ಕನ್ನಡಪ್ರಭ ವಾರ್ತೆ ಯಾದಗಿರಿ
ವೈಯಕ್ತಿಕ ಗುರುತಿನ ದಾಖಲೆ, ವಿಳಾಸದೊಂದಿಗೆ ಹತ್ತಿರದ ಆಧಾರ್ ನೋಂದಣಿ ಅಥವಾ ಆನ್ ಲೈನ್ ಕೇಂದ್ರದಲ್ಲಿ ಯುಐಡಿಎಐ ಸಂಸ್ಥೆ ಅಭಿವೃದ್ಧಿಪಡಿಸಿರುವ ತಂತ್ರಾಂಶದಲ್ಲಿ ನವೀಕರಣಗೊಳಿಸುವಂತೆ ಜಿಲ್ಲಾಧಿಕಾರಿ ಡಾ. ಸುಶೀಲಾ ತಿಳಿಸಿದ್ದಾರೆ.ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಆಧಾರ್ ದಾಖಲಾತಿ ಬಲಪಡಿಸಲು ಹಾಗೂ ಆಧಾರ್ ಸಂಬಂಧಿಸಿದ ಕಾರ್ಯಗಳನ್ನು ಸಂಯೋಜಿಸಲು ಜಿಲ್ಲಾಮಟ್ಟದ ಆಧಾರ ಸಮಿತಿ ರಚಿಸಿ ಮಾತನಾಡಿದರು.
ಆಧಾರ್ ಕಾರ್ಡ್ ಪಡೆದು 10 ವರ್ಷವಾಗಿದ್ದರೆ ಅಪ್‌ಡೇಟ್ ಮಾಡಿಸಬೇಕಿದೆ. ಆಧಾರ್ ಕಾರ್ಡ್ ಪಡೆದ ವ್ಯಕ್ತಿಯ ಬಗ್ಗೆ ಮಾಹಿತಿ ಅಪ್‌ಡೇಟ್ ಮತ್ತು ದುರುಪಯೋಗ ತಪ್ಪಿಸುವ ಉದ್ದೇಶ ಎಂದು ಜಿಲ್ಲಾಧಿಕಾರಿ ತಿಳಿಸಿದರು.5 ವರ್ಷ ಮೇಲ್ಪಟ್ಟು 7ವರ್ಷದ ಒಳಗಿನ ಎಲ್ಲಾ ಮಕ್ಕಳ ಬಯೋಮೇಟ್ರಿಕ್, ಮೊಬೈಲ್ ಸಂಖ್ಯೆ ಸಹ ನವೀಕರಣಗೊಳಿಸಬೇಕು. ಪ್ರತಿ 10 ವರ್ಷಕ್ಕೊಮ್ಮೆ ಬಯೋಮೆಟ್ರಿಕ್ ನವೀಕರಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಹೊಸದಾಗಿ ಆಧಾರ್ ನೋಂದಣಿಗೆ ಮತ್ತು 5 ವರ್ಷ ಮೇಲ್ಪಟ್ಟು 7ವರ್ಷದ ಒಳಗಿನ ಎಲ್ಲಾ ಮಕ್ಕಳ ಬಯೋಮೇಟ್ರಿಕ್ ನವೀಕರಣ ಉಚಿತ. ಉಳಿದಂತೆ ಹೆಸರು, ಲಿಂಗ, ವಯಸ್ಸು, ವಿಳಾಸ ಹಾಗೂ ಮೊಬೈಲ್ ನಂಬರ ವಿವರ (ಡೆಮೋಗ್ರಾಫಿಕ್) ನವೀಕರಣಕ್ಕೆ 50ರು. ಮತ್ತು ಕಣ್ಣು, ಮುಖ, ಕೈ ಬೆರಳುಗಳ ವಿವರ (ಬಯೋಮೆಟ್ರಿಕ್) ನವೀಕರಣಕ್ಕೆ 100ರು. ಸೇವಾ ಶುಲ್ಕ ಇದ್ದು, ಸಾರ್ವಜನಿಕರು ಇದಕ್ಕಿಂತ ಹೆಚ್ಚಿನ ಶುಲ್ಕಪಾವತಿಸಬೇಕಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ ಸಂಗೀತಾ, ಜಿ.ಪಂ. ಉಪ ಕಾರ್ಯದರ್ಶಿ ವಿಜಯಕುಮಾರ್ ಮಡ್ಡೆ, ಯುಐಡಿಎಐ ಸಂಸ್ಥೆ ಮ್ಯಾನೇಜರ್ ರಿಕೇಶ ಕುಮಾರ, ಸಹಾಯಕ ಅಂಚೆ ಅಧೀಕ್ಷಕ ಕೃಷ್ಣ ಮೋಹಿತೆ, ಡಿಡಿಪಿಯು ಚನ್ನಬಸಪ್ಪ ಕುಳಗೇರಿ, ಶಿರಸ್ತೇದಾರ ಸುನಿತಾ ಪಿ ಹುಕ್ಕೇರಿ, ಜಿಲ್ಲಾ ಆಧಾರ ಸಂಯೋಜಕ ಪ್ರವೀಣ ಕುಮಾರ ಕುಲಕರ್ಣಿ, ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.
--------ಫೋಟೊ: 12ವೈಡಿಆರ್8: ಆಧಾರ್ ದಾಖಲಾತಿ ಬಲಪಡಿಸಲು, ಆಧಾರ್ ಸಂಬಂಧಿಸಿದ ಕಾರ್ಯಗಳನ್ನು ಸಂಯೋಜಿಸುವ ಸಲುವಾಗಿ, ಯಾದಗಿರಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಆಧಾರ ಸಮಿತಿ ಸಭೆ ನಡೆಯಿತು.
---000---