ಪಕ್ಷ ವಿರೋಧಿಗಳನ್ನು ಉಚ್ಚಾಟಿಸಲು ಮನವಿ

KannadaprabhaNewsNetwork |  
Published : Aug 24, 2024, 01:25 AM IST
ಚಚಚ | Kannada Prabha

ಸಾರಾಂಶ

ಅಮೀನಗಡದಲ್ಲಿ ಶುಕ್ರವಾರ ಜರುಗಿದ ಪಟ್ಟಣ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿಗೆ ಕಾಂಗ್ರೆಸ್ ಕಾರ್ಯಕರ್ತರಾದ ಬಸವರಾಜ ಎಸ್.ನಿಡಗುಂದಿ ಹಾಗೂ ಯಮನಪ್ಪ ಎಸ್.ಬಂಡಿವಡ್ಡರ ಅವರ ಪಕ್ಷ ವಿರೋಧಿ ಚಟುವಟಿಕೆಯೇ ಕಾರಣ ಎಂದು ಅಮೀನಗಡ ಕಾಂಗ್ರೆಸ್ ನಗರಘಟಕದ ಅಧ್ಯಕ್ಷ ಸಯ್ಯದಪೀರಾ ಖಾದ್ರಿ, ಗೌರವಾಧ್ಯಕ್ಷ ಎಸ್.ಎಸ್.ಚಳ್ಳಗಡದ ಹಾಗೂ ಮತಕ್ಷೇತ್ರದ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ರಾಂಪೂರ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಅಮೀನಗಡ

ಅವರು ಅಮೀನಗಡದಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಮೀನಗಡ ಪಟ್ಟಣ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ಹಲವಾರು ಸಭೆಗಳನ್ನು ಕರೆಯಲಾಗುತ್ತಿತ್ತು. ಅಂಥಹ ಸಂಧರ್ಭದಲ್ಲಿ ಹಾಜರಾಗುತ್ತಿದ್ದ, ಬಸವರಾಜ ಎಸ್.ನಿಡಗುಂದಿ ಹಾಗೂ ಯಮನಪ್ಪ ಎಸ್.ಬಂಡಿವಡ್ಡರ, ಸಭೆಯ ನಡಾವಳಿಗಳ ಬಗ್ಗೆ ವಿರೋಧಿಗಳಿಗೂ ತಿಳಿಸುವ ಮೂಲಕ ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವುದಲ್ಲದೇ, ಕಾಂಗ್ರೆಸ್‌ನವರೇ ಆದ ಬೇಬಿ ರಮೇಶ ಚವ್ಹಾಣ ಅವರಿಗೆ ಅಧ್ಯಕ್ಷಗಾದಿ ಆಮೀಷ ಒಡ್ಡುವ ಮೂಲಕ ಅವರನ್ನು ಪ್ರತಿಪಕ್ಷಕ್ಕೆ ಸೆಳೆದಿದ್ದಾರೆ. ಈ ಎಲ್ಲ ಘಟನೆಗಳಿಗೆ ಮೂಲ ಕಾರಣವೇ ಬಸವರಾಜ ಎಸ್.ನಿಡಗುಂದಿ ಹಾಗೂ ಯಮನಪ್ಪ ಎಸ್.ಬಂಡಿವಡ್ಡರ ಆಗಿದ್ದು, ಅವರನ್ನು ಆರು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಬೇಕೆಂದು ಜಿಲ್ಲಾಧ್ಯಕ್ಷರಿಗೆ ಶಿಫಾರಸ್ ಮಾಡಲಾಗಿದೆ. ಅವರು ಅನುಮತಿಸಿದ್ದಾರೆ. ಇದರಂತೆ ಪಕ್ಷವಿರೋಧಿ ಚಟುಟವಟಿಕೆ ಮಾಡುವವರ ಮೇಲೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದರು.

ಮತ್ತೆ ಹದಿನೈದು ದಿನಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ:

ಈಗ ಅಧ್ಯಕ್ಷಸ್ಥಾನವೇರಿರುವ ಬಿಜೆಪಿ ಬೆಂಬಲಿತ ಅಭ್ಯರ್ಥಿ ಬೇಬಿ ಚವ್ಹಾಣ ಚುನಾವಣಾಧಿಕಾರಿಗೆ ಸರಿಯಾಗಿ ಜಾತಿಪ್ರಮಾಣ ಪತ್ರ ಸಲ್ಲಿಸಿಲ್ಲ. ಅಲ್ಲದೇ ವಿಪ್ ಉಲ್ಲಂಘನೆಯಾಗಿದೆ. ಈ ಬಗ್ಗೆ ಸ್ಥಳದಲ್ಲೇ ಚುನಾವಣಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ನಾಳೆ ಶಾಸಕರೊಂದಿಗೆ ಬಾಗಲಕೋಟೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಈ ಆಯ್ಕೆ ಕಾನೂನು ಬಾಹಿರವಾಗಿದ್ದು ಇನ್ನು ಹದಿನೈದು ದಿನದಲ್ಲೇ ಕಾಂಗ್ರೆಸ್ ಪಕ್ಷದ ಸದಸ್ಯರು ಅಧಿಕಾರ ಹಿಡಿಯಲಿದ್ದಾರೆ ಎಂದರು.

PREV

Recommended Stories

ಭವಿಷ್ಯದ ದೃಷ್ಟಿಯಿಂದ ಬೆಂಗ್ಳೂರು ಸಜ್ಜುಗೊಳಿಸಿ: ಮೋದಿ
ಕಾಯುವಿಕೆ ಅಂತ್ಯ । 19 ಕಿ.ಮೀ. ಎಲೆಕ್ಟ್ರಾನಿಕ್ ಸಿಟಿಗೆ ಹಳದಿ ಮಾರ್ಗ ಮೆಟ್ರೋ - 25 ನಿಮಿಷಕ್ಕೆ 1 ರೈಲು