ಅನುದಾನಿತ ಶಾಲಾ-ಕಾಲೇಜು ನೌಕರರಿಂದ ಮನವಿ

KannadaprabhaNewsNetwork | Published : Jul 7, 2024 1:19 AM

ಸಾರಾಂಶ

ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ದಶಕಗಳಿಂದ ಖಾಲಿ ಇರುವ ಹುದ್ದೆ ಭರ್ತಿ ಮಾಡಲು ಶೀಘ್ರ ಕ್ರಮ ಕೈಗೊಳ್ಳುವುದು

ಮುಂಡರಗಿ: ಕರ್ನಾಟಕ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ ತಾಲೂಕು ಘಟಕ ಮುಂಡರಗಿ, ಅನುದಾನಿತ ಶಾಲಾ-ಕಾಲೇಜುಗಳ ನೌಕರರ ಪ್ರಮುಖ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಶನಿವಾರ ತಹಸೀಲ್ದಾರ್ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು.

ಈಗಾಗಲೇ ಸರ್ಕಾರ ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಎನ್‌ಪಿಎಸ್ ರದ್ದುಗೊಳಿಸಿ ಓಪಿಎಸ್ ಜಾರಿಗೊಳಿಸುವ ಭರವಸೆ ನೀಡಿದ್ದು, ಭರವಸೆಯಂತೆ ಹಳೆಯ ನಿಶ್ಚಿತ ಪಿಂಚಣಿ ಜಾರಿಗೊಳಿಸಬೇಕು, ಓಪಿಎಸ್ ಜಾರಿ ವಿಳಂಬವಾದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ನೀಡುತ್ತಿರುವಂತೆ ಎನ್‌ಪಿಎಸ್ ಯಥಾವತ್ತಾಗಿ ಜಾರಿ ಮಾಡಬೇಕು. ಅಂದರೆ ನೇಮಕಾತಿ ಪ್ರಾಧಿಕಾರದ ಪ್ರಾಧಿಕಾರದ ವಂತಿಗೆ ಆಡಳಿತ ಮಂಡಳಿಗಳ ಬದಲಾಗಿ ಸರ್ಕಾರವು ಭರಿಸಲು ಕ್ರಮ ವಹಿಸಬೇಕು.

ಕರ್ನಾಟಕ ಖಾಸಗಿ ಅನುದಾನಿತ, ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿಗಳ ವೇತನ, ನಿವೃತ್ತಿ ವೇತನ ಮತ್ತು ಇತರೆ ಸೌಲಭ್ಯಗಳ ನಿಯಂತ್ರಣ ವಿಧಯಕ್ಕೆ 2014ಕ್ಕೆ ತಿದ್ದುಪಡಿ ತಂದು ಅಥವಾ ರದ್ದುಪಡಿಸಿ ಭವಿಷ್ಯಾವರ್ತಿಯಾಗಿ ಜಾರಿಗೆ ಬರುವಂತೆ ಕ್ರಮವಹಿಸುವುದು, ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ದಶಕಗಳಿಂದ ಖಾಲಿ ಇರುವ ಹುದ್ದೆ ಭರ್ತಿ ಮಾಡಲು ಶೀಘ್ರ ಕ್ರಮ ಕೈಗೊಳ್ಳುವುದು, ಅನುದಾನಿತ ನೌಕರರಿಗೂ ಕೂಡ ಸರ್ಕಾರಿ ನೌಕರರಂತೆ ಜ್ಯೋತಿ ಸಂಜೀವಿನಿ ಯೋಜನೆ ಜಾರಿಗೊಳಿಸಬೇಕು.

