ಕಾರ್ಯದರ್ಶಿ ಅಪಹರಣಕ್ಕೆ ಯತ್ನ

KannadaprabhaNewsNetwork |  
Published : Sep 13, 2025, 02:06 AM IST
ಚನ್ನಮ್ಮನ ಕಿತ್ತೂರು | Kannada Prabha

ಸಾರಾಂಶ

ಬಿಡಿಸಿಸಿ ಬ್ಯಾಂಕ್ ಚುನಾವಣೆಯ ಹಿನ್ನೆಲ್ಲೆಯಲ್ಲಿ ಇಲ್ಲಿಯ ಪ್ರಾಥಮಿಕ ಕೃಷಿ ಸಂಘದಲ್ಲಿ ನಡೆದ ಠರಾವು ಸಭೆಯಲ್ಲಿ ಕಾರ್ಯದರ್ಶಿಯನ್ನು ಅಪಹರಣ ಮಾಡಲೇತ್ನಿಸಿದ ಘಟನೆ ಶುಕ್ರವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ಬಿಡಿಸಿಸಿ ಬ್ಯಾಂಕ್ ಚುನಾವಣೆಯ ಹಿನ್ನೆಲ್ಲೆಯಲ್ಲಿ ಇಲ್ಲಿಯ ಪ್ರಾಥಮಿಕ ಕೃಷಿ ಸಂಘದಲ್ಲಿ ನಡೆದ ಠರಾವು ಸಭೆಯಲ್ಲಿ ಕಾರ್ಯದರ್ಶಿಯನ್ನು ಅಪಹರಣ ಮಾಡಲೇತ್ನಿಸಿದ ಘಟನೆ ಶುಕ್ರವಾರ ನಡೆದಿದೆ.

ಪಟ್ಟಣದ ಅರಳಿಕಟ್ಟಿಯಲ್ಲಿರುವ ವಿವಿಧೋದ್ದೇಶ ಸಹಕಾರಿ ಪ್ರಾಥಮಿಕ ಕೃಷಿ ಸಂಘದಲ್ಲಿ ಗುರುವಾರ ಬೆಳಗ್ಗೆ ಠರಾವು ಸಭೆ ಹಮ್ಮಿಕೊಳ್ಳಲಾಗಿತ್ತು. ಆದರೆ, ಈ ಸಭೆಯೂ ಗೊಂದಲದ ಗೂಡಾಗಿ ಪರಿಣಮಿಸಿದ ಕಾರಣ ಆಡಳಿತ ಮಂಡಳಿಯ ಸದಸ್ಯರೊರ್ವರು ಸಂಘದ ಕಾರ್ಯದರ್ಶಿ ನೋಟಿಸ್ ಜಾರಿಗೊಳಿಸುವ ವಿಷಯ ಹಾಗೂ ಠರಾವು ಪುಸ್ತಕ ಸೇರಿದಂತೆ ಅನೇಕ ತಪ್ಪುಗಳನ್ನು ಮಾಡಿದ್ದಾರೆ ಎಂದು ಆರೋಪಿಸಿ ಅವರನ್ನು ಸಭೆಯಿಂದ ಹೊರದೂಡಿದರು.

