ಕನ್ನಡಪ್ರಭ ವಾರ್ತೆ ಇಂಡಿ:
ಗಡಿನಾಡು ಇಂಡಿ ತಾಲೂಕಿನಲ್ಲಿ ಮಹಾರಾಷ್ಟ್ರದ ಪ್ರಭಾವವಿದ್ದರೂ ಸಹ, ಅದನ್ನು ಬದಿಗಿಟ್ಟು ಇಲ್ಲಿನ ಜನರು ಕನ್ನಡ ಭಾಷೆಯನ್ನು ಬೆಳೆಸುತ್ತಿದ್ದಾರೆ. ಇಂಡಿ ಮತಕ್ಷೇತ್ರದಲ್ಲಿ ಶೈಕ್ಷಣಿಕ ಪ್ರಗತಿ ಸಾಧಿಸುತ್ತಿರುವುದು ಸಂತಸ ತಂದಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದರು.ತಾಲೂಕಿನ ಸಾಲೋಟಗಿ ಗ್ರಾಮದ ಶಿವಯೋಗೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪ್ರೌಢಶಾಲೆ ಪ್ರಾರಂಭೋತ್ಸವ ಉದ್ಘಾಟಿಸಿ ಮಾತನಾಡಿದರು. ನನ್ನ ಮತ ಕ್ಷೇತ್ರದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. 2013 ರಿಂದ 2024 ವರೆಗೆ ತಾಲೂಕಿನಲ್ಲಿ ಶೈಕ್ಷಣಿಕ ಬೆಳವಣಿಗೆಗೆ ಶಾಸಕರ ಅನುದಾನದಲ್ಲಿ ₹28.25 ಕೋಟಿ ಖರ್ಚು ಮಾಡಲಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಹಿಂದೆ ಬಂಥನಾಳದ ಸಂಗನ ಬಸವ ಮಹಾಶಿವಯೋಗಿಗಳು ಯಾವ ಗ್ರಾಮಕ್ಕೆ ಪ್ರವಚನಕ್ಕೆ ಹೋಗುತ್ತಿದ್ದರು. ಪ್ರವಚನದಿಂದ ಬಂದ ಹಣದಿಂದ ಅದೇ ಗ್ರಾಮದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದ್ದು, ವಿಜಯಪುರ ಜಿಲ್ಲೆಯಲ್ಲಿ ಅವರ ಕಾಲದಲ್ಲಿಯೇ ಶೈಕ್ಷಣಿಕ ಕ್ರಾಂತಿಯಾಗಿದೆ ಎಂದು ಹೇಳಿದರು.ಮಕ್ಕಳ ಬಗ್ಗೆ ಪೋಷಕರಿಗೆ ಇರುವಷ್ಟೇ ಕಾಳಜಿ ಶಿಕ್ಷಕರಿಗೂ ಇರುತ್ತದೆ. ಮಕ್ಕಳು ಹೆಚ್ಚಿನ ಸಮಯ ಶಿಕ್ಷಕರೊಂದಿಗೆ ಕಳೆಯುತ್ತಾರೆ. ಮಕ್ಕಳ ಮೇಲೆ ಶಿಕ್ಷಕರು ಪ್ರಭಾವ ಬೀರುವುದರಿಂದ ಶಿಕ್ಷಕರು ಗುಣಮಟ್ಟದ ಶಿಕ್ಷಣಕ್ಕೆ ನೀಡುವುದರ ಕಡೆಗೆ ಹೆಚ್ಚು ಒತ್ತು ನೀಡಬೇಕು. ಮಕ್ಕಳಿಗೆ ಪಠ್ಯಕ್ರಮ ಎಷ್ಟು ಮುಖ್ಯವೊ, ಪಠ್ಯೇತರ ಚಟುವಟಿಕೆ ಅಷ್ಟೇ ಮುಖ್ಯ. ಪ್ರತಿಯೊಬ್ಬ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕ್ರೀಡೆ, ಸಾಂಸ್ಕೃತಿಕ ಚಟುವಟೆಕೆಯಲ್ಲಿ ಪಾಲ್ಗೊಳ್ಳಬೇಕು. ಉತ್ತಮ ಶಿಕ್ಷಣದೊಂದಿಗೆ ಉತ್ತಮ ದೇಹದಾರ್ಡ್ಯ ಹಾಗೂ ಆರೋಗ್ಯ ಹೊಂದಬೇಕು ಎಂದು ಕಿವಿಮಾತು ಹೇಳಿದರು.
