ಅಮೃತ್ ಭಾರತ್ ಯೋಜನೆ: ಶೀಘ್ರ ಮೂರು ನಿಲ್ದಾಣಗಳು ಮೇಲ್ದರ್ಜೆಗೆ

KannadaprabhaNewsNetwork |  
Published : Jul 6, 2025 1:51 AM IST
5 ಬೀರೂರು 2ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ  ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಇದ್ದರು. | Kannada Prabha

ಸಾರಾಂಶ

ಬೀರೂರು , ಭಾರತದ ರೈಲ್ವೇ ಮೂಲಸೌಕರ್ಯ ಆಧುನೀಕರಿಸುವ ಮತ್ತು ಪುನರುಜ್ಜೀವನಗೊಳಿಸಲು ಪ್ರಧಾನಿ ಮೋದಿ ಆರಂಭಿಸಿರುವ ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಮೈಸೂರು ರೈಲ್ವೆ ವಲಯದ ಕಡೂರು, ಬೀರೂರು, ತರೀಕೆರೆ ರೈಲ್ವೆ ನಿಲ್ದಾಣಗಳನ್ನು ಉನ್ನತೀಕರಿಸಿ ಮೇಲ್ದರ್ಜೆಗೇರಿಸಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ತಿಳಿಸಿದರು.

ಬೀರೂರು ರೈಲ್ವೇ ಜಂಕ್ಷನ್‌ ಕೇಂದ್ರ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಭೇಟಿ: ಅಧಿಕಾರಿಗಳೊಂದಿಗೆ ಪರಿಶೀಲನೆ

ಕನ್ನಡಪ್ರಭ ವಾರ್ತೆ, ಬೀರೂರು

ಭಾರತದ ರೈಲ್ವೇ ಮೂಲಸೌಕರ್ಯ ಆಧುನೀಕರಿಸುವ ಮತ್ತು ಪುನರುಜ್ಜೀವನಗೊಳಿಸಲು ಪ್ರಧಾನಿ ಮೋದಿ ಆರಂಭಿಸಿರುವ ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಮೈಸೂರು ರೈಲ್ವೆ ವಲಯದ ಕಡೂರು, ಬೀರೂರು, ತರೀಕೆರೆ ರೈಲ್ವೆ ನಿಲ್ದಾಣಗಳನ್ನು ಉನ್ನತೀಕರಿಸಿ ಮೇಲ್ದರ್ಜೆಗೇರಿಸಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ತಿಳಿಸಿದರು.ಶನಿವಾರ ಬೀರೂರು ರೈಲ್ವೇ ನಿಲ್ದಾಣಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಪರಿಶೀಲಿಸಿ ಮಾತನಾಡಿದರು. ಈ ಮಹತ್ವಾಕಾಂಕ್ಷಿ ಯೋಜನೆ ದೇಶಾದ್ಯಂತ 1,275 ರೈಲು ನಿಲ್ದಾಣಗಳನ್ನು ಮರು ಅಭಿವೃದ್ಧಿಪಡಿಸುವ ಗುರಿ ಹೊಂದಿದೆ. ಅವುಗಳನ್ನು ಆಧುನಿಕ ವಿಶ್ವದರ್ಜೆಯ ಸಾರಿಗೆ ಕೇಂದ್ರಗಳಾಗಿ ಪರಿವರ್ತಿಸಲಾಗುತ್ತದೆ ಎಂದರು.

