ಅಣವೀರಭದ್ರೇಶ್ವರ ಜಾತ್ರೆ ಸಂಭ್ರಮದಿಂದ ನಡೆಸ್ತೇವೆ: ಸಿದ್ದಲಿಂಗ ಕ್ಷೇಮಶೆಟ್ಟಿ

KannadaprabhaNewsNetwork | Published : Feb 18, 2024 1:36 AM

ಸಾರಾಂಶ

ಮಾ.10, 11ರಂದು ಕಾಳಗಿಯಲ್ಲಿ ನಡೆಯಲಿರುವ ಜಾತ್ರೆ ಪೂರ್ವ ಸಿದ್ಧತೆ ಸಭೆಯಲ್ಲಿ ದೇವಸ್ಥಾನ ಕಾರ್ಯದರ್ಶಿ ಸಿದ್ದಲಿಂಗ ಕ್ಷೇಮಶೆಟ್ಟಿ ಜಾತ್ರೆ ಆಚರಣೆಯಲ್ಲಿ ಯಾವುದೆ ಬದಲಾವಣೆ ಇಲ್ಲ. ಹಿಂದಿನಿಂದಲೂ ನಡೆದು ಬಂದ ಪದ್ಧತಿಯಂತೆ, ಪ್ರತಿ ವರ್ಷದಂತೆ ಈ ವರ್ಷವೂ ನಡೆಸಲಾಗುವುದು ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಕಾಳಗಿ

ತಾಲೂಕಿನ ಹಿಂದೂ ಧಾರ್ಮಿಕ ಇಲಾಖೆಯ ಕೋರವಾರ ಅಣವೀರಭದ್ರೇಶ್ವರ ಜಾತ್ರೆ ಭಕ್ತರಿಗೆ ಮತ್ತು ಗ್ರಾಮಸ್ಥರ ಧಾರ್ಮಿಕ ಭಾವನೆಗೆ ಧಕ್ಕೆ ಬರದಂತೆ ಕಂದಾಯ ಇಲಾಖೆಯಿಂದ ಸಕಲ ಸಹಕಾರ ನೀಡಿ ಜಾತ್ರೆ ಅದ್ಧೂರಿಯಾಗಿ ನೆರವೆರಿಸುತ್ತೇವೆ ಎಂದು ದೇವಸ್ಥಾನದ ಕಾರ್ಯದರ್ಶಿ ಸಿದ್ದಲಿಂಗ ಕ್ಷೇಮಶೆಟ್ಟಿ ಹೇಳಿದರು.

ಮಾರ್ಚ್ 10, 11ರಂದು ಶಿವರಾತ್ರಿ ಅಮವಾಸ್ಯೆಯ ದಿನದಂದು ನಡೆಯುವ ಜಾತ್ರೆಯ ಪೂರ್ವ ಸಿದ್ಧತೆ ಸಭೆಯಲ್ಲಿ ಗ್ರಾಮಸ್ಥರ ಸಲಹೆ ಸೂಚನೆಗಳನ್ನು ಆಲಿಸಿ ನಂತರ ಅವರು ಮಾತನಾಡಿದರು.

ಜಾತ್ರೆ ಆಚರಣೆಯಲ್ಲಿ ಯಾವುದೆ ಬದಲಾವಣೆ ಇಲ್ಲ. ಹಿಂದಿನಿಂದಲೂ ನಡೆದು ಬಂದ ಪದ್ಧತಿಯಂತೆ, ಪ್ರತಿ ವರ್ಷದಂತೆ ಈ ವರ್ಷವೂ ಸ್ವಾಮಿಯ ಜಾತ್ರೆ ಭಕ್ತರ ಇಚ್ಛೆಯಂತೆ ಧಾರ್ಮಿಕ ದತ್ತಿ ಇಲಾಖೆಯಿಂದ ನೆರವೇರಿಸಿಕೊಡುತ್ತೇವೆ. ಬರುವ ಭಕ್ತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಸಕಲ ಪೋಲಿಸ್ ಬಂದೋಬಸ್ತ್ ಒದಗಿಸಲಾಗಿದೆ. ಇನ್ನುಳಿದ ಆರೋಗ್ಯ ಸೇವೆ, ವಿದ್ಯುತ್, ಅಗ್ನಿಶಾಮಕ, ಪಿಡಬ್ಲ್ಯೂಡಿ, ಪಿಆರ್‌ಇ, ರಸ್ತೆ ಸಾರಿಗೆ, ಗ್ರಾಮ ಪಂಚಾಯತ್‌ ಸೇರಿ ವಿವಿಧ ಇಲಾಖೆ ವತಿಯಿಂದ ಸಕಲ ಸಹಕಾರ ಜಾತ್ರೆಗೆ ಒದಗಿಸಲಾಗಿದೆ ಎಂದರು.

