ಆರ್ಥಿಕ ನಿರ್ವಹಣೆ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಅಗತ್ಯ

KannadaprabhaNewsNetwork |  
Published : Jan 11, 2024, 01:30 AM IST
69 | Kannada Prabha

ಸಾರಾಂಶ

ಡಿ. ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದ ವತಿಯಿಂದ ಕಾರ್ಯಕ್ರಮ

- ಎಸ್ ಬಿಐ ಬ್ಯಾಂಕಿನ ವ್ಯವಸ್ಥಾಪಕ ಆಶಿಶ್ ಕುಮಾರ್ ಆಶಿಶ್ ಕುಮಾರ್ ಝಾಕನ್ನಡಪ್ರಭ ವಾರ್ತೆ ಹುಣಸೂರು

ಆರ್ಥಿಕ ನಿರ್ವಹಣೆ ಕುರಿತು ವಿದ್ಯಾರ್ಥಿಗಳು ಅಗತ್ಯವಾಗಿ ಅರಿವು ಮೂಡಿಸಿಕೊಳ್ಳುವುದು ಅವಶ್ಯಕವೆಂದು ಎಸ್ ಬಿಐ ಬ್ಯಾಂಕಿನ ವ್ಯವಸ್ಥಾಪಕ ಆಶಿಶ್ ಕುಮಾರ್ ಝಾ ಅಭಿಪ್ರಾಯಪಟ್ಟರು.

ಪಟ್ಟಣದ ಡಿ. ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದ ವತಿಯಿಂದ ಬುಧವಾರ ಆಯೋಜಿಸಿದ್ದ ಬ್ಯಾಂಕಿಂಗ್ ಆಚರಣೆಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದು ಡಿಜಿಟಲ್ ವ್ಯವಹಾರ ಹೆಚ್ಚಿನ ಮಟ್ಟದಲ್ಲಿ ನಡೆದಿರುವುದು ನಿಜ. ಹಾಗೆಂದ ಮಾತ್ರಕ್ಕೆ ಬ್ಯಾಂಕಿಂಗ್ ವ್ಯವಹಾರಗಳ ಕುರಿತು ನಿರ್ಲಕ್ಷ್ಯ ವಹಿಸಬೇಡಿರಿ. ಚಲನ್ ತುಂಬುವುದು ಹೇಗೆ, ಡಿಡಿ ಪಡೆಯುವ ವೇಳೆ ಅನುಸರಿಸಬೇಕಾದ ಕ್ರಮಗಳೇನು? ಡಿಡಿ ಚಲನ್ ತುಂಬುವ ಪರಿ ಹೇಗೆ? ಉನ್ನತ ವ್ಯಾಸಂಗಕ್ಕೆ ಅಗತ್ಯ ಸಾಲ ಸೌಲಭ್ಯಗಳನ್ನು ಪಡೆಯುವುದು ಸೇರಿದಂತೆ ಆರ್ಥಿಕ ನಿರ್ವಹಣೆಯ ಅರಿವು ನಿಮಗಾಗುವುದು. ಉಳಿತಾಯದ ಮನೋಭಾವ ನಿಮ್ಮಲ್ಲಿ ಮೂಡಲು ಬ್ಯಾಂಕಿಂಗ್ ವ್ಯವಹಾರಗಳಲಿ ಪಾಲ್ಗೊಳ್ಳಿರಿ. ಬ್ಯಾಂಕ್ ಗೆ ನೀವು ಬಂದಾಗ ಅಲ್ಲಿರುವ ಅನಕ್ಷರಸ್ಥರು, ವೃದ್ಧರು ಚಲನ್ ತುಂಬಲು ಸಹಾಯ ಕೋರಿದಲ್ಲಿ ನಿರಾಕರಿಸದೆ ಅವರ ಸಹಾಯಕ್ಕೆ ಮುಂದಾದಲ್ಲಿ ನಿಮ್ಮ ಜ್ಞಾನಕ್ಕೆ ಗೌರವ ಬರುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಕವಿತ ಮಾತನಾಡಿದರು. ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ. ಸಬೀರ ಫಿರ್ದೋಸ್, ವಾಣಿಜ್ಯ ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ. ದೀಪಕ್, ಪ್ರಾಧ್ಯಾಪಕ ಯೋಗೇಶ್, ಮಾದಪ್ಪ, ದೊಡ್ಡೇಗೌಡ, ಪುಣ್ಯಭೂಮಿ ನಿಲಯ ಪಾಲಕ ಬಸವರಾಜು, ಡಾ. ಬಸವರಾಜು, ಡಾ. ಎಚ್.ಟಿ. ರವಿಕುಮಾರ್, ಎಂ.ಎ ಅರ್ಥಶಾಸ್ತ್ರ ಹಾಗೂ ಎಂ.ಕಾಂ ವಿಭಾಗದ ವಿದ್ಯಾರ್ಥಿಗಳು ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