ಕಲಬುರಗಿ ಜಿಲ್ಲಾದ್ಯಂತ ಬರಗಾಲ ನಿರ್ವಹಿಸಲು ಸರ್ವಕ್ರಮ: ಡಿಸಿ ಫೌಜಿಯಾ ತರನ್ನುಮ್

KannadaprabhaNewsNetwork | Published : Mar 7, 2024 1:45 AM

ಸಾರಾಂಶ

ಬರಗಾಲ ನಿರ್ವಹಣೆಗಾಗಿ ಜಿಲ್ಲಾ ವಿಪತ್ತು ನಿರ್ವಾಹಣಾ ಪ್ರಾಧಿಕಾರದಿಂದ ಸಕಲ ಸಿದ್ಥತೆಯನ್ನು ಮಾಡಿಕೊಂಡಿದ್ದು, ಜಿಲ್ಲಾ ಎಲ್ಲಾ ತಾಲೂಕು ಮತ್ತು ನಗರ ಪ್ರದೇಶದಲ್ಲಿ ನೀರಿನ ಅಭಾವ ಆಗದಂತೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

2023-24 ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಕಲಬುರಗಿ ಜಿಲ್ಲೆಯ ತಾಲ್ಲೂಕುಗಳೆಂದು ಘೋಷಿಸಲಾಗಿದೆ ಪ್ರಯುಕ್ತ ಬರಗಾಲ ನಿರ್ವಹಣೆಗಾಗಿ ಜಿಲ್ಲಾ ವಿಪತ್ತು ನಿರ್ವಾಹಣಾ ಪ್ರಾಧಿಕಾರದಿಂದ ಸಕಲ ಸಿದ್ಥತೆಯನ್ನು ಮಾಡಿಕೊಂಡಿದ್ದು, ಜಿಲ್ಲಾ ಎಲ್ಲಾ ತಾಲೂಕು ಮತ್ತು ನಗರ ಪ್ರದೇಶದಲ್ಲಿ ನೀರಿನ ಅಭಾವ ಆಗದಂತೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಹೇಳಿದ್ದಾರೆ.

ಬುಧುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಬರಪೀಡಿತ ತಾಲ್ಲೂಕುಗಲ್ಲಿ ಮಳೆ ಅಭಾವದಿಂದ ಒಟ್ಟು, 276368 ಹೇ. ಪ್ರದೇಶದಲ್ಲಿ ಕೃಷಿ ಬೆಳೆಗಳು ಹಾನಿಯಾಗಿದ್ದು ಕುರಿತು ಓಆಖಈ/Sಆಖಈ ಮಾರ್ಗಸೂಚಿನ್ವಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರಕಾರದಿಂದ ಅರ್ಹ ಫಲಾನುಭವಿ ರೈತರಿಗೆ ಎಸ್.ಡಿ.ಆರ್.ಎಫ್ ಅನುದಾನದಲ್ಲಿ (ಕನಿಷ್ಠ ರು.1000/- ಯಿಂದ ಗರಿಷ್ಠ ರು.2000/- ರಂತೆ) ನೀಡಲಾಗಿದೆ ಎಂದರು.

ಒಟ್ಟು. 2,64,417 ರೈತರಿಗೆ ರು. 52.53 ಕೋಟಿ ಪರಿಹಾರ ಧನ ಡಿಬಿಟಿ ಮುಖಾಂತರ ರೈತರ ಬ್ಯಾಂಕ್‌ ಖಾತೆಗಳಿಗೆ ಜಮೆ ಮಾಡಲಾಗಿದೆ . ಎಲ್ಲಾ ತಾಲ್ಲೂಕುಗಳಲ್ಲಿ ಇಲ್ಲಿಯವರೆಗೆ ಒಟ್ಟು 42 ಬರಗಾಲ ನಿರ್ವಾಹಣೆಗಾಗಿ ತಗೆದುಕೊಳ್ಳಲುವ ಮುಂಜಾಗ್ರತ ಕ್ರಮಗಳ ಕುರಿತು ಚರ್ಚಿಸಲು ಶಾಸಕರ ಅಧ್ಯಕ್ಷತೆಯಲ್ಲಿ ರಚಿಸಲಾದ ತಾಲ್ಲೂಕು ಟಾಸ್ಕ್ ಫೋರ್ಸ್ ಸಭೆಗಳನ್ನು ನಡೆಸಲಾಗಿದೆ ಎಂದರು.

