ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಬೆಳೆಗಾರರ ಸಂಘವು ರೈತ ಸಂಘಗಳ ಜೊತೆಗೂಡಿ ಸಹಕರಿಸಿದರೆ ಮಾತ್ರ ರೈತರ ಸಮಸ್ಯೆ ಮತ್ತು ರೈತ ಹೋರಾಟಕ್ಕೆ ಫಲಶ್ರುತಿ ದೊರೆಯುತ್ತದೆ ಎಂದು ಶನಿವಾರಸಂತೆ ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಆರ್.ಪಿ.ಲಕ್ಷ್ಮಣ್ ಅಭಿಪ್ರಾಯ ಪಟ್ಟರು.ಅವರು ಪಟ್ಟಣದ ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಶನಿವಾರಸಂತೆ ಹೋಬಳಿ ಬೆಳೆಗಾರರ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೆಳೆಗಾರರಿಗೆ ಮತ್ತು ರೈತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರ ಅಧಿಕಾರಿಗಳಿಂದ ಸಮಸ್ಯೆಗಳಾಗುತ್ತದೆ. ಬೆಳೆಗಾರರ ಮತ್ತು ರೈತರ ಸಮಸ್ಯೆಗಳ ಕುರಿತಾಗಿ ಹೋರಾಟದ ಅನಿವಾರ್ಯತೆ ಇರುತ್ತದೆ ಹೋರಾಟ ಯಶಸ್ವಿಯಾಗಿ ಫಲಶ್ರುತಿಗಳಿಸಬೇಕಾದರೆ ಒಗ್ಗಟ್ಟು ಮುಖ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಬೆಳೆಗಾರರ ಸಂಘಗಳು ರೈತ ಸಂಘಗಳ ಜೊತೆ ಕೈಜೋಡಿಸುವ ಮೂಲಕ ರೈತ ಸಂಘಟನೆಗಳನ್ನು ಬಲಪಡಿಸಬೇಕು. ಈ ನಿಟ್ಟಿನಲ್ಲಿ ಸಂಘಟನೆಯಲ್ಲಿ ಬಲವಿದೆ ಎಂಬುವುದನ್ನು ತೋರಿಸಿಕೊಡಬೇಕು. ನಮ್ಮ ಬೆಳೆಗಾರರ ಸಂಘದ ಬೆಳವಣಿಗಾಗಿ ತಾವೆಲ್ಲರೂಸಹಕರಿಸುವಂತೆ ಅವರು ಮನವಿ ಮಾಡಿದರು. ನಮ್ಮ ಸಂಘಕ್ಕೆ ಸ್ವಂತ ಜಾಗವಾಗಲಿ ಕಟ್ಟಡವಾಗಿ ಇರುವುದಿಲ್ಲ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಿಸುವ ಆಲೋಚನೆ ಇದ್ದು ಈ ದೆಸೆಯಲ್ಲಿ ಕಟ್ಟಡ ನಿರ್ಮಿಸಲು ಎಲ್ಲರ ಸಹಕಾರದ ಅಗತ್ಯವಿದೆ ಎಂದರು.
ಬೆಳೆಗಾರರ ಸಂಘದ ಖಜಾಂಜಿ ರಂಗಸ್ವಾಮಿ ಮಾತನಾಡಿ, ಸಂಘದ ಏಳಿಗೆಗೆ ಪ್ರತಿಯೊಬ್ಬ ಬೆಳೆಗಾರರು ಸಹಕರಿಸಬೇಕು ಒಗ್ಗಟ್ಟಿನ ಬಲದ ಮೂಲಕ ಸಂಘದ ಪ್ರಗತಿಗಾಗಿ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.ಮಹಾಸಭೆಯಲ್ಲಿ ಭಾಗವಹಿಸಿದ ಸದಸ್ಯರು ಸಂಘದ ಬೆಳವಣಿಗೆ, ಬೆಳೆಗಾರರ ಸಮಸ್ಯೆ, ಸಂಘಕ್ಕೆ ಸ್ವಂತ ಕಟ್ಟಡದ ಅವಶ್ಯಕತೆ ಇನ್ನು ಮುಂತಾದ ವಿಚಾರಗಳ ಬಗ್ಗೆ ಚರ್ಚಿಸಿದರು. ಬೆಳೆಗಾರರ ಸಂಘದಲ್ಲಿ ಪ್ರಸ್ತುತ ಸಾಲಿನಲ್ಲಿ 200 ಮಂದಿ ಸದಸ್ಯರಿದ್ದು ಮತ್ತಷ್ಟು ಬೆಳೆಗಾರರು ಸಂಘದ ಸದಸ್ಯರಾಗುವ ಮೂಲಕ ಸಂಘಟನೆಯನ್ನು ಅಭಿವೃದ್ಧಿಗೊಳಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.
ಮಹಾಸಭೆಯಲ್ಲಿ ಬೆಳೆಗಾರರ ನಿರ್ದೇಶಕ ಎಸ್.ಎಂ.ಉಮಾಶಂಕರ್ ವರದಿ ಮಂಡಿಸಿದರು. ಸಭೆಯಲ್ಲಿ ಬೆಳೆಗಾರರ ಸಂಘದ ಉಪಾಧ್ಯಕ್ಷ ಎಚ್.ಪಿ.ದಿವಾಕರ್, ಕಾರ್ಯದರ್ಶಿ ಎಸ್.ಪಿ.ಪುಟ್ಟಸ್ವಾಮಿ ಸಂಘದ ಪದಾಧಿಕಾರಿಗಳು, ಸದಸ್ಯರು, ಬೆಳೆಗಾರರು ಹಾಜರಿದ್ದರು. ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ಸುಬ್ಬಪ್ಪ, ಕಾಂತರಾಜು ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು