ಕನ್ನಡಪ್ರಭ ವಾರ್ತೆ ಮಂಗಳೂರು
ದಿನವಿಡೀ ನಡೆಯುವ ಈ ಕಲೋತ್ಸವದಲ್ಲಿ ಪ್ರತಿಭಾ ಪುರಸ್ಕಾರ, ಸಂತ ಸಂದೇಶ, ವಿಚಾರಗೋಷ್ಠಿ, ಸಾಧಕರಿಗೆ ಸನ್ಮಾನ ಇತ್ಯಾದಿ ಕಾರ್ಯಕ್ರಮ ಜೋಡಿಸಲಾಗಿದೆ. ಬೆಳಗ್ಗೆ 10.30ರಿಂದ ಸಂತ ಸಂದೇಶ, ಆಶೀರ್ವಚನ ನಡೆಯಲಿದೆ. ಚಿತ್ರದುರ್ಗದ ಶ್ರೀ ಮುರುಘ ಮಠದ ಉಸ್ತುವಾರಿ ಸ್ವಾಮೀಜಿ ಬಸವಪ್ರಭು ಸ್ವಾಮೀಜಿ, ನೆಲಮಂಗಲ ಶ್ರೀ ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ.ಬಸವ ರಮಾನಂದ ಮಹಾ ಸ್ವಾಮೀಜಿ, ಬಳಬಟ್ಟಿ ಶ್ರೀ ಗೋ ರಕ್ಷಾನಾಥ್ ಮಠದ ಯೋಗಿ ನಿವೃತ್ತನಾಥ್, ಶ್ರೀ ಗುರು ರಂಗಸ್ವಾಮಿ ಆಶ್ರಮ ದೊಂಬಿ ದಾಸರ ಸಮುದಾಯ ಆಂದ್ರಹಳ್ಳಿ ಬೆಂಗಳೂರು ಇಲ್ಲಿನ ವಿದ್ವಾನ್ ಕರುಣಾಕರ ಸ್ವಾಮಿ, ತುಮಕೂರು ಕೋಡಿಹಳ್ಳಿಯ ಶ್ರೀ ಬಸವ ಬೃಂಗೇಶ್ವರ ಸ್ವಾಮಿ ಇವರುಗಳು ಸಂತ ಸಂದೇಶ ನೀಡಲಿದ್ದಾರೆ ಎಂದರು.
ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾ ಎಂ.ಎಸ್. ಮಾತನಾಡಿ, ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯದ ಸಮಸ್ಯೆಗಳು ಸವಾಲುಗಳ ಕುರಿತಂತೆ ಬೆಳಗ್ಗೆ 11.30 ರಿಂದ 12.30ರ ವರೆಗೆ ವಿಚಾರಗೋಷ್ಠಿಗಳು ನಡೆಯಲಿವೆ. ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸಾಧಕರನ್ನು ಸನ್ಮಾನಿಸುವರು. ಅಲೆಮಾರಿ ಜನಾಂಗಗಳ ಒಕ್ಕೂಟದ ರಾಜ್ಯಾಧ್ಯಕ್ಷ ಎಂ.ಪ್ರಕಾಶ್ ಅಧ್ಯಕ್ಷತೆ ವಹಿಸುವರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಅನಂತಕೃಷ್ಣ ಯಾದವ, ಉಪಕಾರ್ಯದರ್ಶಿ ಬಸವರಾಜ ಬಿ.ಕೆ, ಉಪಾಧ್ಯಕ್ಷ ಶುಭಕರ ಉಳ್ಳಾಲ್ ಇದ್ದರು.