ಚಂದ್ರಯಾನ ಯಶಸ್ಸಿನ ನಂತರ ಪ್ರಪಂಚವೇ ಭಾರತದತ್ತ ತಿರುಗಿ ನೋಡುತ್ತಿದೆ-ದಾರುಕೇಶ

KannadaprabhaNewsNetwork | Published : Dec 10, 2023 1:30 AM

ಸಾರಾಂಶ

ಚಂದ್ರಯಾನ ಯಶಸ್ಸಿನ ನಂತರ ಪ್ರಪಂಚವೇ ಭಾರತದತ್ತ ತಿರುಗಿ ನೋಡುತ್ತಿದೆ ಎಂದು ಚಂದ್ರಯಾನ -2 ಉಡಾವಣೆ ಯಶಸ್ವಿಗೊಳಿಸಿದ ಇಸ್ರೋ ತಂಡದ ಪ್ರಮುಖ ಸದಸ್ಯ, ವಿಜ್ಞಾನಿ ಡಾ.ಬಿ.ಎಚ್.ಎಂ. ದಾರುಕೇಶ ಹೇಳಿದರು. ಕಲಿಕಾ ವಿಷಯವಾಗಿ ವಿಜ್ಞಾನದ ಮಹತ್ವ ಅಪಾರ. ಜಗತ್ತಿನಲ್ಲಿನ ಎಲ್ಲ ಹುದ್ದೆಗಳನ್ನು ವಿದ್ಯಾರ್ಥಿಗಳು ಪಟ್ಟಿಮಾಡಿ, ಆ ವಿಷಯದ ಬಗ್ಗೆ ಒಂದು ಪುಟ ಟಿಪ್ಪಣಿ ಮಾಡಿ, ನಂತರ ಸಾಧನೆ ಮಾಡಿ, ಯಶಸ್ಸು ನಿಮ್ಮನ್ನು ಹಿಂಬಾಲಿಸುತ್ತದೆ. ವಿಜ್ಞಾನ ಇಂದು ತುಂಬ ಮುಂದುವರಿದಿದೆ. ಚಂದ್ರಯಾನ ಯಶಸ್ಸಿನ ನಂತರ ಪ್ರಪಂಚವೇ ಭಾರತದತ್ತ ತಿರುಗಿ ನೋಡುತ್ತಿದೆ. ಭೂಮಿ ನಮಗೆ ತೊಟ್ಟಿಲು ಇದ್ದಂತೆ. ಬದುಕ ಬೇಕಾದರೆ ಕೆಳಗಿಳಿಯಲೇಬೇಕು. ಭವಿಷ್ಯದಲ್ಲಿ ಮಂಗಳಗ್ರಹ, ಚಂದ್ರನಲ್ಲಿ ಮಾನವನ ವಾಸ್ತವ್ಯದ ಅನಿವಾರ್ಯತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕೊಪ್ಪಳ

