ದೇಶ ವಿರೋಧಿ, ದೇಶ ವಿಭಜನೆ ಖಂಡಿಸಿ ಬಿಜೆಪಿಯಿಂದ ಜಾಗೃತಿ ಪಾದಯಾತ್ರೆ

KannadaprabhaNewsNetwork |  
Published : Mar 05, 2024, 01:32 AM IST
ಗದಗದಲ್ಲಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ದೇಶ ವಿರೋಧಿ ಮತ್ತು ದೇಶ ವಿಭಜನೆ ಖಂಡಿಸಿ ಜಾಗ್ರತ ಪಾದಯಾತ್ರೆ ನಡೆಯಿತು. | Kannada Prabha

ಸಾರಾಂಶ

ದೇಶ ವಿರೋಧಿ ಮತ್ತು ದೇಶ ವಿಭಜನೆ ಖಂಡಿಸಿ ನಗರದಲ್ಲಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ಜಾಗೃತಿ ಪಾದಯಾತ್ರೆ ನಡೆಯಿತು.

ಗದಗ: ದೇಶ ವಿರೋಧಿ ಮತ್ತು ದೇಶ ವಿಭಜನೆ ಖಂಡಿಸಿ ನಗರದಲ್ಲಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ಜಾಗೃತಿ ಪಾದಯಾತ್ರೆ ನಡೆಯಿತು.

ರಾಜ್ಯದಲ್ಲಿ ನಡೆಯುತ್ತಿರುವ ದೇಶ ವಿರೋಧಿ ಕೃತ್ಯಗಳು, ಘೋಷಣೆಗಳು ಹಾಗೂ ದೇಶ ವಿಭಜನೆಯ ಹೇಳಿಕೆಗಳನ್ನು ಖಂಡಿಸಿ, ದೇಶಭಕ್ತಿ ಜಾಗೃತಿಯ ನಿಟ್ಟಿನಲ್ಲಿ ಹಾಗೂ ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ೩ನೇ ಬಾರಿಗೆ ಬಿಜೆಪಿಗೆ ಅಧಿಕಾರ ನೀಡಲು ಬಿಜೆಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ತಿರಂಗಾ ಯಾತ್ರೆ ಹಾಗೂ ಮಹಿಳಾ ಮೋರ್ಚಾ ವತಿಯಿಂದ ನಾರಿಶಕ್ತಿ ವಂದನಾ ಪಾದಯಾತ್ರೆ ಆಯೋಜಿಸಲಾಗಿತ್ತು. ನಗರದ ಭೂಮರೆಡ್ಡಿ ಸರ್ಕಲ್‌ನಿಂದ ಪ್ರಾರಂಭವಾಗಿ ಟಾಂಗಾಕೂಟ ವರೆಗೆ ಪಾದಯಾತ್ರೆ ಜರುಗಿತು.

ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಜೀ ಅವರು ಮತ್ತೊಮ್ಮೆ ಪ್ರಧಾನಮಂತ್ರಿಗಳಾಗಲಿ ಎಂದು ತಮಿಳುನಾಡಿನಿಂದ ದಿಲ್ಲಿಯ ವರೆಗೆ ಬೈಕ್ ಸವಾರಿ ನಡೆಸುತ್ತಿರುವ ರಾಜಲಕ್ಷ್ಮೀ ಮಂದಾ ಅವರನ್ನು ಸನ್ಮಾನಿಸಲಾಯಿತು.

ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಕ್ಕಿರೇಶ್ ರಟ್ಟಿಹಳ್ಳಿ, ಲಿಂಗರಾಜ್ ಪಾಟೀಲ, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಭಾರತಿ ಅಳವಂಡಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂತೋಷ ಅಕ್ಕಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನಿರ್ಮಲಾ ಕೊಳ್ಳಿ, ಪಕ್ಷದ ಹಿರಿಯರಾದ ಕಾಂತಿಲಾಲ್ ಬನ್ಸಾಲಿ, ಸಿದ್ದು ಪಲ್ಲೇದ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ಇರ್ಷಾದ ಮಾನ್ವಿ, ಅನಿಲ್‌ ಅಬ್ಬಿಗೇರಿ, ದೇವಪ್ಪ ಗೊಟೂರ, ಅಶೋಕ ಸಂಕಣ್ಣವರ, ವಿನಾಯಕ ಮಾನ್ವಿ, ನಾಗರಾಜ ತಳವಾರ, ಗಂಗಾಧರ ಹಬೀಬ, ಅಶೋಕ ಕರೂರ, ಅಪ್ಪಣ್ಣ ಟೆಂಗಿನಕಾಯಿ, ಅಶೋಕ ಕರೂರ, ಅಮರನಾಥ ಬೆಟಗೇರಿ, ಶಿವು ಹಿರೇಮನಿಪಾಟೀಲ, ಸುಧೀರ ಕಾಟಿಗರ, ವಿಜಯಲಕ್ಷ್ಮೀ ಶಶಿಧರ ದಿಂಡೂರ, ವಿಜಯಲಕ್ಷ್ಮೀ ಮಾನ್ವಿ, ಸ್ವಾತಿ ಅಕ್ಕಿ, ವಿದ್ಯಾವತಿ ಅಮರನಾಥ ಗಡಗಿ, ಸಿದ್ರಾಮೇಶ ಹಿರೇಮಠ, ಲಕ್ಷ್ಮೀ ಶಂಕರ ಕಾಕಿ, ಬೂದಪ್ಪ ಹಳ್ಳಿ, ರಮೇಶ ಸಜ್ಜಗಾರ, ರೇಖಾ ಬಂಗಾರಶೆಟ್ಟರ, ಪದ್ಮಿನಿ ಮುತ್ತಲದಿನ್ನಿ, ಶೇಖವ್ವ ಮಾಸರೆಡ್ಡಿ, ಮಾಂತೇಶ ಬಾತಾಖಾನಿ, ವೆಂಕಟೇಶ ಹಬೀಬ, ನವೀನ ಕೊಟೆಕಲ್, ಸುರೇಶ ಮರಳಪ್ಪನವರು, ಸುರೇಶ ಚಿತ್ತರಗಿ, ಶಿವು ಗೊಟೂರ ಹಾಗೂ ಕಾರ್ಯಕರ್ತರು ಇದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