ಕನ್ನಡಪ್ರಭ ವಾರ್ತೆ ರಾಮನಗರ
ಭಾನುವಾರ ಬೆಳ್ಳಂಬೆಳಗ್ಗೆ ರೌಡಿಶೀಟರ್‌ಗಳ ಮೇಲೆ ಪೊಲೀಸರು ಕನಕಪುರ ತಾಲೂಕಿನ ಮಳಗಾಳು ಗ್ರಾಮದಲ್ಲಿ ದಲಿತ ಯುವಕನ ಕೈಕತ್ತರಿಸಿದ್ದ ಪ್ರಕರಣದ ಪ್ರಮುಖ ಆರೋಪಿಗಳಿಬ್ಬರ ಕಾಲಿಗೆ ಗುಂಡು ಹಾರಿಸಿದ್ದಾರೆ.ಹರ್ಷ ಮತ್ತು ಕರುಣೇಶ್ ಪೊಲೀಸರ ಗುಂಡೇಟಿನಿಂದ ಗಾಯಗೊಂಡಿರುವ ರೌಡಿಶೀಟರ್‌ಗಳು. ಇವರಿಬ್ಬರು ಹಲ್ಲೆ ಘಟನೆ ನಡೆದ ಬಳಿಕ ತಲೆಮರೆಸಿಕೊಂಡಿದ್ದರು. ಇವರು ಅಡಗಿದ್ದ ಸ್ಥಳದ ಮಾಹಿತಿ ಪಡೆದ ಪೊಲೀಸರು ಕಗ್ಗಲೀಪುರದ ಬಳಿ ಭಾನುವಾರ ಬೆಳ್ಳಂಬೆಳಗ್ಗೆ 4 ಗಂಟೆಯಲ್ಲಿ ಇವರನ್ನು ಬಂಧಿಸಲು ಮುಂದಾದ ವೇಳೆ ಆರೋಪಿಗಳು ಪೊಲೀಸರ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದರು. ಆತ್ಮರಕ್ಷಣೆಗಾಗಿ ಪೊಲೀಸರು ಇವರ ಕಾಲಿಗೆ ಗುಂಡು ಹಾರಿಸಿದ್ದಾರೆ.
ಆರೋಪಿಗಳ ಬಂಧನಕ್ಕೆ ಗ್ರಾಮಾಂತರ ವೃತ್ತನಿರೀಕ್ಷಕ ಕೃಷ್ಣ ಲಮಾಣಿ, ನಗರ ವೃತ್ತ ನಿರೀಕ್ಷಕ ಮಿಥುನ್ ಶಿಲ್ಪಿ, ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‌ಐ ಮನೋಹರ್ ನೇತೃತ್ವದಲ್ಲಿ ೩ ತಂಡಗಳನ್ನು ರಚಿಸಲಾಗಿತ್ತು. ಕಗ್ಗಲೀಪುರದ ವ್ಯಾಲಿ ಪಬ್ಲಿಕ್ ಶಾಲೆ ಹಿಂಭಾಗದ ತೋಟದ ಮನೆಯೊಂದರಲ್ಲಿ ಆರೋಪಿಗಳು ಅಡಗಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ದೊರೆತಿತ್ತು. ಸ್ಥಳಕ್ಕೆ ಧಾವಿಸಿದ ಪೊಲೀಸರ ತಂಡದ ಮೇಲೆ ಮಾರಕಾಸ್ತ್ರ ಪ್ರಯೋಗಿಸಿದಾಗ ಕ್ರೈಂ ಸಿಬ್ಬಂದಿಗಳಾದ ರಾಜೇಶ್ ಕವಡಿಮಠ್ ಮತ್ತು ಶಿವಶಂಕರ್ ಕೈಗಳಿಗೆ ಗಾಯವಾಗಿದೆ. ಅಪಾಯದ ಮುನ್ಸೂಚನೆ ಅರಿತ ಪೊಲೀಸರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ.ಘಟನೆಯಲ್ಲಿ ಕರಣೇಶ್‌ನ ಎರಡೂ ಕಾಲಿಗೆ, ಹರ್ಷನ ಒಂದು ಕಾಲಿಗೆ ಗುಂಡೇಟು ಬಿದ್ದಿದೆ. ಗಾಯಗೊಂಡ ಇಬ್ಬರು ರೌಡಿಶೀಟರ್‌ಗಳನ್ನು ಮತ್ತು ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿಯನ್ನು ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ತಲೆಬಿಸಿಯಾಗಿದ್ದ ಪ್ರಕರಣ:ಕನಕಪುರ ತಾಲೂಕಿನ ಮಳಗಾಳು ಗ್ರಾಮದ ದಲಿತ ಯುವಕ ಅನೀಶ್ ಕೈಕತ್ತರಿಸಿದ್ದ ಪ್ರಕರಣ ಸಾಕಷ್ಟು ಮಹತ್ವ ಪಡೆದುಕೊಂಡಿತ್ತು. ಘಟನೆ ಬಳಿಕ ಆರೋಪಿಗಳಿಬ್ಬರು ತಲೆಮರೆಸಿಕೊಂಡಿದ್ದರು. ಆರೋಪಿಗಳ ಬಂಧನಕ್ಕೆ ದಲಿತ ಮತ್ತು ಪ್ರಗತಿಪರ ಸಂಘಟನೆಗಳು ಒತ್ತಾಯಿಸಿ ಪ್ರತಿಭಟನೆ ನಡೆಸಿತ್ತು. ಪ್ರಕರಣ ಪೊಲೀಸ್ ಇಲಾಖೆಗೆ ಸಾಕಷ್ಟು ತಲೆ ನೋವಾಗಿ ಪರಿಣಮಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಶಶಾಂಕ್, ರಾಹುಲ್, ಶಿವು, ಸುಬ್ಬನನ್ನು ಘಟನೆಯ ದಿನವೇ ವಶಕ್ಕೆ ಪಡೆಯಲಾಗಿತ್ತು. ಇವರಿಬ್ಬರು ತಲೆಮರೆಸಿಕೊಂಡಿದ್ದರು.
