ಕಲ್ಲಿಗೆ ಜೀವ ತುಂಬುವ ಕಲಾವಿದ ಎಂದಿಗೂ ಆದರಣೀಯ: ರಂಗನಾಥ ಮೊಗವೀರ

KannadaprabhaNewsNetwork | Published : Feb 21, 2024 2:00 AM

ಸಾರಾಂಶ

ಕಲ್ಲು ಕಟೆದು, ದೈವಸ್ವರೂಪಿಯನ್ನು ಸೃಷ್ಠಿಸಿ, ಅದಕ್ಕೆ ಜೀವ ತುಂಬುವ ಕಲಾವಿದ ಭಕ್ತರ ಹೃದಯದಲ್ಲಿ ಎಂದಿಗೂ ಆದರಣೀಯ. ಕಠಿಣ ಕಲ್ಲುಗಳನ್ನು ಮೃದುವಾಗಿಸುವ ಕಲೆಗಾರಿಕೆ ತಿಳಿದಿರುವುದು ಶಿಲ್ಪಿಗಳಿಗೆ ಮಾತ್ರ. ಅವರು ದೈವತ್ವ ಭಾವನೆಗೆ ದೇವರ ಅನುಗ್ರಹದಿಂದ ಶಿಲ್ಪಿಗಳ ಉಳಿಯಲ್ಲಿ ಪರಮಾತ್ಮ ಎಲ್ಲವನ್ನೂ ಈಡೇರಿಸಿಕೊಳ್ಳುತ್ತಾನೆ. ಹಾಗಾಗಿ, ಜನರ ಭಾವನೆಗಳು ದೈವತ್ವ ಕಡೆ ಹೊರಳುವುದಕ್ಕೆ ಕಲಾವಿದರು ಕಾರಣಕರ್ತರು ಎಂದು ಯುವ ಬ್ರಿಗೇಡ್ ತಾಲೂಕು ಸಂಚಾಲಕ ರಂಗನಾಥ ಮೊಗವೀರ ಸೊರಬದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಸೊರಬ

ಕಲ್ಲು ಕಟೆದು, ದೈವಸ್ವರೂಪಿಯನ್ನು ಸೃಷ್ಠಿಸಿ, ಅದಕ್ಕೆ ಜೀವ ತುಂಬುವ ಕಲಾವಿದ ಭಕ್ತರ ಹೃದಯದಲ್ಲಿ ಎಂದಿಗೂ ಆದರಣೀಯ ಎಂದು ಯುವ ಬ್ರಿಗೇಡ್ ತಾಲೂಕು ಸಂಚಾಲಕ ರಂಗನಾಥ ಮೊಗವೀರ ಅಭಿಪ್ರಾಯಪಟ್ಟರು.

ಸೋಮವಾರ ಪಟ್ಟಣದ ಗುರುಕುಲ ವಿದ್ಯಾ ಸಂಸ್ಥೆಯಲ್ಲಿ ತಾಲೂಕು ಯುವ ಬ್ರಿಗೇಡ್ "ಬಣ್ಣದಕಲ್ಲು " ಎಂಬ ಶೀರ್ಷಿಕೆಯಡಿ ಶಿಲ್ಪಿಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಕಲಾವಿದರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಕಠಿಣ ಕಲ್ಲುಗಳನ್ನು ಮೃದುವಾಗಿಸುವ ಕಲೆಗಾರಿಕೆ ತಿಳಿದಿರುವುದು ಶಿಲ್ಪಿಗಳಿಗೆ ಮಾತ್ರ. ಅವರು ದೈವತ್ವ ಭಾವನೆಗೆ ದೇವರ ಅನುಗ್ರಹದಿಂದ ಶಿಲ್ಪಿಗಳ ಉಳಿಯಲ್ಲಿ ಪರಮಾತ್ಮ ಎಲ್ಲವನ್ನೂ ಈಡೇರಿಸಿಕೊಳ್ಳುತ್ತಾನೆ. ಹಾಗಾಗಿ, ಜನರ ಭಾವನೆಗಳು ದೈವತ್ವ ಕಡೆ ಹೊರಳುವುದಕ್ಕೆ ಕಲಾವಿದರು ಕಾರಣಕರ್ತರು ಎಂದರು.

