ಎಕರೆಗೆ ₹25 ಸಾವಿರ ಬರ ಪರಿಹಾರ ಘೋಷಿಸಿ: ಎಚ್.ಆರ್‌.ಬಸವರಾಜಪ್ಪ

KannadaprabhaNewsNetwork | Published : Oct 21, 2023 12:30 AM

ಸಾರಾಂಶ

ಶಿವಮೊಗ್ಗ ಜಿಲ್ಲಾ ರೈತ ಸಂಘದ ಕಚೇರಿಯಲ್ಲಿ ಜಿಲ್ಲಾ ಸಮಿತಿ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಮುರುಗೇಂದ್ರಪ್ಪ ಮತ್ತು ರಾಮಚಂದ್ರಪ್ಪ ರೈತ ಸಂಘ ಹೋರಾಟಗಳಲ್ಲಿ ಸಕ್ರಿಯ ತೊಡಗಿಸಿಕೊಂಡವರು. ಅವರ ರೈತಪರ ಸೇವೆಗಳು ಪ್ರಶಂಸನೀಯ. ಆದರೆ, ಈ ಅಕಾಲಿಕ ಮರಣ ರೈತ ಸಂಘಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಹೇಳಿದರು. ಶಿವಮೊಗ್ಗ ಜಿಲ್ಲಾ ರೈತ ಸಂಘದ ಕಚೇರಿಯಲ್ಲಿ ಜಿಲ್ಲಾ ಸಮಿತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಉಪಾಧ್ಯಕ್ಷ ಜಿ.ಎಂ. ಮುರುಗೇಂದ್ರಪ್ಪ ಮತ್ತು ಜಿಲ್ಲಾ ಕಾರ್ಯಾಧ್ಯಕ್ಷ ಡಿ.ಎಚ್. ರಾಮಚಂದ್ರಪ್ಪ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ಈ ವರ್ಷ ರಾಜ್ಯದಲ್ಲಿ ಭೀಕರ ಬರಗಾಲವಿದೆ. ಮಳೆಯ ತೀವ್ರ ಕೊರತೆ ಉಂಟಾಗಿ ಅಣೆಕಟ್ಟೆಗಳು ಸಹ ತುಂಬಿಲ್ಲ. ಆದ್ದರಿಂದ ಕೇಂದ್ರ ಸರ್ಕಾರದ ಹಣಕ್ಕಾಗಿ ಕಾಯದೇ ರಾಜ್ಯ ಸರ್ಕಾರ ಬೆಳೆ ಪರಿಹಾರವಾಗಿ ಎಕರೆಗೆ ₹25 ಸಾವಿರ ರು.ಗಳನ್ನು ಘೋಷಿಸಿ, ಬಗರ್ ಹುಕುಂ ಸಾಗುವಾಳಿದಾರರಿಗೂ ಬರಗಾಲ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಸರ್ಕಾರ ವಿದ್ಯುತ್ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ನೀರಾವರಿ ಬೆಳೆ ಪರಿಹಾರವಾಗಿ ರೈತರಿಗೆ ಎಕರೆಗೆ ೨೫ ಸಾವಿರ ರೂ. ಆರ್ಥಿಕ ನೆರವು ಘೋಷಿಸಬೇಕು.ಪಂಪ್‌ಸೆಟ್‌ಗಳಿಗೆ ಈಗ ೫ತಾಸು ವಿದ್ಯುತ್ ನೀಡುತ್ತಿದ್ದು, ರೈತರು ಬೆಳೆದ ಬೆಳೆಯಲ್ಲಿ ಉಳಿದಿರುವ ಬೆಳೆಯನ್ನು ಉಳಿಸಿಕೊಳ್ಳಲು ಕನಿಷ್ಟ ೭ ಗಂಟೆ ಸೆಟ್‌ಗೆ ವಿದ್ಯುತ್ ನೀಡಬೇಕು. ಅಕ್ರಮ- ಸಕ್ರಮದಡಿಯಲ್ಲಿ ಹಣ ಕಟ್ಟಿರುವ ಪಂಪ್ ಸೆಟ್ ಗಳಿಗೆ ಕಂಬ, ತಂತಿಗಳನ್ನು ಹಾಕಿಸಿ ಕೊಡಬೇಕು ಮತ್ತು ಸುಟ್ಟು ಹೋದ ತಕ್ಷಣವೇ ಹಾಕಿಸಿ ಕೊಡಬೇಕು. ಬ್ಯಾಂಕ್,ಸಹಕಾರಿ ಸಂಸ್ಥೆ, ಫೈನಾನ್ಸ್ ಗಳು ಸಾಲ ವಸೂಲಾತಿ ತಡೆಹಿಡಿಯ ಬೇಕು. ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು. ಸಂಘದ ರಾಜ್ಯ ಉಪಾಧ್ಯಕ್ಷ ಹಿಟ್ಟೂರು ರಾಜು, ಟಿ.ಎಂ ಚಂದ್ರಪ್ಪ, ಜಿಲ್ಲಾಧ್ಯಕ್ಷ ಎಸ್.ಶಿವ ಮೂರ್ತಿ, ಕಾರ್ಯಾಧ್ಯಕ್ಷ ಕೆ.ರಾಘ ವೇಂದ್ರ, ಪಿ.ಡಿ ಮಂಜಪ್ಪ, ಪ್ರಮುಖರಾದ ಪಿ.ಶೇಖರಪ್ಪ, ಆರ್. ಚಂದ್ರಶೇಖರ್, ಮಹ ದೇವಪ್ಪ, ನಂಜುಂಡಪ್ಪ, ಕಸಟ್ಟಿ ರುದ್ರೇಶ್ ಮತ್ತಿತರರು ಇದ್ದರು. ---------------------------- ಪೋಟೋ: 20ಎಸ್‌ಎಂಜಿಕೆಪಿ07 ಶಿವಮೊಗ್ಗ ಜಿಲ್ಲಾ ರೈತ ಸಂಘದ ಕಚೇರಿಯಲ್ಲಿ ಜಿಲ್ಲಾ ಸಮಿತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಉಪಾಧ್ಯಕ್ಷ ಜಿ.ಎಂ ಮುರುಗೇಂದ್ರಪ್ಪ ಮತ್ತು ಜಿಲ್ಲಾ ಕಾರ್ಯಾಧ್ಯಕ್ಷ ಡಿ.ಎಚ್ ರಾಮಚಂದ್ರಪ್ಪನವರ ಶ್ರದ್ಧಾಂಜಲಿ ಸಭೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

Share this article