ಬೇಡಿಕೆ ಈಡೇರಿಸಲು ಹರಿಹರ ತಾಲೂಕು ಶಿಕ್ಷಕರ ಸಂಘ ತಹಸೀಲ್ದಾರ್‌ಗೆ ಮನವಿ

KannadaprabhaNewsNetwork |  
Published : Aug 10, 2024, 01:40 AM IST
೮ಎಚ್‌ಆರ್‌ಆರ್೨:ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ದಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗುರುವಾರ ತಹಸೀಲ್ದಾರ್ ಗುರು ಬಸವರಾಜ್‌ಗೆ ಮನವಿ ಮಾಡಿದರು. ಚಂದ್ರಪ್ಪ,ಶರಣಕುಮಾರ್ ಹೆಗಡೆ, ಕರಿಬಸಪ್ಪ ಕುಪ್ಪೇಲೂರು ಹಾಗೂ ತರರರಿದ್ದರು.,,,,,,,,,,,,,,,,,,,,,,,,, | Kannada Prabha

ಸಾರಾಂಶ

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹರಿಹರ ತಾಲೂಕು ಘಟಕ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿ ತಹಸೀಲ್ದಾರ್ ಗುರು ಬಸವರಾಜ್‌ ಅವರಿಗೆ ಗುರುವಾರ ಮನವಿ ಸಲ್ಲಿಸಿದ್ದಾರೆ.

- ಸೇವಾ ಜೇಷ್ಠತೆ ಆಧಾರದಲ್ಲಿ ಬಡ್ತಿಗೆ ಮನವಿ- - - ಹರಿಹರ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹರಿಹರ ತಾಲೂಕು ಘಟಕ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿ ತಹಸೀಲ್ದಾರ್ ಗುರು ಬಸವರಾಜ್‌ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

ಪದಾಧಿಕಾರಿಗಳು ಮಾತನಾಡಿ, ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಈ ಪೂರ್ವದಂತೆ ಮುಖ್ಯ ಗುರುಗಳ ಹಾಗೂ ಹಿರಿಯ ಮುಖ್ಯ ಗುರುಗಳ ಹುದ್ದೆಗೆ ಸೇವಾ ಜೇಷ್ಠತೆ ಆಧಾರದ ಮೇಲೆ ಬಡ್ತಿ ನೀಡಬೇಕು. ೨೦೧೭ರವರೆಗೆ ನೇಮಕವಾದ ಶಿಕ್ಷಕರನ್ನು ೧ ರಿಂದ ೭ನೇ ತರಗತಿ ಶಿಕ್ಷಕರೆಂದು ಪರಿಗಣಿಸಬೇಕು. ಪದವಿ ಪೂರೈಸಿದ ಎಲ್ಲರಿಗೂ ಸೇವಾ ಜೇಷ್ಠತೆಯೊಂದಿಗೆ ಪದವೀಧರ ಶಿಕ್ಷಕರೆಂದು ಪದನಾಮೀಕರಿಸಬೇಕು. ಅರ್ಹ ವಿದ್ಯಾರ್ಹತೆ ಪೂರೈಸಿದ ೨೦೧೬ ಕ್ಕಿಂತ ಮೊದಲು ೧ರಿಂದ ೮ನೇ ತರಗತಿಗೆ ನೇಮಕಾತಿಯಾದ ಎಲ್ಲ ಪ್ರಾಥಮಿಕ ಶಾಲಾ ಶಿಕ್ಷಕರ ಸಂಖ್ಯೆ ಮುಗಿಯುವವರೆಗೂ ಈ ಮೊದಲಿನಂತೆ ಅರ್ಹತೆ ಆಧಾರದ ಮೇಲೆ ಪ್ರೌಢಶಾಲೆಗೆ ಬಡ್ತಿ ನೀಡಬೇಕು ಎಂದರು.

ಅರ್ಹ ವಿದ್ಯಾರ್ಹತೆ (ಪದವಿ+ಶಿಕ್ಷಣ ತರಬೇತಿ) ಹೊಂದಿದ ೨೦೧೬ಕ್ಕಿಂತ ಪೂರ್ವದಲ್ಲಿ ನೇಮಕಾತಿ ಆಗಿರುವ ಪ್ರಾಥಮಿಕ ಶಾಲಾ ಸಹ ಶಿಕ್ಷಕರಿಗೆ ಸೇವಾ ಜೇಷ್ಠತೆ ರಕ್ಷಣೆಯೊಂದಿಗೆ ಬಡ್ತಿ ನೀಡುವುದು. ೨೦೧೬ಕ್ಕಿಂತ ಮೊದಲು ನೇಮಕಾತಿಯಾದ ಸರ್ವರಿಗೂ ಈ ಹಿಂದಿನಂತೆ ಪ್ರೌಢಶಾಲೆಗಳಿಗೆ ವಿದ್ಯಾರ್ಹತೆ ಆಧಾರದ ಮೇಲೆ ಬಡ್ತಿ ಹಾಗೂ ಮುಖ್ಯ ಗುರುಗಳ ಹುದ್ದೆಗಳಿಗೆ ಸೇವಾ ಜೇಷ್ಠತೆಯಂತೆ ಬಡ್ತಿ ನೀಡಬೇಕು ಎಂದರು.

ಸಂಘದ ತಾಲೂಕು ಅಧ್ಯಕ್ಷ ಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಶರಣಕುಮಾರ್, ಉಪಾಧ್ಯಕ್ಷ ಕರಿಬಸಪ್ಪ ಕುಪ್ಪೇಲೂರು, ಸಂಘಟನಾ ಕಾರ್ಯದರ್ಶಿ ಸುಮಂಗಲ, ಮಂಜಪ್ಪ ಬಿದರಿ, ರುದ್ರಪ್ಪ, ಬಿ.ಎನ್.ವೀರಪ್ಪ, ತಿಪ್ಪೇಸ್ವಾಮಿ, ಚನ್ನಕೇಶವ ಕಟ್ಟೆ, ಹಾಗೂ ಇತರರಿದ್ದರು.

- - - -೮ಎಚ್‌ಆರ್‌ಆರ್೨:

PREV

Latest Stories

ನಗರದಲ್ಲಿ ಶೀಘ್ರ ಟೋಯಿಂಗ್ ವ್ಯವಸ್ಥೆ ಮರು ಜಾರಿ:ಪರಂ
ದೇಶದಲ್ಲೇ ಫಸ್ಟ್‌ ಟೈಂ ಜನರ ಮನೆ ಬಾಗಿಲಿಗೆ ಪೊಲೀಸ್ : ಪರಂ
ನೀರುಗಾಲುವೆಗಳಲ್ಲಿ ಟೆಕ್‌ ಪಾರ್ಕ್‌ ನಿರ್ಮಾಣದಿಂದ ಪ್ರವಾಹ