ಪ್ರತಿವರ್ಷ ಫೆಬ್ರವರಿಯಲ್ಲಿ ಮೈ ಲವ್ ಮೈ ನೇಷನ್ ಎನ್ನುವ ಕಾರ್ಯಕ್ರಮ ಹಮ್ಮಿಕೊಂಡು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರನ್ನು ಆಯ್ಕೆ ಮಾಡಿಕೊಂಡು ಸಮಾಜಕ್ಕೆ ಪರಿಚಯಿಸಿ, ಸನ್ಮಾನಿಸುವ ಮಹೋನ್ನತ ಕಾರ್ಯದಲ್ಲಿ ತಾಲೂಕು ಯುವ ಬ್ರಿಗೇಡ್ ಕಾಯೋನ್ಮುಖವಾಗಿದೆ. ಈ ಹಿಂದೆ ಪೌರಕಾರ್ಮಿಕರನ್ನು, ಪವರ್‌ಮನ್‌ಗಳನ್ನು, ಆಶಾ ಕಾರ್ಯಕರ್ತೆಯರನ್ನು, ಅಂಚೆ ಅಣ್ಣಂದಿರನ್ನು, ಪುರೋಹಿತರನ್ನು ಸನ್ಮಾನಿಸಿ ಗೌರವಿಸಲಾಗಿದೆ ಎಂದು ತಿಳಿಸಿದರು.

ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಿರುವ ರಾಮಲಲ್ಲಾ ವಿಗ್ರಹ ಕರ್ನಾಟಕ ಕಲ್ಲು, ಶಿಲ್ಪಿ ಎನ್ನುವುದನ್ನು ಶತಮಾನಗಳು ಉರುಳಿದರೂ ಇತಿಹಾಸ ಪುಟಗಳು ಸ್ಮರಿಸುತ್ತವೆ. ಇದು ರಾಜ್ಯದ ಪ್ರತಿಯೊಬ್ಬ ಹೃದಯದ ಸಂಭ್ರಮವಾಗಿದೆ ಎಂದರು.

ಚಿತ್ರಕಾರರ ಬಣ್ಣ ಮತ್ತು ಶಿಲ್ಪಿಯ ಕಲ್ಲು ಸೇರಿ ಬಣ್ಣದ ಕಲ್ಲು ಎಂಬ ಹೆಸರನ್ನು ಯುವ ಬ್ರಿಗೇಡ್ ನೀಡಿದೆ ಮತ್ತು ಚಿತ್ರಕಾರನ ಕಲ್ಪನೆಯ ಮೂಸೆಯಿಂದ ಮೂಡಿದ ಆ ಕಲಾಕೃತಿ ನಮ್ಮೆಲ್ಲರ ಭಾವನೆಗಳ ಪ್ರತೀಕವೇ ಆದ್ದರಿಂದ ಆ ಭಾವನೆಯ ಬಿಂಬವನ್ನು ಮೂಡಿಸಿದ ಕಲಾಕಾರರನ್ನು ಸನ್ಮಾನಿಸಿರುವುದು ಯುವ ಬ್ರಿಗೇಡ್‌ನ ಹೆಚ್ಚುಗಾರಿಕೆಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಲ್ಲು ಶಿಲ್ಪಿಗಳಾದ ರಾಘವೇಂದ್ರ ಡಿ. ನಡಹಳ್ಳಿ, ಎಸ್.ಭರತ್, ರಾಘವೇಂದ್ರ ಆಚಾರಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಯುವ ಬ್ರಿಗೇಡ್ ಜಿಲ್ಲಾ ಸಂಚಾಲಕ ಮಹೇಶ್ ಖಾರ್ವಿ, ಲೋಕೇಶ್, ಆಶಿಕ್ ನಾಗಪ್ಪ, ಸೋದರಿ ನಿವೇದಿತಾ ಪ್ರತಿಷ್ಠಾನದ ರೂಪಾ ಮಧುಕೇಶ್ವರ್, ಗುರುಕುಲ ವಿದ್ಯಾ ಸಂಸ್ಥೆಯ ಸತೀಶ್ ಬೈಂದೂರ್, ಶ್ರೇಯಸ್, ಸಂಗೀತಾ ರಾಘವೇಂದ್ರ, ರಾಜು ಆಚಾರಿ ಮೊದಲಾದವರು ಹಾಜರಿದ್ದರು.

- - -

-19ಕೆಪಿಸೊರಬ03:

ಸೊರಬ ಪಟ್ಟಣದ ಗುರುಕುಲ ವಿದ್ಯಾ ಸಂಸ್ಥೆಯಲ್ಲಿ ತಾಲೂಕು ಯುವ ಬ್ರಿಗೇಡ್ ಬಣ್ಣದ ಕಲ್ಲು ಎಂಬ ಶೀರ್ಷಿಕೆಯಡಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಿಲ್ಪ ಕಲಾವಿದರನ್ನು ಸನ್ಮಾನಿಸಲಾಯಿತು.

Share this article