ಬದುಕಿನಲ್ಲಿ ಶರಣರ ವಚನ ರೂಢಿಸಿಕೊಳ್ಳಿ

KannadaprabhaNewsNetwork |  
Published : Aug 30, 2025, 01:02 AM IST
 ಅಥಣಿ | Kannada Prabha

ಸಾರಾಂಶ

ಬಸವಾದಿ ಶರಣರು ನೀಡಿದ ವಚನ ಬದುಕಿನಲ್ಲಿ ರೂಢಿಸಿಕೊಳ್ಳುವ ಮೂಲಕ ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳಬೇಕು

ಕನ್ನಡಪ್ರಭ ವಾರ್ತೆ ಅಥಣಿ

ಬಸವಾದಿ ಶರಣರು ನೀಡಿದ ವಚನ ಬದುಕಿನಲ್ಲಿ ರೂಢಿಸಿಕೊಳ್ಳುವ ಮೂಲಕ ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳಬೇಕು ಎಂದು ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ನೀಡುವ ಪ್ರತಿಷ್ಠಿತ ಸುವರ್ಣ ಕನ್ನಡಿಗ-2025 ಪ್ರಶಸ್ತಿ ಪುರಸ್ಕೃತ ಸಾಹಿತಿ ಅಪ್ಪಾಸಾಹೇಬ ಅಲಿಬಾದಿ ಹೇಳಿದರು.

ಶ್ರೀ ಮುರುಗೇಂದ್ರ ಶಿವಯೋಗಿ ವಿಶ್ವಸ್ಥ ವಿದ್ಯಾಪೀಠ ಹಾಗೂ ಮಾತೋಶ್ರೀ ಗೌರಮ್ಮ ಚೆನ್ನಪ್ಪ ಗಂಗಾಧರ ಪ್ರತಿಷ್ಠಾನ ಸಂಯುಕ್ತ ಆಶ್ರಯದಲ್ಲಿ ಲಿಂ.ಚನ್ನಬಸವ ಮಹಾಸ್ವಾಮಿಗಳ ಸ್ಮರಣೋತ್ಸವ, ಕಲಿಕಾ ಸಾಮಗ್ರಿಗಳ ವಿತರಣೆ ಹಾಗೂ ನೂತನ ವರ್ಷದ ಪ್ರವೇಶಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ವಿದ್ಯಾರ್ಥಿಗಳು ಪಠ್ಯಪುಸ್ತಕದ ಜ್ಞಾನದ ಜೊತೆಗೆ ಮಾನವೀಯ ಮೌಲ್ಯಗಳನ್ನು ಮತ್ತು ನೈತಿಕ ಶಿಕ್ಷಣವನ್ನು ರೂಢಿಸಿಕೊಳ್ಳುವುದು ಅವಶ್ಯಕ ಎಂದರು. ಇಂದಿನ ವಿದ್ಯಾರ್ಥಿಗಳು ಶಿವಶರಣರ ತತ್ವ ಸಿದ್ಧಾಂತಗಳನ್ನು ಆಚಾರ, ವಿಚಾರಗಳನ್ನು ಅರಿಯಬೇಕು. ಅವರ ವಚನಗಳನ್ನು ಪಚನ ಮಾಡಿಕೊಂಡು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಬದುಕು ಪಾವನ ಮಾಡಿಕೊಳ್ಳಬೇಕು. ಅದಕ್ಕಾಗಿ ಶಿಕ್ಷಣದಲ್ಲಿ ನೈತಿಕತೆ ಜಾರಿಯಲ್ಲಿ ಬರಲಿ. ತಮ್ಮ ಪಠ್ಯದ ಜೊತೆಗೆ ವಿದ್ಯಾರ್ಥಿಗಳು ಸಾಹಿತ್ಯದ ಬಗ್ಗೆ ಒಲವು ಮೂಡಿಸಿಕೊಳ್ಳಬೇಕು. ಮೊಬೈಲ್ ಬಳಕೆ ಒಳ್ಳೆಯದಕ್ಕೆ ಉಪಯೋಗ ಮಾಡಬೇಕು. ಪುಸ್ತಕ ಓದುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು.