ಇದೆ ಸಂದರ್ಭದಲ್ಲಿ ಕಾಳಗಿ ತಹಸೀಲ್ದಾರ್‌ ಘಮಾವತಿ ರಾಠೋಡ ನೇತೃತ್ವದಲ್ಲಿ ದೇವಸ್ಥಾನ ಹುಂಡಿ ಎಣಿಕೆ ಮಾಡಲಾಯಿತು. 26 ಸೆಪ್ಟೆಂಬರ್ 2023 ರಿಂದ ಫೆ.14 2024 ಅವಧಿಯಲ್ಲಿ ಒಟ್ಟು ಸಂಗ್ರಹವಾಗಿದ್ದ ಹಣ 5,37,007 ರು., 135 ಗ್ರಾಂ, ಬೆಳ್ಳಿ ಸಂಗ್ರಹವಾಗಿದೆ. ಈ ಹಣವನ್ನು ಕೆ‌ಜಿಬಿ ಹೆಬ್ಬಾಳ ಶಾಖೆಯಲ್ಲಿ ದೇವಸ್ಥಾನದ ಹೆಸರಲ್ಲಿ ಜಮಾ ಮಾಡಲಾಗಿದೆ ಎಂದರು.

ಅದೆ ರೀತಿಯಲ್ಲಿ ಜು.8 2022 ರಿಂದ 2023 ಡಿ.29 2023ರವರೆಗೆ ಕಾಳಗಿ ಎಸ್‌ಬಿ‌ಐ ಖಾತೆಯಲ್ಲಿ ದೇವಸ್ಥಾನದ ಇ ಹುಂಡಿಯಲ್ಲಿ ಒಟ್ಟು ‌3,46,053 ರು. ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದರು.

ತಹಸೀಲ್ದಾರ್‌ ಘಮಾವತಿ ರಾಠೋಡ, ಕೋರವಾರ ಗ್ರಾಪಂ ಅಧ್ಯಕ್ಷೆ ಮಲ್ಲಮ್ಮ ಶಂಕರ, ಆರ್‌‌ಐ ಮಂಜುನಾಥ ಮಹಾರುದ್ರ, ಸಿಪಿಐ ಜಗದೇವಪ್ಪ ಪಾಳಾ, ಮಾಡಬೂಳ ಪುಎಸ್‌ಐ ಪಟೇಲ, ಜೆಸ್ಕಾಂ ಎಇಇ ಪ್ರಭು ಮಡ್ಡಿತೋಟ, ಪಿಡಬ್ಲ್ಯೂಡಿ ಎಇಇ ಸಿದ್ದರಾಮ ದಂಡಗೂಲ್ಕರ, ಆರೋಗ್ಯ ಸಹಾಯಕ ಎಮ್.ಎಸ್.ಪೂಜಾರಿ, ಕೆಕೆಆರ್‌ಟಿಸಿ ಕಂಟ್ರೋಲರ್‌ ರವಿ,‌ ಅರ್ಚಕ ಧನಂಜಯ ಹಿರೇಮಠ, ಗ್ರಾಪಂ ಸದಸ್ಯ ಬಸವರಾಜ ಕಂಠಿ, ಮಲ್ಲಿಕಾರ್ಜುನ ಸೂರಾ, ಶಿವಕುಮಾರ್ ಕಲಶೆಟ್ಟಿ, ರೇವಣಸಿದ್ದಯ್ಯ ಮಡಪತ್ತಿ, ಹಣಮಂತ ಮೇಲ್ಕೇರಿ, ಜೈಭೀಮ, ರೇವಸಿದ್ದಯ್ಯ ಸ್ವಾಮಿ ಕಲಗುರ್ತಿ, ಬೆರಳಚ್ಚುಗಾರ ಅಣವೀರಯ್ಯ ಕಾಳಗಿ ಇದ್ದರು.

Share this article