ವಾಲ್ಮೀಕಿಗೆ ಅಯೋಧ್ಯ ರಾಮನಿಗಿಂತ ಆತ್ಮರಾಮ ಮುಖ್ಯವಾಗಿದ್ದ: ಸಿದ್ದರಾಮಾನಂದ ಪುರಿ ಶ್ರೀ

KannadaprabhaNewsNetwork |  
Published : Oct 19, 2024, 01:38 AM IST
18ಕೆಪಿಎಲ್ಎನ್ಜಿ01 | Kannada Prabha

ಸಾರಾಂಶ

ಲಿಂಗಸುಗೂರು ತಾಲೂಕಿನ ಗೋಲಪಲ್ಲಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಕಾಗಿನೆಲೆ ಕನಕಗುರುಪೀಠದ ಜಗದ್ಗುರು ಸಿದ್ದರಾಮಾನಂದಪುರಿ ಆರ್ಶೀವಚನ ನೀಡಿದರು.

ಕನ್ನಡಪ್ರಭ ವಾರ್ತೆ ಲಿಂಗಸುಗೂರು ರಾಮಾಯಣದ ಕಥಾ ನಾಯಕ ಅಯೋಧ್ಯ ರಾಮನಿಗಿಂತ ಮಹರ್ಷಿ ವಾಲ್ಮೀಕಿಯವರಿಗೆ ಆತ್ಮರಾಮ ಮುಖ್ಯವಾಗಿದ್ದ ಎಂದು ಕಲಬುರಗಿ ವಿಭಾಗದ ಕಾಗಿನೆಲೆ ಕನಕ ಗುರುಪೀಠ ತಿಂಥಣಿ ಬ್ರಿಜ್ನ ಶಾಖಾ ಮಠದ ಜಗದ್ಗುರು ಸಿದ್ದರಾಮಾನಂದ ಪುರಿ ಶ್ರೀಗಳು ಹೇಳಿದರು. ತಾಲೂಕಿನ ಗೋಲಪಲ್ಲಿ ಬಳಿಯ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ನಡೆದ ಶ್ರೀ ವಾಲ್ಮೀಕಿ ಜಯಂತಿ ಸಮಾರಂಭದ ಸಾನಿಧ್ಯ ವಹಿಸಿ ಆರ್ಶೀವಚನ ನೀಡಿದ ಶ್ರೀಗಳು, ಸಪ್ತ ಋಷಿಗಳಿಗಿಂತ ಮಿಗಿಲಾದ ಆದ್ಯಾತ್ಮಿಕ ಶಕ್ತಿ ಬರಹದಲ್ಲಿ ಸಾಧನೆಗಳ ಮಾಡಿ ಋಷಿಗಳಿಗೆ ಮಹಾನ್ ಋಷಿಯಾಗಿದ್ದ ಮಹರ್ಷಿ ವಾಲ್ಮೀಕಿಯವರಿಗೆ ಉನ್ನತ ಜಾತಿಯ ವರ್ಗವು ಸಪ್ತ ಋಷಿಗಳಲ್ಲಿ ಸ್ಥಾನ ನೀಡದೇ ವಂಚನೆ ಮಾಡಿದ್ದಾರೆ. ಇಂದು ವಾಲ್ಮೀಕಿಯವರ ಬದುಕಿನ ಸಾಕ್ಷಾತ್ಕಾರಕ್ಕಾಗಿ ಧ್ಯಾನಿಸಿದ ಆತ್ಮರಾಮನನ್ನು ಬದಿಗೊತ್ತಿ ಅಧಿಕಾರದ ಆಶೆಗಾಗಿ ಆಯೋಧ್ಯ ರಾಮನ ಭಜನೆ ಮಾಡುತ್ತಿದ್ದಾರೆ. ಯುಗ ಯುಗಾಂತರದಿAದಲೂ ದಲಿತ, ಹಿಂದುಳಿದ ಸಮುದಾಯದ ಸಾಧಕರನ್ನು ತುಳಿಯುತ್ತಾ ಬರಲಾಗಿದೆ ಎಂದು ತಿಳಿಸಿದರು.