ಕನ್ನಡಪ್ರಭ ವಾರ್ತೆ ಮಂಡ್ಯಮನುಷ್ಯರಿಗೆ ತಗುಲಬಹುದಾದ ಅಂಡಾಶಯ ಮತ್ತು ದೊಡ್ಡ ಕರುಳಿನ ಮಾರಕ ಕ್ಯಾನ್ಸರ್‌ಗಳನ್ನು ನಿಯಂತ್ರಿಸುವ ಶಸ್ತ್ರ ಚಿಕಿತ್ಸೆ ನಾರಾಯಣ ಹೆಲ್ತ್ ಸೆಂಟರ್‌ನಲ್ಲಿ ಲಭ್ಯವಿದೆ ಎಂದು ಜೀಣಾಂಗ ಕ್ಯಾನ್ಸರ್ ತಜ್ಞ ಡಾ.ಲೋಕೇಶ್ ಹಾಗೂ ಕ್ಯಾನ್ಸರ್ ಶಸ್ತ್ರ ಚಿಕಿತ್ಸಕ ಡಾ.ಸುಹಾಸ್ ತಿಳಿಸಿದರು.
ಅತ್ಯಾಧುನಿಕ ಹೈ ಫೆಕ್ ಶಸ್ತ್ರ ಚಿಕಿತ್ಸೆಯೊಂದಿಗೆ ಕ್ಯಾನ್ಸರ್ ರೋಗಿಗಳ ಮರಣ ಪ್ರಮಾಣವನ್ನು ಕಡಿಮೆಗೊಳಿಸಿ ಹೆಚ್ಚು ಕಾಲ ಬದುಕುಳಿಯುವಂತೆ ಚಿಕಿತ್ಸೆ ನೀಡುವ ಯೋಜನೆ ಮೈಸೂರಿನ ನಾರಾಯಣ ಹೃದಯಾಲಯದಲ್ಲಿ ಲಭ್ಯವಿದ್ದು ಇದರ ಸದುಪಯೋಗಕ್ಕೆ ಮುಂದಾಗಬೇಕೆಂದು ಕ್ಯಾನ್ಸರ್ ರೋಗಿಗಳಲ್ಲಿ ಮನವಿ ಮಾಡಿದರು.ಅಂಡಾಶಯ ಕ್ಯಾನ್ಸರ್ ಕಾಯಿಲೆಗೆ ನಿಖರ ಕಾರಣಗಳು ಕಂಡುಬಂದಿಲ್ಲ, ತಾಂತ್ರಿಕತೆಯ ಉನ್ನತೀಕರಣದಿಂದ ಉತ್ತಮ ಚಿಕಿತ್ಸೆ ಸ್ಥಳೀಯವಾಗಿ ದೊರೆಯುವುದರಿಂದ ರೋಗಿಗಳ ಆರ್ಥಿಕ ವೆಚ್ಚ ಹಾಗೂ ಪ್ರಯಾಣದ ಅವಧಿ ಕಡಿತವಾಗಲಿದೆ ಎಂದರು.
ಆಹಾರ ಪದ್ಧತಿಯಲ್ಲಿ ಬದಲಾವಣೆ, ಕಲುಷಿತ ಹಾಗೂ ರಾಸಾಯನಿಕಯುಕ್ತ ಆಹಾರ ಬಳಕೆ, ಬದಲಾದ ಜೀವನ ಪದ್ಧತಿ, ಬೊಜ್ಜುತನದ ಹೆಚ್ಚಳ, ಕಡಿಮೆ ಶ್ರಮದಾನ ಹಾಗೂ ಜಂಕ್‌ಫುಡ್‌ಗಳ ಬಳಕೆಯಿಂದಲೂ ಕ್ಯಾನ್ಸರ್ ಕಾಯಿಲೆ ಗೋಚರಿಸಲಿದ್ದು, ನಿಗಾ ವಹಿಸುವ ಅಗತ್ಯತೆ ಇದೆ ಎಂದರು.ನಮ್ಮ ಆಸ್ಪತ್ರೆಯಲ್ಲಿ ಲಭ್ಯವಿರುವ ಹೈಪರ್ಥರ್ಮಿಕ್ ಇಂಟ್ರಾಪೆರಿಟೋನಿಯಲ್ ಕಿಮೊಥೆರಪಿಯ ಶಸ್ತ್ರಚಿಕಿತ್ಸೆಯಲ್ಲಿ ಕಿಬ್ಬೊಟ್ಟೆಯಲ್ಲಿರುವ ಕ್ಯಾನ್ಸರ್ ಕಣಗಳನ್ನು ಹೆಚ್ಚಿನ ತಾಪಮಾನದ ಮೂಲಕ ಔಷಧ ಪೂರೈಕೆ ಮತ್ತು ಕ್ಯಾನ್ಸರ್ ಕೋಶಗಳ ಸೂಕ್ಷ್ಮತೆಯನ್ನು ನಿಯಂತ್ರಿಸಬಹುದು ಎಂದರು.
೮ ರಿಂದ ೧೨ ಗಂಟೆಗಳ ಕಾಲದ ದೀರ್ಘಾವದಿಯ ಶಸ್ತ್ರ ಚಿಕಿತ್ಸೆಗೆ ಸುಮಾರು ೫ ಲಕ್ಷ ರು. ಖರ್ಚಾಗಲಿದ್ದು, ಆಸ್ಪತ್ರೆಯ ಸಿಆರ್‌ಎಸ್ ನಿಧಿ ಮೂಲಕ ಅತಿ ಬಡವರಿಗೆ ೧ ಲಕ್ಷ ರು. ಆರ್ಥಿಕ ನೆರವು ಇತರೆ ರೋಗಿಗಳಿಗೆ ಬಡ್ಡಿರಹಿತ ಸಾಲವಾಗಿ ಹಣಕಾಸು ನೆರವು ಕೊಡಿಸುವ ಯೋಜನೆಯೂ ನಮ್ಮ ಆಸ್ಪತ್ರೆಯಲ್ಲಿ ಲಭ್ಯವಿದೆ ಎಂದರು.ಮೂರನೇ ಹಂತದ ಕ್ಯಾನ್ಸರ್ ರೋಗಿಗಳಿಗೂ ಶಸ್ತ್ರ ಚಿಕಿತ್ಸೆ ಲಭ್ಯವಿದ್ದು, ೪೦ರಿಂದ ೬೦ರ ವಯೋಮಾನದವರಗೆ ಶಸ್ತ್ರ ಚಿಕಿತ್ಸೆಯನ್ನು ನೆರವೇರಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಮಾರುಕಟ್ಟೆ ವಿಭಾಗದ ಸಿಇಒ ಸೋಮನಾಥ್ ಉಪಸ್ಥಿತರಿದ್ದರು.