ಅರಮನೆ ನಗರಿಯಲ್ಲಿ ಸಾಂಸ್ಕೃತಿಕ- ಸಂಗೀತ ಸವಾರಿ

KannadaprabhaNewsNetwork |  
Published : Sep 25, 2025, 01:00 AM IST
20 | Kannada Prabha

ಸಾರಾಂಶ

ಬೆಟ್ಟದ ಮೇಲಿನ ಮಹದೇವ ಕುರಿತ ಶರಣು ಶರಣಯ್ಯ ಎಂಬ ಕಂಸಾಳೆ ಪದಕ್ಕೆ ವೀಕ್ಷಕರೆಲ್ಲರೂ ದನಿಗೂಡಿಸುವುದರ ಜೊತೆಗೆ ಹೆಜ್ಜೆ ಹಾಕಿದರು

ಬಿ. ಶೇಖರ್‌ ಗೋಪಿನಾಥಂಕನ್ನಡಪ್ರಭ ವಾರ್ತೆ ಮೈಸೂರುದಸರಾ ಮಹೋತ್ಸವ ಅಂಗವಾಗಿ ಮೈಸೂರು ಅರಮನೆ ಅಂಗಳದಲ್ಲಿ ಸಾಂಸ್ಕೃತಿಕ‌ ಉಪ ಸಮಿತಿ ಆಯೋಜಿಸಿದ್ದ ಮೂರನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕಿ ಅನನ್ಯ ಭಟ್ ತಂಡದವರು ಜಾನಪದ ಗಾನ ವೈಭವ ಸೃಷ್ಟಿಸಿತು. ಉತ್ತಮ ಆಯ್ದ ಜಾನಪದ ಗಾನಸುಧೆ ಹರಿಸಿದರು.ಕೆಜಿಎಫ್ ಚಿತ್ರದ ಧೀರ ಧೀರ ಈ ಸುಲ್ತಾನ ಎಂಬ ಹಾಡಿಗೆ ಅದ್ಭುತ ಎಂಟ್ರಿ ಪಡೆದ ಅನನ್ಯ ಭಟ್ ಮತ್ತು ತಂಡದವರು, ಗಜವದನ ಹೇ ರಂಭಾ.. ಎಂಬ ರಂಗ ಗೀತೆ ಹಾಡಿದರು. ಮೈಸೂರು ರಾಜ್ಯದ ದೊರೆಯೇ .. ರಣಧೀರ ನಾಯಕನೇ... ನಿನ್ನಂತವನ್ಯಾರೂ ಇಲ್ವಲ್ಲೋ.. ಲೋಕದ ದೊರೆ ಎಂಬ ಹಾಡಿಗೆ ನೆರೆದಿದ್ದ ಪ್ರೇಕ್ಷಕರು ಮನಸೋತು ನಿಂತ ನಿಂತಲ್ಲೇ‌ ಕುಣಿದು ಕುಪ್ಪಳಿಸಿದರು. ಬಾರಿಸು ಕನ್ನಡ ಡಿಂಡಿಮವ.. ಓ ಕರ್ನಾಟಕ ಹೃದಯ ಶಿವಾ.. ಹಾಡು ನೆರೆದಿದ್ದವರನ್ನು ಮೋಡಿ ಮಾಡಿತು.ಅಲ್ಲದೆ, ಬೆಟ್ಟದ ಮೇಲಿನ ಮಹದೇವ ಕುರಿತ ಶರಣು ಶರಣಯ್ಯ ಎಂಬ ಕಂಸಾಳೆ ಪದಕ್ಕೆ ವೀಕ್ಷಕರೆಲ್ಲರೂ ದನಿಗೂಡಿಸುವುದರ ಜೊತೆಗೆ ಹೆಜ್ಜೆ ಹಾಕಿದರು. ಕೇಳೋ ‌ಮಾದೇವ... ಶಿವಾ..