ಆಯುರ್ವೇದ ಭಾರತೀಯ ಚಿಕಿತ್ಸಾ ಪದ್ಧತಿ

KannadaprabhaNewsNetwork |  
Published : Sep 28, 2025, 02:01 AM IST
ಆರೋಗ್ಯ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಆಯುರ್ವೇದ ಚಿಕಿತ್ಸೆಯೂ ನಮ್ಮ ಮನೆಯ ಹಿರಿಯರ ಬಳುವಳಿ. ನಮ್ಮ ಅಜ್ಜಿ, ತಾಯಂದಿರೇ ಇದರ ಸಂಶೋಧಕರು ಎಂದು ತಾಲೂಕು ಆಯುಷ್ ವೈದ್ಯರ ಸಂಘದ ಅಧ್ಯಕ್ಷ ಡಾ.ವೀರೇಶ ಪಾಟೀಲ ಹೇಳಿದರು.ಪಟ್ಟಣದ ಇಂದಿರಾ ನಗರದಲ್ಲಿರುವ ತಾಲೂಕು ಆಯುರ್ವೇದ ಆಸ್ಪತ್ರೆ ಆವರಣದಲ್ಲಿ ಗುರುವಾರ ಆಯುಷ್ ವೈದ್ಯರ ಸಂಘ ಮತ್ತು ಹಸಿರು ತೋರಣ ಗೆಳೆಯರ ಬಳಗದ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಮತ್ತು ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಆಯುರ್ವೇದ ಚಿಕಿತ್ಸೆ ನಮ್ಮ ಭಾರತೀಯ ಪದ್ಧತಿಯಾಗಿದೆ.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳಆಯುರ್ವೇದ ಚಿಕಿತ್ಸೆಯೂ ನಮ್ಮ ಮನೆಯ ಹಿರಿಯರ ಬಳುವಳಿ. ನಮ್ಮ ಅಜ್ಜಿ, ತಾಯಂದಿರೇ ಇದರ ಸಂಶೋಧಕರು ಎಂದು ತಾಲೂಕು ಆಯುಷ್ ವೈದ್ಯರ ಸಂಘದ ಅಧ್ಯಕ್ಷ ಡಾ.ವೀರೇಶ ಪಾಟೀಲ ಹೇಳಿದರು.ಪಟ್ಟಣದ ಇಂದಿರಾ ನಗರದಲ್ಲಿರುವ ತಾಲೂಕು ಆಯುರ್ವೇದ ಆಸ್ಪತ್ರೆ ಆವರಣದಲ್ಲಿ ಗುರುವಾರ ಆಯುಷ್ ವೈದ್ಯರ ಸಂಘ ಮತ್ತು ಹಸಿರು ತೋರಣ ಗೆಳೆಯರ ಬಳಗದ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಮತ್ತು ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಆಯುರ್ವೇದ ಚಿಕಿತ್ಸೆ ನಮ್ಮ ಭಾರತೀಯ ಪದ್ಧತಿಯಾಗಿದೆ. ಇದನ್ನು ಪಡೆಯುವುದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ನಮ್ಮ ಮನೆಯಲ್ಲಿ ಸಿಗುವ ಶುಂಠಿ, ಅರಿಶಿನ, ಹವೀಜ, ಲವಂಗ, ತುಳಸಿ, ಲೌಳಸರ ಮೊದಲಾದ ಪದಾರ್ಥಗಳಿಂದಲೇ ಹಲವು ರೋಗಗಳನ್ನು ತಡೆಗಟ್ಟಲು ಸಾಧ್ಯವಿದೆ ಎಂದು ಹೇಳಿದರು.

ಹಸಿರು ತೋರಣ ಗೆಳೆಯರ ಬಳಗದ ಅಧ್ಯಕ್ಷ ಬಿ.ಎಚ್.ಬಳಬಟ್ಟಿ ಮಾತನಾಡಿ, ಆಯುರ್ವೇದ ಚಿಕಿತ್ಸೆಯನ್ನು ನಮ್ಮ ಹಿರಿಯರು ನಂಬಿದ್ದರು. ಆಯುರ್ವೇದದಿಂದ ಗುಣಮುಖರಾಗುವುದು ನಿಧಾನವಾದರೂ ಇದರಲ್ಲಿ ಅಡ್ಡಪರಿಣಾಮಗಳಿಲ್ಲ. ಇದು ಈಗ ವಿದೇಶದಲ್ಲಿ ಸಹ ಜನಪ್ರಿಯವಾಗುತ್ತಿರುವುದು ಸಂತಸದ ಸಂಗತಿ ಎಂದರು.‌

ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಬಸವರಾಜ ಕಟ್ಟಿ ಮಾತನಾಡಿ, ಆಯುರ್ವೇದ ಚಿಕಿತ್ಸೆ ಸರಳವಾದುದು, ಜನಸಾಮಾನ್ಯರ ಕೈಗೆಟಕುವಂತದು. ಆಯುರ್ವೇದ ಪದ್ಧತಿಯನ್ನು ಜನತೆಗೆ ಮುಟ್ಟಿಸುವ ನಮ್ಮ ಪ್ರಯತ್ನದಲ್ಲಿ ಹಸಿರು ತೋರಣ ಬಳಗದ ಸದಸ್ಯರು ಕೈ ಜೋಡಿಸುತ್ತಿರುವುದು ಸಂತಸ ತಂದಿದೆ. ಆಯುರ್ವೇದ ಆಸ್ಪತ್ರೆಯಲ್ಲಿ ಸಿಗುವ ಸೌಲಭ್ಯಗಳನ್ನು ಜನತೆ ಪಡೆಯುವಂತಾದರೆ ನಮ್ಮ ಶ್ರಮ ಸಾರ್ಥಕವಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದರು.ಹಸಿರು ತೋರಣ ಬಳಗದ ಸಂಚಾಲಕ ಮಹಾಬಲೇಶ್ವರ ಗಡೇದ ಮಾತನಾಡಿ, ಗಿಡಗಳನ್ನು ನೆಡುವ, ಸಂರಕ್ಷಿಸುವ ಕೆಲಸವನ್ನು ನಾವು ಮಾಡುವುದರ ಜೊತೆಗೆ ಆಯುರ್ವೇದ ಪದ್ಧತಿಯನ್ನು ಜನತೆಗೆ ಮುಟ್ಟಿಸುವ ಕೆಲಸ ಮಾಡೋಣ. ಆರೋಗ್ಯವಂತ ಜೀವನ ನಮ್ಮದಾಗಬೇಕು ಎಂದು ತಿಳಿಸಿದರು. ವೇದಿಕೆಯಲ್ಲಿ ಹಸಿರು ತೋರಣ ಬಳಗದ ಕಾರ್ಯದರ್ಶಿ ಅಮರೇಶ ಗೂಳಿ, ಪುರಸಭೆಯ ಸದಸ್ಯ ಶಿವಣ್ಣ ಶಿವಪುರ, ಆಯುಷ್ ವೈದ್ಯರ ಸಂಘದ ಕಾರ್ಯದರ್ಶಿ ಡಾ.ವೀರೇಶ ಇಟಗಿ ಇದ್ದರು. ಕಾರ್ಯಕ್ರಮದಲ್ಲಿ ಹಸಿರು ತೋರಣ ಗೆಳೆಯರ ಬಳಗದ ಮಾಜಿ ಅಧ್ಯಕ್ಷರಾದ ಬಿ.ಎಸ್.ಮೇಟಿ, ಅಶೋಕ ರೇವಡಿ, ನಾಗಭೂಷಣ ನಾವದಗಿ, ಸದಸ್ಯರಾದ ಸುರೇಶ ಕಲಾಲ, ಬಸವರಾಜ ಬಿಜ್ಜೂರ, ಡಾ.ವಿಜಯಕುಮಾರ ಗೂಳಿ, ಡಾ.ಚಂದ್ರಶೇಖರ ಶಿವಯೋಗಿಮಠ, ಡಾ.ಆರ್.ಎಸ್. ಮಸೂತಿ, ಡಾ.ಜಹೀರುದ್ದೀನ ಬೀಳಗಿ, ಡಾ.ದೆಗಿನಾಳ, ಡಾ.ಆನಂದ ಚೌಧರಿ ಮತ್ತಿತರರು ಇದ್ದರು. ಡಾ.ವಿಜಯಕುಮಾರ ನಾಯಕ ಧನ್ವಂತರಿ ಶ್ಲೋಕ ಹೇಳಿದರು. ಅಕ್ಷತಾ ರೂಢಗಿ ನಿರೂಪಿಸಿದರು. ಲಕ್ಷ್ಮೀ ಪಾಟೀಲ ವಂದಿಸಿದರು.

PREV

Recommended Stories

ಅ.4ರಿಂದ ಅಂತಾರಾಜ್ಯ ವಿವಿ ಕಬಡ್ಡಿ ಕ್ರೀಡಾಕೂಟ
ಜಾನಪದ ಕಲೆ ಉಳಿಸಲು ಸಂಘಟನೆಗಳ ಪಾತ್ರ ಪ್ರಮುಖ: ಎಂ.ಎಂ. ವಿರಕ್ತಮಠ