ಪಶು ಸಂಗೋಪನೆ ಇಲಾಖೆ ಕಲಬುರಗಿ ಇವರ ಮಾಹಿತಿಯಂತೆ ಜಿಲ್ಲೆಯಲ್ಲಿ ಒಟ್ಟು 458756 (ದನ ಹಾಗೂ ಎಮ್ಮೆಗಳು) ಮತ್ತು 558587 ಕುರಿ ಮತ್ತು ಮೇಕೆಗಳಿರುತ್ತವೆ. ಪ್ರಸ್ತುತ ಕಲಬುರಗಿ ಜಿಲ್ಲೆಯಲ್ಲಿ 644093 ಮೆಟ್ರಿಕ ಟನ್ ಮೇವು ಲಭ್ಯವಿದ್ದು ಇದನ್ನು 30 ವಾರಗಳವರೆಗೆ ಉಪಯೋಗಿಸಬಹುದಾಗಿದೆ. (2023-24ನೇ ಸಾಲಿನ ರಬಿ ಬೆಳೆಗಳಿಂದ ಉತ್ಪಾದನೆಯಾಗಬಹುದಾದ ಮೇವಿನ (ಜೋಳದ ಮೇವು) ಅಂದಾಜನ್ನು ಪರಿಗಣಿಸಲಾಗಿದೆ). ಪಶು ಸಂಗೋಪನೆ ಇಲಾಖೆಯಿಂದ ಈಗಾಗಲೆ ಜಿಲ್ಲೆಗೆ 39,361 ಮೇವಿನ ಬೀಜಗಳ ಮಿನಿಕಿಟ್ಟ ಸರಬರಾಜಾಗಿದ್ದು, ಸದರಿ ಗಳನ್ನು ಒಟ್ಟು 13061 ರೈತರಿಗೆ ವಿತರಿಸಲಾಗಿದೆ.

ಮೇವು ಸಾಗಾಟ ನಿರ್ಬಂಧಿಸಿ ಆದೇಶ: ಎಲ್ಲಾ ಕೀಟ್ ಬರ ಪರಸ್ಥಿತಿಯ ಹಿನ್ನೆಲೆಯಲ್ಲಿ ಅಂತರ ರಾಜ್ಯ/ಜಿಲ್ಲೆಗಳಿಗೆ ಮೇವು ಸಾಗಾಣಿಕೆಯನ್ನ ನಿರ್ಭಂದಿಸಿ ಆದೇಶಿಸಲಾಗಿದೆ, ಮತ್ತು ಈ ಸಂಬಂಧ 15 ಚೆಕ್‌ಪೋಸ್ಟಗಳನ್ನು ಸ್ಥಾಪಿಸಲಾಗಿದೆ. (ಅಫಜಲ್ಪುರ-3, ಆಳಂದ-4, ಚಿಂಚೋಳಿ-3 ಮತ್ತು ಸೇಡಂ-5). ಮುಂಜಾಗೃತ ಕ್ರಮವಾಗಿ ಪಶು ಸಂಗೋಪನೆ ಇಲಾಖೆಯಿಂದ ಪ್ರತಿ ಹೊಬಳಿಗೆ 1ರಂತೆ ಒಟ್ಟು 33 ಸ್ಥಳಗಳಲ್ಲಿ ಮೇವಿನ ಬ್ಯಾಂಕಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. (ಪರಿಸ್ಥಿತಿಯ ಅಗತ್ಯಗನುಗುಣವಾಗಿ). ಬರಗಾಲ ಪರಿಸ್ಥತಿ ಯ ಹಿನ್ನಲೆಯಲ್ಲಿ ಅವಶ್ಯಕತೆ ಅನುಗುಣವಾಗಿ 30 ಸ್ಥಳಗಳಲ್ಲಿ ಜಾನುವಾರು ಗೋ ಶಾಲೆಗಳನ್ನು ಸ್ಥಾಪಿಸಲು ಪಶು ಸಂಗೋಪನೆ ಇಲಾಖೆಯಿಂದ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ರೈತರ ಜಾನುವಾರುಗಳಿಗೆ ಮೇವು ಕೊರತೆ ಪ್ರಕರಣ ಕಂಡುಬಂದಲ್ಲಿ ನಿಯಮನುಸಾರ ಅಗತ್ಯ ನೆರವು ನೀಡಿ ರೈತರುಗಳು ಯಾವುದೇ ಕಾರಣಕ್ಕು ಜಾನುವಾರುಗಳನ್ನು ಮಾರಾಟ ಮಾಡದಂತೆ ತಡೆಗಟ್ಟಲು ಪಶು ಸಂಗೋಪನೆ ಇಲಾಖೆಯಿಂದ ಕ್ರಮವಹಿಸಲಾಗಿದೆ ಎಂದು ವಿವರಿಸಿದರು.

ಜಿಲ್ಲೆಯ ವಾರ್ಷಿಕ ತಾಪಮಾನವು 30.13 ಆಗಿದೆ. ಕಲಬುರಗಿಯು ಸಾಮಾನ್ಯವಾಗಿ ಸುಮಾರು 104.74 ಮಿಲಿ ಮೀಟರ (4.12 ಇಂಚುಗಳು) ಮಳೆಯನ್ನು ಪಡೆಯುತ್ತದೆ. ಆದರೆ ಈ ವರ್ಷವಾಡಿಕೆಯಂತೆ ಮಳೆ ಆಗದೇ ಇರುವುದರಿಂದ ಸತತ 2001 ರಿಂದ 23 ವರ್ಷಗಳಲ್ಲಿ 16 ವರ್ಷಗಳು ತೀವ್ರ ಬರಪರಿಸ್ಥಿತಿ ಎದುರಿಸುತ್ತಿರುವುದರಿಂದ ಅಂತರ್ಜಲ ಮಟ್ಟ ಕುಸಿದಿದೆ ಎಂದರು.

Share this article