ಶಿವಾ.. ಹರ..ಹರ.. ಹಾಡು ಮಂತ್ರ ಮುಗ್ದರನ್ನಾಗಿಸಿತು.ಬಾಳ ಕಡಲಿನಲ್ಲಿ ಎರಡು ಪ್ರೀತಿಯ ದೋಣಿ.., ಸೋಜುಗಾರ ಸೂಜಿ ಮಲ್ಲಿಗೆ, ಮಹದೇವ ನಿಮ್ಮ ಮಂಡೆ‌ ಮೇಲೆ ದುಂಡು ಮಲ್ಲಿಗೆ ಹಾಡನ್ನು ಹಾಡಿನ ಮೋಡಿ ಮಾಡಿದರು. ಇದೇ ವೇಳೆ ಕುರುಬಾರಹಳ್ಳಿ‌ಯ ಕಲಾವಿದ ಪುನೀತ್ ಅವರು ರಚಿಸಿದ ಶಿವನ ಚಿತ್ರವೂ ನೆರೆದವರನ್ನು ಆಕರ್ಷಿಸಿತು‌.ಆರಂಭದಲ್ಲಿ ಚಂದನ ಕಲಾತಂಡದಿಂದ ಸುಗಮ ಸಂಗೀತ, ಕಲಾಕ್ಷೀರ ಸಂಗೀತ ಪ್ರದರ್ಶಕ ಕಲೆಗಳ ಕೇಂದ್ರದ ಸಾಗರ್‌ ಸಿಂಗ್ ತಂಡದ ಭರತನಾಟ್ಯದ ನೃತ್ಯ ಪ್ರದರ್ಶಿಸಿದರು. ಸಾಯಿ ಶಿವ್ ಲಕ್ಷ್ಮಿಕೇಶವ್ ತಂಡದ ಕರ್ನಾಟಕ ಫ್ಯೂಷನ್ ವಾದ್ಯ ಸಂಗೀತ, ಡಾ.ರಾ.ಸಾ. ನಂದಕುಮಾರ್ ಮತ್ತು ರಘುಪತಿ ಭಟ್ ಅವರಿಂದ ಗೀತಾ ಚಿತ್ರಗಳ ಕುರಿತಾಗಿ ಸಂಗೀತದೊಂದಿಗೆ ಭಗವತ್ ಗೀತೆಯ 11ನೇ‌ ಅಧ್ಯಾಯದಲ್ಲಿರುವ ವಿಶ್ವರೂಪ ದರ್ಶನವನ್ನು ಅನಾವರಣಗೊಳಿಸಿದರು. ಅಂತಿಮವಾಗಿ ಡಾ. ಮೈಸೂರು ಮಂಜುನಾಥ್, ಸುಮಂತ್ ಮಂಜುನಾಥ್ ಮತ್ತು ಮಾಳವಿ ತಂಡದ ವಯೋಲಿನ್ ಟ್ರಯೋ ಮಧುರವಾಗಿ ನುಡಿಸಿದರು. ವೈವಿಧ್ಯತೆಯ ಸವಾರಿಜಗನ್ಮೋಹನ ಅರಮನೆಯಲ್ಲಿ ಗೊರವರ ಕುಣಿತ, ಹಿಂದೂಸ್ತಾನಿ ಸಂಗೀತ, ಭರತನಾಟ್ಯ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಹನುಮಾರ್ಜುನ ಯಕ್ಷಗಾನ ಪ್ರದರ್ಶನವಾಯಿತು.ಕಲಾಮಂದಿರದಲ್ಲಿ ತಾಳವಾದ್ಯ ಲಹರಿ, ಭರತನಾಟ್ಯ, ಸಂಗೀತ ಕಾರ್ಯಕ್ರಮ, ಚೆನ್ನೈ ಕರ್ನಾಟಕ ಸಂಘದ ದಾಕ್ಷಾಯಿಣಿ ಎಸ್. ದಳವಾಯಿ ನೇತೃತ್ವದಲ್ಲಿ ನೃತ್ಯರೂಪಕ ಹಾಗೂ ಪ್ರಸಾದ ಸುತಾರ ತಂಡದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವು ರಂಜಿಸಿತು.