ಕನ್ನಡಪ್ರಭ ವಾರ್ತೆ ಸಿಂದಗಿ
ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುತ್ತವೆ. ಸದೃಢ ದೇಹವಿದ್ದಲ್ಲಿ, ಸದೃಢ ಮನಸ್ಸಿರುತ್ತದೆ. ಸದೃಢ ಮನಸ್ಸಿದ್ದಲ್ಲಿ ಯಶಸ್ಸು ಗಟ್ಟಿಯಾಗಿರುತ್ತದೆ. ಸಮಾಜದಲ್ಲಿ ರಾಜಕೀಯ ಮತ್ತು ಸಾಮಾಜಿಕ ವ್ಯಕ್ತಿಗಳಿಗಿಂತ ಕ್ರೀಡಾಪಟುಗಳಿಗೆ ಹೆಚ್ಚಿನ ಜನಪ್ರಿಯತೆ ಇದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಸಿಂದಗಿ ಪಟ್ಟಣದ ಆರ್.ಡಿ.ಪಾಟೀಲ ಕಾಲೇಜಿನ ಆರ್.ಬಿ.ಬೂದಿಹಾಳ ಆವರಣದಲ್ಲಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಶಾಲಾ ಶಿಕ್ಷಣ ಇಲಾಖೆ ಹಾಗೂ ಆರ್.ಪಾಟೀಲ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಪ.ಪೂ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ 2025-26ನೆಯ ಸಾಲಿನ ವಿಜಯಪುರ ಜಿಲ್ಲಾ ಮಟ್ಟದ ಹ್ಯಾಂಡಬಾಲ್, ನೆಟ್ ಬಾಲ್, ಬಾಲ್ ಬ್ಯಾಡ್ಮಿಂಟನ್, ಟೆನಿಸ್, ವಾಲಿಬಾಲ್ ಹಾಗೂ ಜಿಮ್ನಾಸ್ಟಿಕ್ಸ್ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಜಾಗತಿಕ ಮಟ್ಟದಲ್ಲಿ ದೇಶದ ಹೆಸರನ್ನು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಕ್ರೀಡಾ ಪಟುಗಳು ಪ್ರಮುಖ ಪಾತ್ರವಹಿಸುತ್ತಾರೆ. ಕ್ರೀಡಾಭಿಮಾನ ಕಡಿಮೆಯಾಗುತ್ತಿರುವ ಪ್ರಸ್ತುತ ದಿನಗಳಲ್ಲಿ ಹ್ಯಾಂಡಬಾಲ್, ನೆಟ್ ಬಾಲ್, ಬಾಲ್ ಬ್ಯಾಡ್ಮಿಂಟನ್, ಟೆನಿಸ್, ವಾಲಿಬಾಲ್ ಹಾಗೂ ಜಿಮ್ನಾಸ್ಟಿಕ್ಸ್ ಕ್ರೀಡೆಗಳನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು.ಈ ವೇಳೆ ನಿರ್ಣಾಯಕರಾಗಿ ಆಗಮಿಸಿದ್ದ ಹೊಸಪೇಟೆಯ ಮಾತಾ ಪ.ಪೂ ಕಾಲೇಜಿನ ದೈಹಿಕ ಉಪನ್ಯಾಸಕ ನಬಿರಸೂಲ್ ಮಾತನಾಡಿ, ಖಾಲಿಯಿರುವ ದೈಹಿಕ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಸಿಂದಗಿ ಶಾಸಕ ಅಶೋಕ ಮನಗೂಳಿ ಅವರು ಸದನದಲ್ಲಿ ಪ್ರಸ್ತಾಪ ಮಾಡಬೇಕು ಎಂದು ಮನವಿ ಮಾಡಿಕೊಂಡರು.ಸಾನಿಧ್ಯ ಸಂಸ್ಥೆಯ ಚೇರಮನ್ನರಾದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಹಾಗೂ ಸಮ್ಮುಖ ವಹಿಸಿದ ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಆಶೀರ್ವಚನ ನೀಡಿದರು. ವೇದಿಕೆಯ ಮೇಲೆ ಕೆ.ಎಚ್.ಸೋಮಾಪೂರ, ಶಾಂತು ದುರ್ಗಿ, ಹುಬ್ಬಳ್ಳಿಯ ಭೀಮೇಶ.ಎಸ್ ಇದ್ದರು.ಕಾರ್ಯಕ್ರಮದಲ್ಲಿ ದೈಹಿಕ ನಿರ್ದೇಶಕ ಗವಿಸಿದ್ದಪ್ಪ ಆನೆಗುಂದಿ, ಎಸ್.ಎಂ.ಬಿರಾದಾರ, ಡಾ.ರವಿ ಗೋಲಾ, ಡಾ.ಶರಣಬಸವ ಜೋಗುರ, ಸತೀಶ ಬಸರಕಡ, ಎಸ್.ಎಂ.ಪೂಜಾರಿ, ವ್ಹಿ.ಡಿ.ಪಾಟೀಲ, ಪಿ.ವ್ಹಿ.ಮಹಲಿನಮಠ, ಎಸ್.ಎಚ್.ಜಾಧವ, ಸುನೀಲ ಪಾಟೀಲ, ಪ್ರಸನ್ನ ಜೋಗೂರ, ಎಸ್.ಎಸ್.ತಾಳಿಕೋಟಿ, ಶಿವಶರಣ ಬೂದಿಹಾಳ, ಶಿವರಾಜ ಕುಂದಗೋಳ, ಎನ್.ಎಂ.ಶೆಳ್ಳಗಿ, ರೋಹಿತ ಸುಲ್ಪಿ, ರಾಹುಲ ನಾರಾಯಣಕರ್, ಸ್ನೇಹಾ ಕುಲಕರ್ಣಿ, ಸ್ನೇಹಾ ಧರಿ, ಲಕ್ಷ್ಮೀ ಕನ್ನೋಳ್ಳಿ, ಎಸ್.ಎಸ್.ಹೂಗಾರ, ರಾಹುಲ ದಾಸರ್, ಐ.ಎಸ್.ಸಿಂಪಗೇರ್ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳಿದ್ದರು. ಪ್ರಾಚಾರ್ಯ ಬಿ.ಎಂ.ಸಿಂಗನಳ್ಳಿ ಸ್ವಾಗತಿಸಿದರು. ಯಶೋಧ ಗೌರಿ ಪ್ರಾರ್ಥಿಸಿದರು. ಪ್ರಸನ್ನಕುಮಾರ ಜೋಗುರ ಶರಣು ಬೂದಿಹಾಳ ನಿರೂಪಿಸದರು.