಿವಾಜಿಯವರ ಬಾಲ್ಯದ ಜೀವನ ರಾಮಾಯಣ ಮಹಾಭಾರತ ಪುರಾಣ ಕಥೆಗಳ ಪ್ರೇರಣೆಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮರಾಠ ಸಮಾಜದ ಮುಖಂಡ ರಣಪ್ರತಾಪ್ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಶಿವಾಜಿ ಮಹಾರಾಜರ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಲವಾರು ಮರಾಠ ಸಮುದಾಯದ ಮುಖಂಡರು ಹಾಗೂ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿದ್ದರು.