ಮೋದಿಜಿ ದೇಶಕ್ಕೆ 3ನೇ ಬಾರಿ ಪ್ರಧಾನಿಯಾದ ಮೇಲೆ ರೈಲ್ವೆ ಇಲಾಖೆಯಲ್ಲಿ ಮೇಲ್ಸೇತುವೆ ಮತ್ತು ಕೆಳ ಸೇತುವೆಗಳನ್ನು ನಿರ್ಮಾಣ ಮಾಡಿ ಎಲ್.ಸಿ ಗೇಟ್ ಗಳಿಂದ ಆಗುತ್ತಿದ್ದ ಸಮಸ್ಯೆಗೆ ಮುಕ್ತಿ ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಹೊಸ ಅಧ್ಯಾಯ ಪ್ರಾರಂಭ ಮಾಡಿದೆ. ಯಾವುದೇ ರಾಜ್ಯ ಸರ್ಕಾರಗಳು ಕೂಡ ಈ ಯೋಜನೆಗೆ ಹಣ ವ್ಯಯ ಮಾಡದಂತೆ ರೈಲ್ವೇಗೆ ಬೇಕಾದ ಭೂ ಸ್ವಾದೀನಕ್ಕೂ ಕೇಂದ್ರ ಸರ್ಕಾರ ಪೂರ್ತಿ ಹಣ ನೀಡುತ್ತದೆ. ಇನ್ನು ಕೇವಲ ನಾಲ್ಕೈದು ವರ್ಷಗಳಲ್ಲಿ ಇಡೀ ದೇಶದಲ್ಲಿ ಒಂದೇ ಒಂದು ಎಲ್.ಸಿ ಗೇಟ್ ಇರಬಾರದೆಂದು ಪ್ರಧಾನಿ ತೀರ್ಮಾನಿಸಿ ಸೂಚಿಸಿದ್ದಾರೆ ಎಂದರು.ಕಳೆದ ವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ರಾಜ್ಯದಲ್ಲಿ ಎಲ್ಲೆಲ್ಲಿ ರೈಲ್ವೇ ನಿಲ್ದಾಣಗಳಲ್ಲಿ ಗೇಟ್‌ ಗಳಿವೆ ಅವುಗಳನ್ನು ಗುರುತಿಸಿ ಮೇಲ್ಸೇತುವೆ, ಅಂಡರ್ ಬ್ರಿಡ್ಜ್ ನಿರ್ಮಾಣಕ್ಕೆ ಅಧಿಕಾರಿಗಳು ಯೋಜನೆ ಸಿದ್ಧ ಪಡಿಸುತ್ತಿದ್ದು, ಸರ್ವೇ ಕಾರ್ಯ ನಡೆಯುತ್ತಿದೆ. ಹಂತ ಹಂತವಾಗಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತವೆ. ಇದಕ್ಕೆ ಕೇಂದ್ರ ಸರ್ಕಾರವೇ ಹಣ ಬಿಡುಗಡೆ ಮಾಡಲಿದೆ ಎಂದು ವಿವರಿಸಿದರು. ಬಹಳ ವರ್ಷದ ಕನಸಾಗಿದ್ದ ತಿರುಪತಿ ರೈಲ್ವೆ ಯೋಜನೆಯನ್ನು ಚಿಕ್ಕಮಗಳೂರಿನಲ್ಲಿ ಇದೇ ಜು.11ರಂದು ಬೆಳಗ್ಗೆ 11ಗಂಟೆಗೆ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಉದ್ಘಾಟಿಸುವರು. ನಂತರ ರಾಯಚೂರಿನ ಮಸ್ಕಿಗೆ ತೆರಳಿ ಅಲ್ಲಿ ಸುಮಾರು 36 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ 11 ಯೋಜನೆಗಳ ರೈಲ್ವೆ ಕಾಮಕಾರಿಗಳಿಗೆ ₹43ಸಾವಿರ ಕೋಟಿ ಬಿಡುಗಡೆಯಾಗಿದ್ದು ಸದ್ಯ ಪೂರ್ಣವಾಗಿರುವ ಕೆಲವು ಕಾಮಗಾರಿಗಳನ್ನು ಅಂದು ಲೋಕಾರ್ಪಣೆಗೊಳಿಸಲಾಗುತ್ತದೆ.