ಆರಾಯಿರ ನಾಡ್ ಪೂಮಾಲೆ ಮಂದ್‌ನಲ್ಲಿ ವಿಜೃಂಭಣೆಯ ಪುತ್ತರಿ ಕೋಲಾಟ

KannadaprabhaNewsNetwork |  
Published : Dec 19, 2024, 12:31 AM IST
ಆರಾಯಿರ ನಾಡ್ ಪೂಮಾಲೆ ಮಂದ್‌ನಲ್ಲಿ ನಡೆದ ವಿಜ್ರಂಭಣೆಯ ಪುತ್ತರಿ ಕೋಲಾಟ: | Kannada Prabha

ಸಾರಾಂಶ

ಅರಾಯಿರ ನಾಡ್‌ರ ವಾರ್ಷಿಕ ಪುತ್ತರಿ ಕೋಲಾಟ ವಿವಿಧ ಜನಪದ ಪ್ರಕಾರಗಳನ್ನು ಒಳಗೊಂಡು ಸಂಪನ್ನಗೊಂಡಿತು. ಗ್ರಾಮಸ್ಥರಿಗೆ ಕೊಡಗಿನ ಸಾಂಪ್ರದಾಯದ ವಾಲಗವು ಸ್ವಾಗತ ಕೋರಿದವು.

ಕನ್ನಡಪ್ರವಾರ್ತೆ ವಿರಾಜಪೇಟೆ

ಅರಾಯಿರ ನಾಡ್ ರ ವಾರ್ಷಿಕ ಪುತ್ತರಿ ಕೋಲಾಟ್‌ವು ವಿವಿಧ ಜನಪದ ಪ್ರಕಾರಗಳನ್ನು ಒಳಗೊಂಡು ಸಂಪನ್ನಗೊಂಡಿತು.

ವೀರಾ ರಾಜೇಂದ್ರಪೇಟೆಯ ಆರಾಯಿರ ನಾಡ್ ಬೈರನಾಡ್, ಎಡೆನಾಡ್, ಬೇಟೋಳಿನಾಡ್, ಮತ್ತು ಪೆರುವನಾಡ್ ಎಂಬ ನಾಲ್ಕು ನಾಡುಗಳಾಗಿ ವಿಂಗಡಣೆಗೊಂಡು 17 ಗ್ರಾಮಗಳ ಒಕ್ಕೂಟದ ನಾಡಿನ ಗ್ರಾಮಸ್ಥರು ಪುತ್ತರಿ ಕೋಲಾಟವು ವಿರಾಜಪೇಟೆ ಕೊಡವ ಸಮಾಜದ ಬಳಿಯ ಪೂಮಾಲೆ ಮಂದ್‌ನಲ್ಲಿ ವಾರ್ಷಿಕ ಕೋಲಾಟ್ ಪ್ರದರ್ಶನಗೊಂಡಿತ್ತು.

ಕೊಡಗಿನ ಸಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಕೈಯಲ್ಲಿ ಕೋಲು ಹಿಡಿದ ವಿವಿಧ ಗ್ರಾಮಗಳಿಂದ ಆಗಮಿಸಿದ ಗ್ರಾಮಸ್ಥರಿಗೆ ಕೊಡಗಿನ ಸಾಂಪ್ರದಾಯದ ವಾಲಗವು ಸ್ವಾಗತ ಕೋರಿದವು. ಮಂದ್ ನ ಹೃದಯ ಭಾಗದಲ್ಲಿರುವ ಆಲದ ಮರಕ್ಕೆ ಹಿರಿಯರಿಂದ ಪ್ರಥಮ ಪೂಜೆ ಸಲ್ಲಿಕೆಯಾದವು. ನಾಲ್ಕು ಭಾಗದ ಕೋಲಾಟ ಪ್ರದರ್ಶನದಲ್ಲಿ ಭಾಗಿಗಳಾಗುವವರು ಒಂದೆಡೆ ಸೇರಿ ವಾರ್ಷಿಕ ಕೋಲಾಟಕ್ಕೆ ಚಾಲನೆ ನೀಡಿದರು. ಪೂಮಾಲೆ ಮಂದ್‌ನಲ್ಲಿ ಮೂರು ಸುತ್ತಿನ ಕೋಲಾಟ, ಎಳು ಜೋಡಿಯ ಪರಿಯಕಳಿ, ವಾಲಗತ್ತಾಟ್ ನಡೆಯಿತು. ಕೋಲಾಟದ ಪ್ರಕಾರಗಳನ್ನು ಪ್ರದರ್ಶನ ಮಾಡುವವರು ವಾಲಗ ನುಡಿಸುವವರ ವಾದ್ಯಕ್ಕೆ ತಕ್ಕಂತೆ ಹೆಜ್ಜೆ ಹಾಕುತಿದ್ದರು. ಪ್ರಥಮ ಭಾರಿಗೆ ಉತ್ತಮ ಕೋಲಾಟ್ ಪ್ರದರ್ಶನ ನೀಡಿದ ಪಟುವಿಗೆ ರೋಲಿಂಗ್ ಟ್ರೋಫಿಯನ್ನು ಪರಿಚಯಿಸಿದರು.

