ವಿದ್ಯಾರ್ಥಿಗಳ ಅನುಭವಕ್ಕೆ ಕೃಷಿ ಚಟುವಟಿಕೆ ಪೂರಕ

KannadaprabhaNewsNetwork |  
Published : Apr 05, 2024, 01:04 AM IST
4ಕಕೆೆಡಿಯು2ೆೆಎ | Kannada Prabha

ಸಾರಾಂಶ

ವಿದ್ಯಾರ್ಥಿಗಳು ರೈತರೊಂದಿಗೆ ಬೆರೆತು ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಮೂಲಕ ಕೃಷಿ ಅನುಭವ ಪಡೆಯಬೇಕು ಎಂದು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್.ಸಿ ಜಗದೀಶ್ ಹೇಳಿದರು.

ಪಿಳ್ಳೇನಹಳ್ಳಿಯಲ್ಲಿ ಕೃಷಿ ಮೇಳದಲ್ಲಿ ಕುಲಪತಿ ಡಾ.ಆರ್.ಸಿ ಜಗದೀಶ್ ಅಭಿಮತಕನ್ನಡ ಪ್ರಭ ವಾರ್ತೆ, ಕಡೂರು

ವಿದ್ಯಾರ್ಥಿಗಳು ರೈತರೊಂದಿಗೆ ಬೆರೆತು ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಮೂಲಕ ಕೃಷಿ ಅನುಭವ ಪಡೆಯಬೇಕು ಎಂದು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್.ಸಿ ಜಗದೀಶ್ ಹೇಳಿದರು. ಕೆಳದಿ ಶಿವಪ್ಪ ನಾಯಕ ಕೃಷಿ ಹಾಗು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗದಡಿ ಬರುವ ತೋಟಗಾರಿಕಾ ಮಹಾವಿದ್ಯಾಲಯ ಮೂಡಿಗೆರೆ ಮತ್ತು ಕೃಷಿ ಇಲಾಖೆ, ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆ, ಸ್ಥಳೀಯ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಕಡೂರು ತಾಲೂಕಿನ ಪಿಳ್ಳೆನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಕೃಷಿ ವಸ್ತು ಪ್ರದರ್ಶನ ಮೇಳ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಕೃಷಿ ಕಾರ್ಯಾನುಭವದಲ್ಲಿ ರೈತರೊಂದಿಗೆ ವಿದ್ಯಾರ್ಥಿಗಳು ಉತ್ತಮ ಒಡನಾಟ ಬೆಳಸಿಕೊಂಡಿ ದ್ದಾರೆ. ವಿಜ್ಞಾನಿಗಳಿಂದ ಪಡೆದ ಮಾಹಿತಿಗಳನ್ನು ರೈತರಿಗೆ ತಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ರೈತರು ನೂತನ ಕೃಷಿ ಪದ್ಧತಿ ಅಳವಡಿಸಿಕೊಂಡು ಸ್ವಾವಲಂಬಿಗಳಾಗಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮವನ್ನು ಧಾನ್ಯಗಳ ರಾಶಿ ಪೂಜೆ ಮಾಡಿ ಉದ್ಘಾಟಿಸಿದ ದೊಡ್ಡ ಕುರುಬರಹಳ್ಳಿ ಮಠದ ಡಾ. ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಆಶೀರ್ವಚನ ನೀಡಿ, ರೈತರು ಕೃಷಿ ವಿಜ್ಞಾನಿಗಳು ಹೇಳಿದಂತೆ ಕೃಷಿ ಕಾರ್ಯವನ್ನು ಸಮಗ್ರವಾಗಿ ಮಾಡಿ ಯಶಸ್ಸನ್ನು ಕಾಣುವಂತೆ ಸಮಾಜದ ರೈತ ಬಾಂಧವರಿಗೆ ಕಿವಿ ಮಾತು ಹೇಳಿದರು ಕಾರ್ಯಕ್ರಮದಲ್ಲಿ ಆಯ್ದ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಂತಹ ಐವರು ರೈತರು ಹಾಗು ಐವರು ಮಹಿಳಾ ರೈತರಿಗೆ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕ ಡಾ. ಹೇಮ್ಲ ನಾಯಕ್.ಬಿ, ರೈತರಿಗೆ ಕೃಷಿಯ ಕುರಿತು ಸಲಹೆ ನೀಡಿದರು.

ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ ವಿದ್ಯಾರ್ಥಿ ಮಳಿಗೆಗಳು, ಖಾಸಗಿ ಮಳಿಗೆಗಳು, ವಿವಿಧ ಇಲಾಖೆ ಮಳಿಗೆಗಳು, ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಹಾಗೂ ಕೃಷಿ ಸಂಭಂಧಿತ ವಸ್ತುಗಳನ್ನು ಪ್ರದರ್ಶಿಸಲಾಯಿತು.ಮೂಡಿಗೆರೆ ತೋಟಗಾರಿಕಾ ಮಹಾವಿದ್ಯಾಲಯ ಡೀನ್‌ ಡಾ. ನಾರಾಯಣ್ ಎಸ್ ಮಾವರ್ಕರ್ ಅಧ್ಯಕ್ಷತೆ ವಹಿಸಿದ್ದರು. ಜಂಟಿ ಕೃಷಿ ನಿರ್ದೇಶಕರು ಸುಜಾತ ಎಚ್.ಎಲ್, ಹಾಸನ ಮಲಬಾರ್ ಗೋಲ್ಡನ್ ಡೈಮಂಡ್ ಮುಖ್ಯಸ್ಥ ದಯಾನಂದ ಆರ್. ಕೆ, ಮೂಡಿಗೆರೆ ಕೆ.ವಿ.ಕೆ ಮುಖ್ಯಸ್ಥ ಎ.ಟಿ ಕೃಷ್ಣಮೂರ್ತಿ,ಪಿಳ್ಳೆನಹಳ್ಳಿಯ ರಮೇಶ್ .ವಿ, ಬಸವರಾಜಪ್ಪ , ಉದಯ್ ಕುಮಾರ , ಚಿದಾನಂದ , ಶಿವನಂಜೇಗೌಡ, ದೇವಸಿಂಗ್ ನಾಯಕ್ ,ಚಂದ್ರನಾಯಕ್, ಮಹಾದೇವಪ್ಪ, ಮಲ್ಲೇಶಪ್ಪ, ಲೋಕೇಶ್, ರಮೇಶ್, ಸಂಯೋಜಕರಾದ ಭರತ್ ಕುಮಾರ್, ಕಾಂತರಾಜು,ದೇವರಾಜು, ಗ್ರಾಮೀಣ ತೋಟಗಾರಿಕೆ ಕಾರ್ಯಕ್ರಮದ ಅಂತಿಮ ಬಿಎಸ್ಸಿ ವಿದ್ಯಾರ್ಥಿಗಳು, ಪಿಳ್ಳೇನಹಳ್ಳಿ, ಸುತ್ತಮುತ್ತಲ ಗ್ರಾಮಸ್ಥರು ಹಾಗೂ ರೈತ ಬಾಂಧವರು ಇದ್ದರು.

4ಕೆಕೆಡಿಯು2, 2ಎ.

ಕಡೂರು ತಾಲೂಕಿನ ಪಿಳ್ಳೆನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಕೃಷಿ ಮೇಳ ಉದ್ಘಾಟನೆ ಮತ್ತು ಕೃಷಿ ವಸ್ತು ಪ್ರದರ್ಶನ ನಡೆಯಿತು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