ಜು.13ರಂದು ಬೆಳಗ್ಗೆ ಬೆಂಗಳೂರಿನ ರಾಮೊಹಳ್ಳಿ ಮತ್ತು ಚಲಘಟ್ಟ ರೈಲ್ವೆ ನಿಲ್ದಾಣಗಳ ಬಳಿ ಮೇಲ್ಸೇತುವೆ ಇಲ್ಲದೆ ಸಾವಿರಾರು ವಾಹನ ಸಂಚಾರಕರಿಗೆ ಆಗಿದ್ದ ಅಡಚಣೆ ನಿವಾರಿಸಲು ನಿರ್ಮಿಇಸುರ ವಮೇಲ್ಸೇತುವೆ ಮತ್ತು ಕೆಳಸೇತುವೆ ಕಾಮಗಾರಿ ಮುಗಿದಿದ್ದು ಅದನ್ನು ಸಹ ಲೋಕಾರ್ಪಣೆಗೊಳಿಸಲಾಗುತ್ತಿದೆ. ಇದಕ್ಕೆ ಪ್ರಧಾನಿ ಮೋದಿ ಮತ್ತು ಕೇಂದ್ರ ಸಚಿವ ಅಶ್ವಿನ್ ವೈಷ್ಣವ್ ಪ್ರೇರಣೆ. ಇಂತಹ ಉತ್ತಮ ಕಾರ್ಯ ಮಾಡಿದರೂ ನಾವು ಎಲ್ಲಿಯೂ ರಾಜಕೀಯ ಬಳಸುತ್ತಿಲ್ಲ ಎಂದರು.ಬೀರೂರು ಜಂಕ್ಷನ್ ಇಡೀ ರಾಜ್ಯದಲ್ಲಿಯೇ ಅತೀ ಹೆಚ್ಚು ಪ್ಲಾಟ್ ಫಾರಂಗಳು ಮತ್ತು 7 ಲೈನ್ ಹೊಂದಿದೆ. ಆದ್ದರಿಂದ ಈ ನಿಲ್ದಾಣಕ್ಕೆ ಬೇಕಾದ ಶೌಚಾಲಯ ಮತ್ತು ನಿರೀಕ್ಷಣಾ ಕೊಠಡಿಗಳನ್ನು ಉತ್ತಮಪಡಿಸಿ ಎಂದ ಸಚಿವರು ನಿಲ್ದಾಣದಲ್ಲಿ ಶುಚಿಯಾಗಿಲ್ಲ ಎಂಬ ದೂರಿದೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.ಇದಕ್ಕೆ ಉತ್ತರಿಸಿದ ಮೈಸೂರು ವಿಭಾಗೀಯ ರೈಲ್ವೆ ಎಡಿಆರ್.ಎಂ ವಿನಾಯಕ್ ಸದ್ಯ ಇಲಾಖೆಯಲ್ಲಿ ನಿಲ್ದಾಣದ ಸ್ವಚ್ಚ ಕಾಮಗಾರಿ ಹೊರಗುತ್ತಿಗೆ ನೀಡಿದ್ದು, ಬೀರೂರು ನಿಲ್ದಾಣವನ್ನು ಸೇರಿಸಲಾಗಿದೆ. ಟೆಂಡರ್ ಮುಗಿದಿದ್ದು ಶೀಘ್ರ ನಿಲ್ದಾಣ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು ಎಂದರು.ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಬೀರೂರು ದೇವರಾಜ್, ಮೈಸೂರು ರೈಲ್ವೆ ವಿಭಾಗದ ಹಿರಿಯ ಇಂಜಿನಿಯರ್ ರಾಮ್ ಮೋಹನ್, ಎ.ಡಿ.ವಿ ಇಂಜಿನಿಯರ್ ಭಷೀರ್, ನಿತ್ಯಾನಂದ ಸ್ವಾಮಿ, ತಹಸೀಲ್ದಾರ್ ಪೂರ್ಣಿಮ, ರೈಲ್ವೆ ಬಳಕೆದಾರರ ಸದಸ್ಯ ವಿನಯ್ ಕುಮಾರ್, ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್, ಸವಿತಾ ರಮೇಶ್,ಸದಸ್ಯ ಮಾನಿಕ್ ಭಾಷ ಸೇರಿದಂತೆ ರೈಲ್ವೆ ಇಲಾಖೆಯ ಅಧಿಕಾರಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಮತ್ತಿತರಿದ್ದರು.