ರಾಮ ಪಿತೃವಾಖ್ಯ ಪರಿಪಾಲಕನಾದರೆ ಮಹರ್ಷಿ ವಾಲ್ಮೀಕಿ ಸ್ತಿçÃಯರ ಪಾಲಕನಾಗಿದ್ದ ಗರ್ಭಿಣಿ ಸೀತೆಯ ಅಡವಿಗಟ್ಟಿದಾಗ ಆಕೆಯನ್ನು ರಕ್ಷಣೆ ಮಾಡಿ ಲವ-ಕುಶರಿಗೆ ಸಕಲ ವಿದ್ಯೆಗಳನ್ನು ಹೇಳಿಕೊಟ್ಟ ಮಹರ್ಷಿ ವಾಲ್ಮೀಕಿ ಆದರ್ಶ ಅಗಾಧವಾದದು, ಅಲ್ಲದೇ ಸೀತೆಯ ಮಕ್ಕಳಿಗೆ ಸಮರ ಕಲೆ ಬೋಧಿಸಿ ತಂದೆಯ ಜೊತೆಗೆ ಯದ್ದ ಮಾಡಿ ಗೆಲ್ಲುವಂತೆ ಮಾಡಿದ ವಾಲ್ಮೀಕಿಯವರು ಕೇವಲ ಮಹರ್ಷಿಗಳಾಗಿರದೇ ಸಮರ ಕಲೆಯ ಸೇನಾನಿಯಾಗಿದ್ದರು ಎಂದರು.ಚಿAತಕ, ಹೋರಾಟಗಾರ ಆರ್.ಮಾನಸಯ್ಯ ಮಾತನಾಡಿ, ಸಾಂಸ್ಕೃತಿಕವಾಗಿ ನಾಯಕ ಸಮುದಾಯ ಭವ್ಯ ಇತಿಹಾಸ ಹೊಂದಿದೆ. ಜಾತಿಯ ಅಡ್ಡಗೋಡೆಗಳ ಕಿತ್ತು ಹಾಕಿ ಹಿಂದುಳಿದವರು, ದಲಿತರೊಂದಿಗೆ ಜೊತೆಗೂಡಿದರೆ ರಾಜಕೀಯ ಅಧಿಕಾರ ನಿರಂತರವಾಗಿ ನಮ್ಮ ಕೈಯಲ್ಲಿ ಇರುತ್ತದೆ. ಸಮುದಾಯದ ಜನರು ಈ ದಿಶೆಯಲ್ಲಿ ಚಿಂತನೆ ನಡೆಸಬೇಕು ಸಮುದಾಯದಲ್ಲಿ ಒಗ್ಗಟ್ಟು ಅಗತ್ಯವಾಗಿದೆ. ದಲಿತ, ಹಿಂದುಳಿದ ಸಮುದಾಯಗಳ ಮದ್ಯೆ ಮದ್ಯೆ ಉತ್ತಮ ಬಾಂದವ್ಯ ಏರ್ಪಡಬಾರದು ಎಂದು ಮೇಲ್ಜಾತಿಯ ಜನರು ನಿರಂತರ ಮಸಲತ್ತು ಮಾಡುತ್ತಾರೆ. ಇದಕ್ಕೆ ಯಾರು ಕಿವಿಗೊಡದೇ ಜನರು ಒಗ್ಗಟ್ಟಿನ ಮೂಲಕ ಒಂದಾಗಿ ಮುನ್ನೇಡೆಯಬೇಕೆಂದು ಕರೆ ನೀಡಿದರು. ಸಮಾರಂಭದಲ್ಲಿ ಗೋಲಪಲ್ಲಿ ವಾಲ್ಮೀಕಿ ಆಶ್ರಮದ ವರದಾನೇಶ್ವರ ಶ್ರೀ, ಯಲಗಟ್ಟ ಗಡವಡಕೀಶನ ಮಠದ ಗುರುಸ್ವಾಮಿ ತಾತ, ಕಕ್ಕೇರಿ ಭೀಮಣ್ಣ ಮುತ್ಯಾ, ಎಸ್.ಟಿ ಇಲಾಖೆ ಅಧಿಕಾರಿ ಮಂಜುಳಾ ಅಸುಂಡಿ, ದೇವದುರ್ಗ ವಾಲ್ಮೀಕಿ ಸಂಘದ ಅಧ್ಯಕ್ಷ ಮಾನಸಯ್ಯ, ಎಂ.ಗಂಗಾಧರ, ಶಿವಪ್ಪ ಗೋಲಪಲ್ಲಿ, ದುರುಗಪ್ಪ ದಳಪತಿ ಸೇರಿದಂತೆ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