ಗಾನಭಾರತಿ ಸಭಾಂಗಣದಲ್ಲಿ ಮಹಿಳಾ ಡೊಳ್ಳು, ಕರ್ನಾಟಕ ಶಾಸ್ತ್ರೀಯ ಸಂಗೀತ, ಗಮಕವಾಚನ, ಸುಗಮ ಸಂಗೀತ, ಸಮೂಹ ನೃತ್ಯ, ತಾಳಮದ್ದಳೆ ಜರುಗಿತು.ನಾದಬ್ರಹ್ಮ ಸಂಗೀತಸಭಾದಲ್ಲಿ ಸ್ಯಾಕ್ಸೋಫೋನ್, ಕರ್ನಾಟಕ ಶಾಸ್ತ್ರೀಯ ಸಂಗೀತ, ಸಮೂಹ ನೃತ್ಯ, ಜಾನಪದ ಗಾಯನ, ಸಿತಾರ್ ವಾದನ, ಸುಗಮ ಸಂಗೀತ ಕಾರ್ಯಕ್ರಮಗಳು ನಡೆಯಿತು.ಚಿಕ್ಕಗಡಿಯಾರ ವೇದಿಕೆಯಲ್ಲಿ ಚಿಟ್ಟಿಮೇಳ, ಜನಪದ ಗೀತ ಗಾಯನ, ಭಜನೆ, ಜನಪದ ಹೀತೆ, ತತ್ವಪದವನ್ನು ಕಲಾವಿದರು ಹಾಡಿದರು.ಪುರಭವನದಲ್ಲಿ ಪೌರಾಣಿಕ ರಂಗಗೀತೆ, ಚಂದ್ರಮನ ಪರಿಭವ- ಪೌರಾಣಿಕ ನಾಟಕ, ದಕ್ಷಯಜ್ಞ- ಪೌರಾಣಿಕ ನಾಟಕ, ಭೃಗಮುನಿಯ ಗರ್ವಭಂಗ ನಾಟಕ ಪ್ರದರ್ಶನವಾಯಿತು.ಕಲಾಮಂದಿರದ ಕಿರು ರಂಗಮಂದಿರದಲ್ಲಿ ವೀರೇಶ ದಳವಾಯಿ ತಂಡದ ಶಾಸ್ತ್ರೀಯ ಸಂಗೀತ, ಬೆಂಗಳೂರಿನ ತಾರ ಅರೇನಾ ಥಿಯೇಟರ್ ಕ್ಲಬ್ ಪ್ರಸ್ತುತಪಡಿಸಿದ ಕಂಸಾಯಣ- ದೃಶ್ಯಕಾವ್ಯ ನಾಟಕ ಹಾಗೂ ಅರಳಿ ತಂಡದ ಊರ್ವಿ ನಾಟಕವು ರಂಗಾಸಕ್ತರನ್ನು ಸೆಳೆಯಿತು.ಇನ್ನೂ ರಾಮಕೃಷ್ಣನಗರದಲ್ಲಿರುವ ರಮಾಗೋವಿಂದ ರಂಗಮಂದಿರದಲ್ಲಿ ಸೋಮನ ಕುಣಿತ, ವಚನ ಗಾಯನ, ಸುಗಮ ಸಂಗೀತ ಹಾಗೂ ಯಕ್ಷಗಾನ ಪ್ರದರ್ಶನವಾಯಿತು.

PREV

Recommended Stories

ಪಾಲಿಕೆಗಳ ಚುನಾವಣೆ ಮುಗಿವವರೆಗೆ ಬೆಂಗಳೂರಲ್ಲಿ ಮತಪಟ್ಟಿ ಪರಿಷ್ಕರಣೆ ಮುಂದೂಡಿ : ಕೇಂದ್ರ ಆಯುಕ್ತರಿಗೆ ಪತ್ರ
ಡ್ರಾಪ್‌ ನೆಪದಲ್ಲಿ ಗುತ್ತಿಗೆದಾರನ ದರೋಡೆ ಮಾಡಿದ್ದ ನಾಲ್ವರ ಬಂಧನ