ಸರ್ಕಾರಿ ಶಾಲಾ-ಕಾಲೇಜುಗಳು ಮತ್ತು ಅನುದಾನದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗಾಗಲಿ ಅಥವಾ ನೌಕರರಿಗಾಗಲಿ ಯಾವುದೇ ತಾರತಮ್ಯ ನೀತಿ ಮಾಡಬಾರದು ಎನ್ನುವ ಪ್ರಮುಖ ಬೇಡಿಕೆ ಮನವಿಯಲ್ಲಿ ತಿಳಿಸಿದ್ದು, ಸರ್ಕಾರ ಶೀಘ್ರ ಕ್ರಮ ವಹಿಸಬೇಕು. ಕಾಂಗ್ರೆಸ್ ಸರ್ಕಾರವು ತಮ್ಮ ಪಕ್ಷದ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಸಹಾನುಭೂತಿಯಿಂದ ಅನುದಾನಿತ ಶಾಲಾ-ಕಾಲೇಜುಗಳನ್ನು ನೌಕರರಿಗೆ ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೆ ತರುವುದಾಗಿ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದೀರಿ. ಈಗಾಗಲೇ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ಗತಿಸಿದೆ. ಆದ್ದರಿಂದ ಹೆಚ್ಚು ವಿಳಂಬ ನೀತಿ ಅನುಸರಿಸಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಾವಿರಾರು ನೌಕರರು ಮತ್ತೆ ಹೋರಾಟಕ್ಕಿಳಿಯುವಂತಾಗಬಾರದು. ನೌಕರರ ನ್ಯಾಯತ ಬೇಡಿಕೆ ಶೀಘ್ರದಲ್ಲಿಯೇ ಈಡೇರಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಗ್ರೇಡ್ 2 ತಹಸೀಲ್ದಾರ ಕೆ.ರಾಧಾ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಂಘದ ತಾಲೂಕಾಧ್ಯಕ್ಷ ಧನೇಶ ನಾಯಕ, ಪ್ರಧಾನ ಕಾರ್ಯದರ್ಶಿ ಅಶೋಕ ಭಜಂತ್ರಿ, ಗೌರವಾಧ್ಯಕ್ಷ ಎಂ.ಎಚ್.ನಾಯಕ, ಉಪಾಧ್ಯಕ್ಷ ಆರ್.ವಿ. ಅರ್ಕಸಾಲಿ, ಸಂಘಟನಾ ಕಾರ್ಯದರ್ಶಿ ಎಸ್.ಎ. ಮರಿಗೌಡರ, ಸಹಕಾರ್ಯದರ್ಶಿ ವೈ.ಎಚ್.ವಾಲಿಕಾರ, ಪಿ.ಕೆ. ನಾಯಕ, ಖಜಾಂಚಿ ಎಸ್.ಡಿ. ರಾಥೋಡ, ಬಿ.ಎಸ್. ಉಗಾಡೆ, ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಎಸ್. ಪಾಟೀಲ. ತಾಲೂಕಾಧ್ಯಕ್ಷ ಡಿ.ಜಿ. ಪೂಜಾರ, ಪ್ರ.ಕಾರ್ಯದರ್ಶಿ ಮಂಜುನಾಥ ತೆಗ್ಗಿನಮನಿ, ಶಿವಕುಮಾರ ಗಿಂಡಿಮಠ, ಧನೇಶ್ ಲಮಾಣಿ, ಎಸ್.ಸಿ.ಚಕ್ಕಡಿಮಠ, ಎಸ್.ಎನ್. ಕಲ್ಲಿಗನೂರ, ದೇವರೆಡ್ಡಿ ಇಮ್ರಾಪುರ್, ಡಿ.ಎಫ್. ಹೊಸಮನಿ, ಎಂ.ಟಿ. ಮಾಳಪುರ್, ವಿ.ವೈ.ಕೊರ್ಲಳ್ಳಿ, ಪಿ.ಟಿ. ಉಳ್ಳಾಗಡ್ಡಿ, ಎಸ್.ಬಿ. ಗದಗ, ಎಸ್.ಎ. ಜೋಗಿನ್, ಟಿ.ಆರ್. ನಾಯಕ್, ಎಸ್.ಡಿ. ಭಗವತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Share this article