ಹೊನವಾಡದ ಬಾಬುರಾವ ಮಹಾರಾಜರು ಮಾತನಾಡಿ, ಗುರಿ ಇಲ್ಲದ ಜೀವನ ಗರಿಗಿಲ್ಲದ ಹಕ್ಕಿಯಂತೆ ವಿದ್ಯಾರ್ಥಿಗಳು ಬದುಕಿನಲ್ಲಿ ಒಂದು ಗುರಿ ಇಟ್ಟುಕೊಂಡು ನಿರಂತರ ಕಠಿಣ ಅಭ್ಯಾಸ ಮಾಡಿದಾಗ ಸಾಧನೆ ಮಾಡಲು ಸಾಧ್ಯ. ಶಿಕ್ಷಣ ಪಡೆದು ಸಾಧನೆ ಮಾಡಿದ ನಂತರ ಸಮಾಜಮುಖಿ ಕಾರ್ಯಗಳನ್ನು ಮಾಡಿ ಸಮಾಜಮುಖಿ ಸೇವೆಗಳನ್ನು ಸಲ್ಲಿಸುವ ಮೂಲಕ ನಮ್ಮ ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಿವಯೋಗಿ ಮಂಗಸೂಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬರ ಬದುಕಿಗೆ ಶಿಕ್ಷಣ ಬಹಳ ಅಗತ್ಯ. ಶಿಕ್ಷಣವನ್ನು ಪಡೆದು ನಾವು ಉನ್ನತವಾದ ಹುದ್ದೆಗೆ ಹೋದಾಗ ಮಾನವೀಯ ಸಂಬಂಧಗಳನ್ನು ಮರೆಯಬಾರದು. ಶಿಕ್ಷಣದ ಜೊತೆಗೆ ಬದುಕಿನಲ್ಲಿ ನೈತಿಕತೆ ರೂಢಿಸಿಕೊಳ್ಳುವಂತೆ ಸಲಹೆ ನೀಡಿದ ಅವರು, ಲಿಂ.ಚನ್ನಬಸವ ಸ್ವಾಮೀಜಿ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಗಚ್ಚಿನಮಠದಲ್ಲಿ ಮಾಡಿದ ಧಾರ್ಮಿಕ ಮತ್ತು ಸಾಮಾಜಿಕ ಸೇವೆಗಳ ಬಗ್ಗೆ ಸ್ಮರಿಸಿದರು. ನಂತರ ಐಟಿಐ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು. ನೂತನ ವರ್ಷದ ವಿದ್ಯಾರ್ಥಿಗಳಿಗೆ ಪುಷ್ಪ ನೀಡಿ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ಬ್ರಹ್ಮಕುಮಾರಿ ಪ್ರಿಯಾಂಕ, ಪರಗೌಡ ಪಾಟೀಲ, ಅಶೋಕ್ ರೊಟ್ಟಿ, ಕೆ ಎಲ್ ಕುಂದರಗಿ, ಎಸ್ ಐ ದುಗ್ಗಾಣಿ, ನೀರಾ ಗೋಣಿ ಉಪಸ್ಥಿತರಿದ್ದರು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮಲ್ಲಿಕಾರ್ಜುನ ಗಂಗಾಧರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುನಿತಾ ದೇವಮಾನೆ ನಿರೂಪಿಸಿದರು. ಮಲ್ಲಮ್ಮ ಕೋಹಳ್ಳಿ ವಂದಿಸಿದರು.

PREV

Recommended Stories

ಜಿಎಸ್ಟಿ ಸ್ಲ್ಯಾಬ್‌ ಕಡಿತದಿಂದ 2.5 ಲಕ್ಷ ಕೋಟಿ ರು. ನಷ್ಟ
ಯುದ್ಧಪೀಡಿತ ಉಕ್ರೇನಿಯರಿಗೆ ಆರ್ಟ್ ಆಫ್ ಲಿವಿಂಗ್ ಆಸರೆ