-- ಬಾಕ್ಸ್--

ಮಾರ್ಗದ ಕ್ಯಾಂಪ್ ನಿವಾಸಿಗಳ ಮನವಿಕಳೆದ 2024ರ ನವೆಂಬರ್‌ ನಲ್ಲಿ ಬೀರೂರಿನ ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ್ ನಿವಾಸಕ್ಕೆ ಸಚಿವ ವಿ.ಸೋಮಣ್ಣ ಭೇಟಿ ನೀಡಿದಾಗ ಮಾರ್ಗದ ಕ್ಯಾಂಪ್ ಸುತ್ತಮುತ್ತಲಿನ ನಿವಾಸಿಗಳು ನಮಗೆ ಪಟ್ಟಣದ ಹೃದಯ ಭಾಗಕ್ಕೆ ತೆರಳಲು ಸುಮಾರು 3-4ಕಿ.ಮೀ ಸುತ್ತುವರಿದು ಬರಬೇಕಾಗಿದ್ದು ಸಚಿವರು ಸಂತೆ ಮೈದಾನದಿಂದ ಕೆಳ ಸೇತುವೆ ನಿರ್ಮಾಣ ಮಾಡಿದರೆ ನಿವಾಸಿಗಳ ಸಂಚಾರಕ್ಕೆ ಸಹಾಯಕವಾಗುತ್ತದೆ ಎಂದು ಮನವಿ ಮಾಡಿದರು.ಶನಿವಾರ ಕಾಂಗ್ರೆಸ್ ಮುಖಂಡ ಬೀರೂರು ದೇವರಾಜ್ , ಅಧಿಕಾರಿಗಳೊಂದಿಗೆ ಸಚಿವ ವಿ.ಸೋಮಣ್ಣ ಸ್ಥಳಕ್ಕೆ ತೆರಳಿ ಸ್ಥಳ ಪರಿಶೀಲನೆ ನಡೆಸಿ ಜನರ ಸುಗಮ ಸಂಚಾರಕ್ಕೆ ಅನುವಾಗುವಂತೆ ಅಂಡರ್ ಪಾಸ್ ನಿರ್ಮಾಣಕ್ಕೆ ಬೇಕಾದ ನಕ್ಷೆ ತಯಾರಿಸಿ ಕೊಡಬೇಕು. ಆದಷ್ಟು ಬೇಗ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಸೂಚಿಸಿದರು.-- ಬಾಕ್ಸ್--

ಮಾಜಿ ಶಾಸಕರ ಆರೋಗ್ಯ ವಿಚಾರಿಸಿದ ಸೋಮಣ್ಣ:ರಾಜಕೀಯ ಗುರುಗಳೆಂದೆ ಹೆಸರಾದ ಕಾಂಗ್ರೆಸ್ ನ ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ್ (ಕೆಬಿಎಂ) ಅವರ ನಿವಾಸಕ್ಕೆ ಭೇಟಿ ನೀಡಿದ ಸಚಿವ ವಿ.ಸೋಮಣ್ಣ ಅವರ ಆರೋಗ್ಯ ವಿಚಾರಿಸಿದರು. ನಂತರ ಅವರೊಂದಿಗೆ ಮಾತನಾಡಿ, ರಾಜಕೀಯ ದುರೀಣರು ಹಾಗೂ ಅಂದಿನ ಕಾಲದಲ್ಲಿ ರಾಜಕೀಯದಲ್ಲಿ ಅನೇಕರನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಿದವರು ತಾವು, ನಿಮ್ಮ ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳಿ, ನಿಮ್ಮ ಋಣ ನನ್ನ ಮೇಲಿದೆ. ನನ್ನಿಂದೇ ನಾದರೂ ಆರೋಗ್ಯ ಪರೀಕ್ಷಿಸಿಕೊಳ್ಳಲು ಸಹಾಯ ಬೇಕಿದ್ದರೆ ತಿಳಿಸಿ ಎಂದರು. ಈಗ ತಮ್ಮಆರೋಗ್ಯ ಉತ್ತಮವಾಗಿದೆ ನಿಮ್ಮೆಲ್ಲರ ಹಾರೈಕೆ ಹೀಗೆ ಇರಲಿ ಎಂದು ಕೆ.ಬಿ.ಮಲ್ಲಿಕಾರ್ಜುನ್ ನುಡಿದರು.

ಈ ಸಂದರ್ಭದಲ್ಲಿ ಕೋಟಾ ಶ್ರೀನಿವಾಸ ಪೂಜಾರಿ ಕೆಬಿಎಂ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.5 ಬೀರೂರು 1ಬೀರೂರು ರೈಲ್ವೇ ನಿಲ್ದಾಣಕ್ಕೆ ಶನಿವಾರ ಕೇಂದ್ರ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸ್ವಚ್ಚತೆ ಪರಿಶೀಲನೆ ನಡೆಸಿದರು.ಸಂಸದ ಕೋಟಾ ಶ್ರೀನಿವಾಸ ಪೂಜಾರಿಗೆ ಬೀರೂರು ದೇವರಾಜ್, ಮೈಸೂರು ರೈಲ್ವೆ ವಿಭಾಗದ ಹಿರಿಯ ಇಂಜಿನಿಯರ್ ರಾಮ್ ಮೋಹನ್, ಎ.ಡಿ.ವಿ ಇಂಜಿನಿಯರ್ ಭಷೀರ್, ನಿತ್ಯಾನಂದ ಸ್ವಾಮಿ, ತಹಶೀಲ್ದಾರ್ ಪೂರ್ಣಿಮ, ಇದ್ದರು.5 ಬೀರೂರು 2ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಇದ್ದರು.

PREV