ರಾಮನಗರ: ಉತ್ತಮ ಶಿಕ್ಷಣ, ಸಂಸ್ಕಾರಗಳನ್ನು ನೀಡುವ ಶಾಲೆಗಳು ವಿದ್ಯಾರ್ಥಿಗಳ ಪಾಲಿಗೆ ದೇವಾಲಯಗಳಿದ್ದಂತೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.
ನಗರದ ಹೊರವಲಯದಲ್ಲಿರುವ ಬೇತೆಲ್ ಆಂಗ್ಲ ಶಾಲೆಯಲ್ಲಿ ನಡೆದ 20ನೇ ವರ್ಷದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿದ ಅವರು, ಕಲ್ಲು ಉಳಿಪೆಟ್ಟು ತಿಂದ ನಂತರ ಪೂಜೆಗೆ ಅರ್ಹವಾಗುತ್ತದೆ. ಹಾಗೆಯೆ ಶಿಕ್ಷಕರು ಪ್ರಾಥಮಿಕ ಹಂತದಲ್ಲಿಯೇ ಮಕ್ಕಳ ಅಭಿರುಚಿ ಅರ್ಥಮಾಡಿಕೊಂಡು ತಿದ್ದಿ-ತೀಡಿದರೆ ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಸತ್ಪ್ರಜೆಯಾಗಿ ರೂಪಗೊಳ್ಳಲು ಸಾಧ್ಯ. ಆಗ ಕಷ್ಟಪಟ್ಟು ಶಿಕ್ಷಣ ಕೊಡಿಸಿದ ತಂದೆ-ತಾಯಿ ಮತ್ತು ವಿದ್ಯಾಸಂಸ್ಥೆಗೂ ಕೀರ್ತಿ ಬರುತ್ತದೆ ಎಂದರು. ನಗರಸಭೆ ಅಧ್ಯಕ್ಷ ಶೇಷಾದ್ರಿ ಮಾತನಾಡಿ, ಬೇತೆಲ್ ಶಾಲೆ ಆರಂಭವಾಗಿ 20 ವರ್ಷವಾಗಿದೆ. ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಪೋಷಕರ ನಿರೀಕ್ಷೆಗೆ ತಕ್ಕಂತೆ ಮಕ್ಕಳಿಗೆ ಶಿಕ್ಷಣ ನೀಡುವ ಕೆಲಸ ಮಾಡುತ್ತಿದೆ. ಇಲ್ಲಿ ವಿದ್ಯಾಭ್ಯಾಸ ಮಾಡಿದ ಅನೇಕರು ವೈದ್ಯರಾಗಿ, ಇಂಜಿನಿಯರ್‌ಗಳಾಗಿ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಕಲ್ಪಿಸಿಕೊಂಡು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಇದಕ್ಕೆ ಬೇತೆಲ್ ಶಾಲೆಯಲ್ಲಿ ನೀಡಿದ ಶಿಕ್ಷಣ ಪ್ರಮುಖ ಪಾತ್ರ ವಹಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಬೇತೆಲ್ ಆಂಗ್ಲಶಾಲೆ ಪ್ರಾಂಶುಪಾಲರಾದ ರೀಟಾಮನು ಮಾತನಾಡಿ, ಶಿಕ್ಷಣ ಸಂಸ್ಥೆ ಕಟ್ಟಿ 20 ವರ್ಷ ನಡೆಸಿಕೊಂಡು ಬಂದಿದ್ದೇನೆ. ಇದಕ್ಕೆ ರಾಮನಗರ ಜನತೆ ಮತ್ತು ಪೋಷಕರ ಸಹಕಾರ ಪ್ರಮುಖ ಕಾರಣ. ಇಂದು ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ನಮ್ಮ ಸಂಸ್ಥೆಯತ್ತ ಮುಖ ಮಾಡುತ್ತಿದ್ದಾರೆ. ಇದು ನಮ್ಮ ಸಂಸ್ಥೆಯ ಹಿರಿಮೆಯನ್ನು ಹೆಚ್ಚಿಸಿದೆ ಎಂದು ಮೆಲುಕು ಹಾಕಿದರು.
ಕಾರ್ಯಕ್ರಮದಲ್ಲಿ ಬೇತೆಲ್ ಶಾಲೆಯಲ್ಲಿ ಓದಿ ಉತ್ತಮ ಸಾಧನೆ ಮಾಡಿರುವ ಪೂಜಿತಾ, ರಂಜಿತಾ, ಅರ್ಚಲ್ ಮತ್ತು ಹೋಲಿ ಕ್ರೆಸ್ಸೆಂಟ್ ಆಂಗ್ಲ ಶಾಲೆಯ ಡಾ.ಶಾಜಿಯಾಅಲ್ತಾಪ್ ಅವರನ್ನು ಸಂಸ್ಥೆ ಪರವಾಗಿ ಗೌರವಿಸಲಾಯಿತು.ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್‌ಕುಮಾರ್, ನಗರಸಭೆ ಸದಸ್ಯರಾದ ಶಿವಸ್ವಾಮಿ (ಅಪ್ಪಿ), ದೌಲತ್‌ಷರೀಪ್, ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಸೋಮಲಿಂಗಯ್ಯ, ಬೇತೆಲ್ ಸಂಸ್ಥೆಯ ಚೆರ್ಮನ್ ಮನೋಹರ್, ರಾ-ಚ ಪ್ರಾಧಿಕಾರದ ಮಾಜಿ ಅಧ್ಯಕ್ಷ ರಾಜಶೇಖರ್, ಖಾಸಗಿ ಶಾಲಾ ಒಕ್ಕೂಟದ ಅಧ್ಯಕ್ಷÀ ಪ್ರದೀಪ್‌ಕುಮಾರ್, ಪಟೇಲ್ ಆಂಗ್ಲ ಶಾಲೆಯ ಸಂಸ್ಥಾಪಕ ಪಟೇಲ್ ರಾಜು, ಎಬಿಸಿಡಿ ನೃತ್ಯ ಶಾಲೆಯ ರೇಣುಕಾಪ್ರಸಾದ್ ಉಪಸ್ಥಿತರಿದ್ದರು.
14ಕೆಆರ್ ಎಂಎನ್ 8.ಜೆಪಿಜಿರಾಮನಗರದ ಹೊರವಲಯದಲ್ಲಿರುವ ಬೇತೆಲ್ ಆಂಗ್ಲ ಶಾಲೆಯಲ್ಲಿ ಶನಿವಾರ ಸಂಜೆ ನಡೆದ 20ನೇ ವರ್ಷದ ಸಂಭ್ರಮ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.