ಕನ್ನಡಪ್ರಭ ವಾರ್ತೆ ಆಲಮಟ್ಟಿ
ಆಲಮಟ್ಟಿ ಜಲಾಶಯದ ಗೇಟ್‌ಗಳು ಸೇರಿದಂತೆ ಜಲಾಶಯಕ್ಕೆ ಯಾವುದೇ ರೀತಿಯ ತೊಂದರೆಯಿಲ್ಲ. ಎಲ್ಲವೂ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ಮೋಹನರಾಜು ಹೇಳಿದರು.ಆಲಮಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸ್ವಾತ್ರಂತ್ರೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ನಿಗಮದ ನೌಕರರಿಗಾಗಿ ಬುಧವಾರ ಏರ್ಪಡಿಸಿದ್ದ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ಆಲಮಟ್ಟಿ ಜಲಾಶಯದ ಗೇಟ್‌ಗಳ ಮೇಲ್ವಿಚಾರಣೆ ಮುಂಗಾರು ಹಂಗಾಮಿಗೂ ಮೊದಲು ನಡೆಸಲಾಗಿದೆ. ಆದರೆ, ಈಗ ಜಲಸಂಪನ್ಮೂಲ ಸಚಿವರು ಹಾಗೂ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಗಳು ಮತ್ತೊಮ್ಮೆ ಜಲಾಶಯವನ್ನು ಪರೀಕ್ಷಿಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಆ ಪ್ರಕಾರ ಎರಡು ದಿನಗಳಲ್ಲಿ ಮತ್ತೊಮ್ಮೆ ವಿವರವಾಗಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.ಆಲಮಟ್ಟಿ ಜಲಾಶಯದ ಕಾಲುವೆಗಳಿಗೆ ನೀರು ಹರಿಸಿ ಅದರ ಮೂಲಕ ಜಿಲ್ಲೆಯ 100ಕ್ಕೂ ಅಧಿಕ ಕೆರೆಗಳ ಭರ್ತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಜಲಾಶಯ ಭರ್ತಿಯತ್ತ ಸಾಗಿದ್ದು ಖುಷಿ ತಂದಿದೆ. ಈ ಬಾರಿ ಹಿಂಗಾರಿಗೂ ನೀರು ಹರಿಸುವ ಸಾಧ್ಯತೆಯಿದೆ. ಇನ್ನೂ ಒಂದು ತಿಂಗಳುಗಳ ಕಾಲ ಜಲಾಶಯಕ್ಕೆ ನೀರು ಹರಿದುಬರುವ ನಿರೀಕ್ಷೆಯಿದೆ. ಬಾಗಿನ ಅರ್ಪಣೆಗಾಗಿ ಈಗಾಗಲೇ ಚರ್ಚಿಸಲಾಗಿದ್ದು, ಬಹುತೇಕ ಇದೇ ತಿಂಗಳಲ್ಲಿ ಬಾಗಿನ ಅರ್ಪಣೆ ನಡೆಯಲಿದೆ ಎಂದರು.ನೌಕರರ ಸಂಘದ ಅಧ್ಯಕ್ಷ ಸದಾಶಿವ ದಳವಾಯಿ, ಪ್ರಧಾನ ಕಾರ್ಯದರ್ಶಿ ವೈ.ಎಂ.ಪಾತ್ರೋಟ, ಸೂಪರಿಂಟೆಡಿಂಗ್ ಎಂಜಿನಿಯರ್ ಗಳಾದ ಬಿ.ಎಸ್. ಪಾಟೀಲ, ವಿ.ಆರ್.ಹಿರೇಗೌಡರ, ಡಿಎಫ್‌ಒ ರಾಜಣ್ಣ ನಾಗಶೆಟ್ಟಿ, ಶರಣಪ್ಪ ಚಲವಾದಿ, ಕೆ.ಜಯಣ್ಣ, ಆರ್.ಎಫ್.ಒ ಮಹೇಶ ಪಾಟೀಲ, ಎಸಿಎಫ್ ಎಸ್.ಆರ್.ಪಾತ್ರೋಟ, ರಮೇಶ ಚವ್ಹಾಣ, ವಿಠ್ಠಲ ಜಾಧವ ಮತ್ತೀತರರು ಇದ್ದರು. ಬಾಕ್ಸ್..
ಎಂಜಿನಿಯರ್ಸ್ ತಂಡ ಪ್ರಥಮಎಂಜಿನಿಯರ್ಸ್ ತಂಡ ಪ್ರಥಮ, ಅರಣ್ಯ ಇಲಾಖೆಯ ತಂಡ ದ್ವಿತೀಯ, ಪ್ರಧಾನ ಮುಖ್ಯ ಲೆಕ್ಕಾಧಿಕಾರಿಗಳ ಇಲಾಖೆಯ ತಂಡ ತೃತೀಯ ಸ್ಥಾನ ಪಡೆಯಿತು.