ಶೂಟ್ ಔಟ್ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುರೇಶ್, ಡಿವೈಎಸ್ಪಿ ಕೆ.ಸಿ.ಗಿರಿ ಭೇಟಿನೀಡಿ ಪರಿಶೀಲಿಸಿದರು.ಬಾಕ್ಸ್..................
ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳುಹರ್ಷ ಮತ್ತು ಕರುಣೇಶ್ ವಿರುದ್ಧ ಕನಕಪುರ ತಾಲೂಕಿನ ವಿವಿಧ ಠಾಣೆಗಳಲ್ಲಿ ೫ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಇದರೊಂದಿಗೆ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆ, ತಮಿಳುನಾಡು ಗಡಿಭಾಗದ ಡಂಕಣಿ ಕೋಟೆ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ಕೊಲೆ ಪ್ರಕರಣಗಳಿದ್ದವು. ಅಪರಾಧ ಚಟುವಟಿಕೆಗಳ ಹಿನ್ನೆಲೆಯಲ್ಲಿ ಹರ್ಷನನ್ನು ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ಪೊಲೀಸರು ಜಿಲ್ಲೆಯಿಂದ ಗಡಿಪಾರು ಮಾಡಿದ್ದರು. ಗಡಿಪಾರಿನಲ್ಲಿದ್ದರೂ, ವಾರದ ಹಿಂದೆ ಕನಕಪುರಕ್ಕೆ ಬಂದು ಅನೀಶ್ ಕೊಲೆಗೆ ಯತ್ನಿಸಿ ಕೈಕತ್ತರಿಸಿದ್ದರು. ಬಾಕ್ಸ್................
ಪೊಲೀಸರಿಂದ ನಾಲ್ಕನೇ ಶೂಟ್ ಔಟ್ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ನಿರಂತರ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರಿಗೆ ಜಿಲ್ಲೆಯ ಪೊಲೀಸರು ಗುಂಡಿನ ರುಚಿ ತೋರಿಸಲು ಆರಂಭಿಸಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ನಾಲ್ಕು ಪ್ರಕರಣಗಳಲ್ಲಿ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದವರ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ರಾಮನಗರದಲ್ಲಿ ಕೊಲೆ ಯತ್ನ ನಡೆಸಿದ್ದ ಆರೋಪಿಯೊಬ್ಬನ ಮೇಲೆ ವಡೇರಹಳ್ಳಿ ಗೇಟ್ ಬಳಿ ಪೊಲೀಸರು ಕಾಲಿಗೆ ಗುಂಡು ಹಾರಿಸಿದ್ದರು. ಇನ್ನು ಕಗ್ಗಲಿಪರ ಪೊಲೀಸರು ಪ್ರಯಾಣಿಕರನ್ನು ದರೋಡೆ ಮಾಡುತ್ತಿದ್ದ ಎರಡು ಪ್ರತ್ಯೇಕ ಪ್ರಕರಣಗಳ ಆರೋಪಿ ಮೇಲೆ ಗುಂಡು ಹಾರಿಸಿದ್ದರು. ಇದೀಗ ಕನಕಪುರದ ರೌಡಿಶೀಟರ್‌ಗಳ ಮೇಲೆ ಗುಂಡು ಹಾರಿಸಿದ್ದಾರೆ.
ಪೊಟೋ೨೮ಸಿಪಿಟ೧೩: ಪೊಲೀಸರು ಶೂಟ್‌ಔಟ್ ನಡೆಸಿರುವ ಸ್ಥಳವನ್ನು ಹಿರಿಯ ಅಧಿಕಾರಿಗಳು ಪರಿಶೀಲಿಸುತ್ತಿರುವುದು.ಪೊಟೋ೨೮ಸಿಪಿಟ೧೪:ಗಾಯಾಳುಗಳು ಆಸ್ಪತ್ರೆಯಲ್ಲಿ ದಾಖಲಿಸಿರುವುದು.ಪೊಟೋ೨೮ಸಿಪಿಟ೧೫:
ಗುಂಡೇಟು ತಿಂದ ಆರೋಪಿ ಹರ್ಷ.ಪೊಟೋ೨೮ಸಿಪಿಟ೧೬:ಗುಂಡೇಟು ತಿಂದಿರುವ ಆರೋಪಿ ಕರುಣೇಶ್.