ಪರಿಣಾಮ ಕಾರ್ಯದರ್ಶಿ ಭೀಮಪ್ಪ ಕೋಟಗಿ ಹೊರ ಬರುತ್ತಿದ್ದಂತೆ ಪೊಲೀಸ್‌ರ ಮುಂದೆಯೇ ಆತನನ್ನು ಅರಳಿಕಟ್ಟೆ ಬಳಿವಿರುವ ವಾಹನವೊಂದರಲ್ಲಿ ಹಾಕಿಕೊಂಡು ಅಪಹರಣ ಮಾಡಲು ಯತ್ನಿಸಲಾಯಿತು. ಈ ಎಲ್ಲ ಬೆಳವಣಿಗೆಗಳು ನಡೆಯುತ್ತಿದ್ದಂತೆ ಎಚ್ಚೆತ್ತುಕೊಂಡು ಬಿಜೆಪಿ ಪರ ಮುಖಂಡರು ಹಾಗೂ ಬೆಂಬಲಿಗರು ಆ ವಾಹನಕ್ಕೆ ಅಡ್ಡಗಟ್ಟಿ ಆತನನ್ನು ಕೆಳಗಿಸುವಂತೆ ಆಗ್ರಹಿಸಲಾರಂಭಿಸಿದರು. ಕೂಡಲೇ ಕಾಂಗ್ರೆಸ್ ಬೆಂಬಲಿಗರು ಸ್ಥಳಕ್ಕೆ ಬರುತ್ತಿದ್ದಂತೆ ಪರ ವಿರೋಧ ಮಾತುಗಳು ವಿಕೋಪಕ್ಕೆ ತಿರುಗಿ ಬೆಂಬಲಿಗರ ಮಧ್ಯದಲ್ಲಿ ಕೈ ಕೈ ಮಿಲಾಯಿಸಲಾರಂಭಿಸಿದರು. ಆಗ ಸ್ಥಳದಲ್ಲಿದ್ದ ಪೊಲೀಸರು ಬೆಂಬಲಿಗರ ಈ ಕಾದಾಟ ನಿಯಂತ್ರಿಸಲು ಹರಸಾಹಸಪಟ್ಟರು. ನಂತರ ಪೊಲೀಸರು ಭೀಮಪ್ಪ ಕೋಟಗಿಯನ್ನು ಖಾಸಗಿ ವಾಹನವೊಂದರಲ್ಲಿ ಹಾಕಿಕೊಂಡು ಠಾಣೆಗೆ ಕರೆತಂದರು. ಆಗ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ಠಾಣೆಗೆ ಬಂದು ರಾಜೀ ಪಂಚಾಯತಿ ನಡೆಸಿದರು, ಈ ರಾಜೀ ಪಂಚಾಯತಿಯಲ್ಲಿ ಈ ಠರಾವು ಸಭೆಯನ್ನು ಮುಂದೂಡುವುದರ ಬಗ್ಗೆ ಚರ್ಚೆ ನಡೆದು ಕೊನೆಗೂ ಸೋಮವಾರ ಮಧ್ಯಾಹ್ನ ಈ ಸಭೆ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು. ಅದರಂತೆಯೇ ಪೊಲೀಸ್‌ರ ಬಂದೊಬಸ್ತನಲ್ಲಿ ಸಂಘದ ಕಚೇರಿಗೆ ಬಂದ ಕಾರ್ಯದರ್ಶಿ ಭೀಮಪ್ಪ ಕೋಟಗಿ ಸೋಮವಾರ ಸಭೆ ನಡೆಸುವುದರ ಕುರಿತು ಎಲ್ಲ ಸದಸ್ಯರಿಗೂ ನೋಟಿಸ್ ಜಾರಿ ಮಾಡಿದರು.ಈ ಸಂದರ್ಭದಲ್ಲಿ ಡಿವೈಎಸ್ಪಿ ವೀರಯ್ಯ ಹಿರೇಮಠ, ಸಿಪಿಐ ಶಿವಾನಂದ ಗುಡುಗನಟ್ಟಿ, ಪಿಎಸೈ ಪ್ರವೀಣ ಗಂಗೋಳ, ಹಿರಿಯರಾದ ಚನ್ನಬಸಪ್ಪ ಮೊಕಾಶಿ, ಮುಖಂಡರಾದ ಪಪಂ ಅಧ್ಯಕ್ಷ ಜೈಸಿದ್ದರಾಮ ಮಾರಿಹಾಳ, ಆಶ್ಪಾಕ ಹವಾಲ್ದಾರ, ಕೃಷ್ಣಾ ಬಾಳೇಕುಂದ್ರಗಿ, ಡಾ.ಬಸವರಾಜ ಪರವಣ್ಣವರ, ಉಳವಪ್ಪ ಉಳ್ಳೇಗಡ್ಡಿ, ಶ್ರೀಕರ ಕುಲಕರ್ಣಿ ಸೇರಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ಹಾಗೂ ಬೆಂಬಲಿಗರು ಹಾಜರಿದ್ದರು.ಠರಾವು ಪುಸ್ತಕ ಹಾಗೂ ನೋಟಿಸ್ ಜಾರಿ ನೂತನ ಪುಸ್ತಕ ಉಪಯೋಗಿಸಿದ ವಿಷಯದಲ್ಲಿ ನನ್ನಿಂದ ತಪ್ಪಾಗಿದೆ. ನನ್ನ ಮೇಲೆ ಯಾರು ಹಲ್ಲೆ ಮಾಡಿಲ್ಲ. ಆದರೆ, ಯಾರೋ ನನ್ನನ್ನು ಕರೆದುಕೊಂಡು ವಾಹನದಲ್ಲಿ ತೆರಳಲು ಯತ್ನಿಸಿದರು. ಅವರ ಹೆಸರು ಹಾಗೂ ಅವರ ಮಾಹಿತಿ ನನ್ನ ಬಳಿ ಇಲ್ಲ. ಈ ಠರಾವು ಸಭೆಯನ್ನು ಸೋಮವಾರ ಮಧ್ಯಾಹ್ನ 3ಕ್ಕೆ ಮುಂದೂಡಲಾಗಿದ್ದು, ಎಲ್ಲ ಸದಸ್ಯರಿಗೂ ಈಗ ನೋಟಿಸ್‌ ಜಾರಿ ಮಾಡಿದ್ದೇನೆ.

-ಭೀಮಪ್ಪ ಕೋಟಗಿ ಕಾರ್ಯದರ್ಶಿ.

PREV

Recommended Stories

ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಪೇದೆ ನೇಮಕಕ್ಕೆ ವಯೋಮಿತಿ ಸಡಿಲಕ್ಕೆ ಶೀಘ್ರ ಪ್ರಸ್ತಾವ : ಪರಂ