ಚಂದ್ರಯಾನ ಯಶಸ್ಸಿನ ನಂತರ ಪ್ರಪಂಚವೇ ಭಾರತದತ್ತ ತಿರುಗಿ ನೋಡುತ್ತಿದೆ ಎಂದು ಚಂದ್ರಯಾನ -2 ಉಡಾವಣೆ ಯಶಸ್ವಿಗೊಳಿಸಿದ ಇಸ್ರೋ ತಂಡದ ಪ್ರಮುಖ ಸದಸ್ಯ, ವಿಜ್ಞಾನಿ ಡಾ.ಬಿ.ಎಚ್.ಎಂ. ದಾರುಕೇಶ ಹೇಳಿದರು.ನಗರದ ಕಿಡದಾಳ ಸಮೀಪದ ಶ್ರೀಶಾರದಾ ಇಂಟರ್‌ ನ್ಯಾಷನಲ್‌ ಶಾಲೆಯ ಶ್ರೀಶಾರದಾ ಚಿಣ್ಣರ ಲೋಕ ಹಾಗೂ ಶ್ರೀಶಾರದಾ ಪಿಯು ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಜರುಗಿದ ಶ್ರೀಶಾರದಾ ಪರ್ವ ವಾರ್ಷಿಕೋತ್ಸವ ಪ್ರಯುಕ್ತ ಆಯೋಜಿಸಿದ್ದ ವಿದ್ಯಾರ್ಥಿಗಳೊಂದಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯದ ಕುರಿತು ಸಂವಾದ ‘ಪರಿಪ್ರಶ್ನ’ ಕಾರ್ಯಕ್ರಮ ಉದ್ದೇಶೀಸಿ ಅವರು ಮಾತನಾಡಿದರು.ಕಲಿಕಾ ವಿಷಯವಾಗಿ ವಿಜ್ಞಾನದ ಮಹತ್ವ ಅಪಾರ. ಜಗತ್ತಿನಲ್ಲಿನ ಎಲ್ಲ ಹುದ್ದೆಗಳನ್ನು ವಿದ್ಯಾರ್ಥಿಗಳು ಪಟ್ಟಿಮಾಡಿ, ಆ ವಿಷಯದ ಬಗ್ಗೆ ಒಂದು ಪುಟ ಟಿಪ್ಪಣಿ ಮಾಡಿ, ನಂತರ ಸಾಧನೆ ಮಾಡಿ, ಯಶಸ್ಸು ನಿಮ್ಮನ್ನು ಹಿಂಬಾಲಿಸುತ್ತದೆ. ವಿಜ್ಞಾನ ಇಂದು ತುಂಬ ಮುಂದುವರಿದಿದೆ. ಚಂದ್ರಯಾನ ಯಶಸ್ಸಿನ ನಂತರ ಪ್ರಪಂಚವೇ ಭಾರತದತ್ತ ತಿರುಗಿ ನೋಡುತ್ತಿದೆ. ಭೂಮಿ ನಮಗೆ ತೊಟ್ಟಿಲು ಇದ್ದಂತೆ. ಬದುಕ ಬೇಕಾದರೆ ಕೆಳಗಿಳಿಯಲೇಬೇಕು. ಭವಿಷ್ಯದಲ್ಲಿ ಮಂಗಳಗ್ರಹ, ಚಂದ್ರನಲ್ಲಿ ಮಾನವನ ವಾಸ್ತವ್ಯದ ಅನಿವಾರ್ಯತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.ಬಾಹ್ಯಾಕಾಶ ವಿಜ್ಞಾನಿ ಆಗಲು ಯಾವುದೇ ಫ್ಯಾನ್ಸಿ ಕೋಸ್‌ರ್ಗಳ ಅವಶ್ಯಕತೆಯಿಲ್ಲ. ಮೂಲ ವಿಜ್ಞಾನ ವಿಷಯದ ಪದವಿಯ ಮೂಲಕ ಅವಕಾಶ ಪಡೆಯಬಹುದು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.ನಂತರ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ವಿವರಣೆ ನೀಡಿದರು. ಶ್ರೀಶಾರದಾ ಇಂಟರ್‌ ನ್ಯಾಷನಲ್ ಶಾಲೆಯ 10ನೇ ತರಗತಿಯ ವಿದ್ಯಾರ್ಥಿ ಸಮನ್ಯು ‘ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ ಭಾರತದ ಮುಂದಿನ ಭವಿಷ್ಯ ಏನು? ಮತ್ತು ಕೃತಕ ಬುದ್ಧಿಮತ್ತೆಯ ಬಳಕೆಯು ಮಾನವನಿಗೆ ಹಾನಿಕಾರಕವಾಗಿದೆಯೇ? ಎನ್ನುವ ಪ್ರಶ್ನೆಯು ಪ್ರಥಮ ಬಹುಮಾನ ಪಡೆಯಿತು.ಕಾರ್ಯಕ್ರಮದಲ್ಲಿ ಹಲವಾರು ಸ್ಪರ್ಧೆಗಳಲ್ಲಿ ಜಯ ಗಳಿಸಿದ ವಿದ್ಯಾರ್ಥಿಗಳಿಗೆ ಮುಖ್ಯಅತಿಥಿಗಳು ಬಹುಮಾನ ವಿತರಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ವಿ.ಆರ್‌. ಪಾಟೀಲ್, ಪ್ರಧಾನ ಕಾರ್ಯದರ್ಶಿ ಎಸ್‌.ಆರ್‌. ಪಾಟೀಲ್, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕಿರಣ ಪಾಟೀಲ್‌, ನಗರದ ಪ್ರಮುಖ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು, ಸಂಸ್ಥೆಯ ಎಲ್ಲ ಪದಾಧಿಕಾರಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

ಇಂದು ಶಾರದಾ ಪರ್ವದಲ್ಲಿ ನಟ ಶರಣ್ ಭಾಗಿ:ನಗರದ ಕಿಡದಾಳ ಸಮೀಪದ ಶ್ರೀ ಶಾರದಾ ಇಂಟರ್ ನ್ಯಾಷನಲ್ ಶಾಲೆ, ಶ್ರೀ ಶಾರದಾ ಚಿಣ್ಣರ ಲೋಕ ಹಾಗೂ ಶ್ರೀ ಶಾರದಾ ಪಿಯು ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಶ್ರೀ ಶಾರದಾ ಪರ್ವ-2023’ ಶೀರ್ಷಿಕೆಯಲ್ಲಿ ವಾರ್ಷಿಕೋತ್ಸವವನ್ನು ಡಿ.10ರಂದು ಹಮ್ಮಿಕೊಳ್ಳಲಾಗಿದೆ.

ಮನರಂಜನೆ ಮತ್ತು ಶೈಕ್ಷಣಿಕ ವೈಭವದ ಮಹೋತ್ಸವಕ್ಕೆ ಮುಖ್ಯಅತಿಥಿಯಾಗಿ ಕನ್ನಡ ಚಲನಚಿತ್ರ ರಂಗದ ಖ್ಯಾತ ನಟ, ನಿರ್ಮಾಪಕ ಶರಣ್ ಆಗಮಿಸಿ ಕಾರ್ಯಕ್ರಮಕ್ಕೆ ಮೆರಗು ನೀಡಲಿದ್ದಾರೆ. ಎಲ್ಲರೂ ಆಗಮಿಸಿ ಮಕ್ಕಳ ಕಲೆಯನ್ನು ಪ್ರೋತ್ಸಾಹಿಸಲು ಶಾಲೆಯ ಕಾರ್ಯಕಾರಿಣಿ ನಿರ್ದೇಶಕ ಎಂ.ಶಿವಪ್ರಕಾಶ್, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕಿರಣ್ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this article