ಕಬ್ಬಚ್ಚೀರ ಕಾರ್ಯಪ್ಪ ಅವರ ಜ್ಞಾಪಕಾರ್ಥ ಮಕ್ಕಳಾದ ಬೋಪಣ್ಣ ಮತ್ತು ನಂಜಪ್ಪ ಅವರು ನೀಡಿರುವ ರೋಲಿಂಗ್ ಟ್ರೋಫಿಯನ್ನು ಮಗ್ಗುಲ ಗ್ರಾಮದ ಚೋವಂಡ ನಿಖಿಲ್ ಅವರು ಪಡೆದುಕೊಂಡರು, ಪರಿಯ ಕಳಿ ಸ್ಪರ್ಧೆಯಲ್ಲಿ ಬೇಟೋಳಿ ಗ್ರಾಮದ ಬೊಪ್ಪಚಂಡ ಮಾಚಯ್ಯ ಮತ್ತು ಕಬ್ಬಚ್ಚೀರ ಮಾಚಯ್ಯ ಪ್ರಥಮ ಸ್ಥಾನ ಪಡೆದುಕೊಂಡರು.

ತ್ರಿವೇಣಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ಚೌರಿ ಆಟ್ ಮತ್ತು ಬಾಲಕಿಯರಿಂದ ಉಮ್ಮತಾಟ್ ಪ್ರದರ್ಶನವು ಜನಮನ್ನಣೆ ಪಡೆಯಿತು. ವಿವಿಧ ಕೋಲಾಟ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಆರಾಯಿರ ನಾಡ್ ಕೋಲ್ ಮಂದ್ ಅಯೋಜಕರ ಸಮಿತಿಯಿಂದ ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಪೂಮಾಲೆ ಮಂದ್ ಸಮಿತಿಯ ಅಧ್ಯಕ್ಷ ಅಜ್ಜಿನಿಕಂಡ ಸುಧೀರ್, ಉಪಾಧ್ಯಕ್ಷರಾದ ವಾಟೇರಿರ ಶಂಕರಿ ಪೂವಯ್ಯ, ಮರಣ ಫಂಡ್ ಅಧ್ಯಕ್ಷರಾದ ಚೇಂದಂಡ ಪೊನ್ನಪ್ಪ, ಕ್ರೀಡಾ ಸಮಿತಿಯ ಅಧ್ಯಕ್ಷರಾದ ಪುಗ್ಗೇರ ನಂಧಾ ಮತ್ತು ಸಮಿತಿಯ ಸದಸ್ಯರು ಸೇರಿದಂತೆ ಬೈರನಾಡ್ ಭಾಗದ ಹಾಲುಗುಂದ, ಒಂಟಿಅಂಗಡಿ, ದೇವಣಗೇರಿ, ತಲಗಟ್ಟಕೇರಿ ಮತ್ತು ಹಚ್ಚಿನಾಡು ಗ್ರಾಮಗಳು, ಎಡೆನಾಡು ಭಾಗದ ಕುಕ್ಲೂರು, ಚೆಂಬೆಬೆಳ್ಳೂರು, ಐಮಂಗಲ, ಮಗ್ಗುಲ, ಮತ್ತು ವೈಪಡ ಗ್ರಾಮಗಳು ಬೇಟೊಳಿನಾಡ್ ಭಾಗದ ಆರ್ಜಿ, ಬೇಟೋಳಿ ಗ್ರಾಮಗಳು ಪೆರುವನಾಡ್ ಭಾಗದ ಬಿಟ್ಟಂಗಾಲ ನಾಂಗಾಲ ಮತ್ತು ಬಾಳೂಗೋಡು ಗ್ರಾಮಗಳ ಗ್ರಾಮಸ್ಥರು ಅಲ್ಲದೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕೋಲಾಟ ಪ್ರದರ್ಶನವನ್ನು ಕಂಡು ಉತ್ತೇಜಿಸಿದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