ಭದ್ರಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು. ಸಂಸ್ಥೆ ಅಧ್ಯಕ್ಷ ಜೀತಪ್ಪ ಕಲ್ಯಾಣಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೀದ ಮೋಮಿನ, ಪಿಕೆಪಿಎಸ್ ಅಧ್ಯಕ್ಷ ವಿಜುಗೌಡ ಪಾಟೀಲ, ನಿರ್ದೇಶಕ ಸೋಮಶೇಖರಯ್ಯ ಹಿರೇಪಟ್ಟ, ಅಶೋಕ ಬಗಲಿ,ನಿರ್ಮಲಾ ಮಣೂರ,ಸುಮಿತ್ರಾ ಬುಳಗೊಂಡ ,ಬಸಪ್ಪ ಕರೂರ,ಪಂಡಿತ ರಾಠೋಡ, ಸಿದ್ರಾಮ ಆಲಮೇಲ, ಅಶೋಕ ಚನಗೊಂಡ, ಉಮರ ವಾಲಿಕಾರ, ಗ್ರಾಪಂ ಮಾಜಿ ಅಧ್ಯಕ್ಷ ಶಿವಯೋಗೆಪ್ಪಚನಗೊಂಡ, ಇಲಿಯಾಸ ಬೊರಾಮಣಿ, ಭೀಮಣ್ಣ ಕವಲಗಿ, ಸಾಹಿತಿ ಗಂಗಾಧರ ನಾಗಿಣಿ, ಎಸ್.ಬಿ.ಗದ್ಯಾಳ, ರಮೇಶ ಕಲ್ಯಾಣಿ, ಅಪ್ಪು ಅಡಗಲ್ಲ, ಸಂತೋಷ ಪರಸೆನವರ, ಮಲ್ಲಿಕಾರ್ಜುನ ಬರಡೋಡ, ಶಿವಯೋಗೆಪ್ಪ ಗಾಣಿಗೇರ, ಮಹಾದೇವ ತಳಬೀಡಿ, ನಾನಾಸಾಬ ಕೂಟನೂರ, ಶಫಿಕ ತಾಂಬೊಳಿ, ಭೀಮರಾಯ ನಾಟಿಕಾರ, ಶಂಕ್ರೇಪ್ಪ ಮಾರ್ಕಪ್ಪನಳ್ಳಿ, ಕೃಷ್ಣಾ ಚವ್ಹಾಣ, ಹೂವಣ್ಣ ಪೂಜಾರಿ, ಎಂ.ಎಂ.ವಾಲಿ, ಡಿ.ಜಿ.ಜೋತಗೊಂಡ, ಜಿ,ವಿ.ಚವ್ಹಾಣ, ಪಿ.ಎ.ಕರೂರ, ಕೆ.ಬಿ.ಹೊಸೂರ, ಆರ್.ಆರ್.ಹೊಸೂರ ಮುಖ್ಯಶಿಕ್ಷಕ ಆರ್.ಬಿ.ಹೊಸೂರ ಹಲವರು ಇದ್ದರು.ಇದೇ ವೇಳೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಆಡಳಿತ ಮಂಡಳಿ ಶಾಸಕ ಯಶವಂತರಾಯಗೌಡ ಪಾಟೀಲರನ್ನು ಸನ್ಮಾನಿಸಲಾಯಿತು. ವಸತಿ ಶಾಲೆಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಹಿತಿ ಗೀತಯೋಗಿ, ಕರ್ನಾಟಕ ಕವಿರತ್ನ ರಾಜ್ಯ ಪ್ರಶಸ್ತಿ ಪುರಸೃತ ಗಂಗಾಧರ ನಾಗಿಣಿ, ಶಿಕ್ಷಣ ರತ್ನ ರಾಜ್ಯ ಪ್ರಶಸ್ತಿ ಪುರಸೃತ ಖಾಜಪ್ಪ ಬೊಳೆಗಾಂವರಿಗೆ ಅವರನ್ನು ಸನ್ಮಾನಿಸಲಾಯಿತು.
ಕೋಟ್ಹಿಂದೆ ಬಂಥನಾಳದ ಸಂಗನ ಬಸವ ಮಹಾಶಿವಯೋಗಿಗಳು ಯಾವ ಗ್ರಾಮಕ್ಕೆ ಪ್ರವಚನಕ್ಕೆ ಹೋಗುತ್ತಿದ್ದರು. ಪ್ರವಚನದಿಂದ ಬಂದ ಹಣದಿಂದ ಅದೇ ಗ್ರಾಮದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದ್ದು, ವಿಜಯಪುರ ಜಿಲ್ಲೆಯಲ್ಲಿ ಅವರ ಕಾಲದಲ್ಲಿಯೇ ಶೈಕ್ಷಣಿಕ ಕ್ರಾಂತಿಯಾಗಿದೆ.ಯಶವಂತರಾಯಗೌಡ ಪಾಟೀಲ,ಶಾಸಕ