ಕನ್ನಡ ನಾಡಲ್ಲಿ ಹುಟ್ಟಿದೋರೆಲ್ಲ ಪುಣ್ಯವಂತರು: ಬಿ.ವಾಮದೇವಪ್ಪ

KannadaprabhaNewsNetwork | Published : Aug 7, 2024 1:03 AM

ಸಾರಾಂಶ

ಆದಿಕವಿ ಮಹಾಲಿಂಗ ರಂಗರ ಸಂದೇಶದಂತೆ ಸುಲಿದ ಬಾಳೆಹಣ್ಣಿನಂತೆ ಕನ್ನಡ ಭಾಷೆ ಸುಲಲಿತ. ನಾಡಿನ ವಿವಿಧ ಭಾಷೆಗಳಲ್ಲಿ ಪ್ರಥಮ ಆದ್ಯತೆ ಕನ್ನಡಕ್ಕೆ ಇರುವುದು ಹೆಮ್ಮೆಯ ಸಂಗತಿ. ಈ ಕನ್ನಡ ನಾಡಿನಲ್ಲಿ ಹುಟ್ಟಿದ ನಾವು, ನೀವೆಲ್ಲಾ ಪುಣ್ಯವಂತರು ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಹೇಳಿದ್ದಾರೆ.

- ಸುವರ್ಣ ಕರ್ನಾಟಕ ಕಣ್ಮಣಿ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ- - - ಕನ್ನಡಪ್ರಭ ವಾರ್ತೆ, ದಾವಣಗೆರೆ ಆದಿಕವಿ ಮಹಾಲಿಂಗ ರಂಗರ ಸಂದೇಶದಂತೆ ಸುಲಿದ ಬಾಳೆಹಣ್ಣಿನಂತೆ ಕನ್ನಡ ಭಾಷೆ ಸುಲಲಿತ. ನಾಡಿನ ವಿವಿಧ ಭಾಷೆಗಳಲ್ಲಿ ಪ್ರಥಮ ಆದ್ಯತೆ ಕನ್ನಡಕ್ಕೆ ಇರುವುದು ಹೆಮ್ಮೆಯ ಸಂಗತಿ. ಈ ಕನ್ನಡ ನಾಡಿನಲ್ಲಿ ಹುಟ್ಟಿದ ನಾವು, ನೀವೆಲ್ಲಾ ಪುಣ್ಯವಂತರು ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯಿಂದ ನಡೆದ ಸುವರ್ಣ ಕರ್ನಾಟಕ ಕಣ್ಮಣಿ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮೈಸೂರಿನ ಸಾಹಿತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಮಾತನಾಡಿ, ಸಾಧಕರು ಕೇವಲ ಸಾಧನೆಗಷ್ಟೇ ಸೀಮಿತವಾಗದೇ ಸಮಾಜ ಸೇವೆಗಳ ಕಡೆಗೆ ಗಮನಿಸಬೇಕಾಗಿದೆ. ಸನ್ಮಾನಿತರಿಗೆ ಪ್ರಶಸ್ತಿ ಪಡೆದ ನಂತರ ಮುಂದಿನ ಸಾಧನೆಗೆ ಇದು ಅಡಿಪಾಯ ಎಂದು ತಿಳಿಸಿದರು.

ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಯಿತು. ಸಂಸ್ಥೆ ಅಧ್ಯಕ್ಷ ಕೆ.ಎಚ್. ಮಂಜುನಾಥ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ, ಮಹಿಳಾ ವಿಭಾಗದ ಸಂಸ್ಥಾಪಕಿ ಜ್ಯೋತಿ ಗಣೇಶ್‌ ಶೆಣೈ, ವಸಂತಿ ಮಂಜುನಾಥ್, ಮಹಿಳಾ ವಿಭಾಗದ ಅಧ್ಯಕ್ಷೆ ಹೇಮಾ ಶಾಂತಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್, ಡಾ.ಆರತಿ ಸುಂದರೇಶ, ಪುಷ್ಪ ಮಂಜುನಾಥ, ಮುಕ್ತ ಶ್ರೀನಿವಾಸ ಪ್ರಭು, ಶೈಲಾ ವಿನೋದ ದೇವರಾಜ, ಶೋಭಾ ಮಂಜುನಾಥ ಇತರರು ಇದ್ದರು.

- - - -6ಕೆಡಿವಿಜಿ36ಃ:

ದಾವಣಗೆರೆಯಲ್ಲಿ ಕಲಾಕುಂಚ ಸಂಸ್ಥೆಯಿಂದ ನಡೆದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಬಿ.ವಾಮದೇವಪ್ಪ ಉದ್ಘಾಟಿಸಿದರು.

Share this article