ಬಾಬು ಜಗಜೀವನರಾಂ ದೇಶಕ್ಕಾಗಿ ಶ್ರೇಷ್ಠ ಕೊಡುಗೆ: ಗೋವಿಂದ

KannadaprabhaNewsNetwork | Published : Apr 6, 2024 12:46 AM

ಸಾರಾಂಶ

ದೇಶದಲ್ಲಿ ಹಸಿರು ಕ್ರಾಂತಿ ತರುವ ಮೂಲಕ ಡಾ.ಬಾಬು ಜಗಜೀವನರಾಂ ಅವರು ದೇಶಕ್ಕಾಗಿ ಶ್ರೇಷ್ಠ ಕೊಡುಗೆ ನೀಡಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.

ಬೀದರ್‌: ದೇಶದಲ್ಲಿ ಹಸಿರು ಕ್ರಾಂತಿ ತರುವ ಮೂಲಕ ಡಾ.ಬಾಬು ಜಗಜೀವನರಾಂ ಅವರು ದೇಶಕ್ಕಾಗಿ ಶ್ರೇಷ್ಠ ಕೊಡುಗೆ ನೀಡಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.

ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಡಾ.ಬಾಬು ಜಗಜೀವನರಾಂ ಅವರ 117ನೇ ಜಯಂತಿ ಅಂಗವಾಗಿ ಜಗಜೀವನರಾಂ ಅವರ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸಿ ಮಾತನಾಡಿದರು.

ಭಾರತಕ್ಕೆ ಸ್ವಾತಂತ್ರ‍್ಯ ಸಿಕ್ಕಾಗ ದೇಶದ ಜನಸಂಖ್ಯೆ 30 ಕೋಟಿ ಇತ್ತು ಇಂದು 140 ಕೋಟಿ ಜನ ಇದ್ದರೂ ಯಾರಿಗೂ ಆಹಾರದ ಸಮಸ್ಯೆಯಾಗಿಲ್ಲ ಅದು ಜಗಜೀವನರಾಂ ಅವರ ಮುಂದಾಲೋಚನೆ ಆಗಿತ್ತು. ಅವರು ದೂರದೃಷ್ಟಿಯ ನಾಯಕರಾಗಿರುವ ಕಾರಣ ದೇಶದ ಕೃಷಿಯಲ್ಲಿ ಬಹುದೊಡ್ಡ ಬದಲಾವಣೆ ತರುವ ಮೂಲಕ ಹಸಿರು ಕ್ರಾಂತಿ ಹರಿಕಾರ ಎಂದೇ ಪ್ರಸಿದ್ಧರಾದರು ಎಂದರು.

ಆಫ್ರಿಕಾದಂತಹ ಹಲವಾರು ದೇಶಗಳಲ್ಲಿ ಜನರಿಗೆ ಇನ್ನೂ ಸರಿಯಾಗಿ ಊಟ ಸಿಗದೆ ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆದರೆ ದೇಶದಲ್ಲಿ 140 ಕೋಟಿ ಜನರಿದ್ದರೂ ಇಲ್ಲಿ ಆಹಾರದ ಸಮಸ್ಯೆ ಇಲ್ಲ ಅದು ಜಗಜೀವನರಾಂ ಅವರ ದೂರದೃಷ್ಟಿಯಾಗಿದೆ. ಅವರು ದೇಶದ ಉಪ ಪ್ರಧಾನಮಂತ್ರಿ ಮಾತ್ರವಲ್ಲದೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಲವಾರು ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದರು ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ.ಎಸ್‌.ಎಲ್‌ ಮಾತನಾಡಿ, ಡಾ.ಬಾಬು ಜಗಜೀವನರಾಂ ಅವರಿಗೆ ದೇಶದ ಭವಿಷ್ಯದ ಗುರಿ ಇತ್ತು. ಹಾಗಾಗಿ ದೇಶದಲ್ಲಿ ಆಹಾರದ ಕೊರತೆಯಾಗಬಾರದು ಎಂದು ಹಸಿರು ಕ್ರಾಂತಿಯನ್ನೆ ಮಾಡಿದರು. ಇಂದು ನಮ್ಮ ದೇಶದಲ್ಲಿ ಇಷ್ಟು ಜನಸಂಖ್ಯೆ ಇದ್ದರೂ ಯಾರು ಆಹಾರ ಸಮಸ್ಯೆಯಿಂದ ಬಳಲುತ್ತಿಲ್ಲ ಎಂದರು.

ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್‌ ಬದೋಲೆ ಮಾತನಾಡಿ, ಇವತ್ತು ಸಮತಾ ದಿನ ಎಂದು ಕರೆಯಲಾಗುತ್ತದೆ. ಇಂಡೋ-ಬಾಂಗ್ಲಾ ಯುದ್ಧ ಸಂಧರ್ಭದಲ್ಲಿ ಡಾ.ಬಾಬು ಜಗಜೀವನರಾಂ ರಕ್ಷಣಾ ಮಂತ್ರಿಯಾಗಿದ್ದರು. ಹಸಿರು ಕ್ರಾಂತಿಯ ಹರಿಕಾರ ಎಂದು ಅವರನ್ನು ಕರೆಯುತ್ತಾರೆ ಅವರ ತತ್ವಗಳನ್ನು ನಾವೆಲ್ಲರೂ ಪಾಲಿಸೋಣ ಎಂದು ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಪೂಜೆ ಸಲ್ಲಿಸಿದ ನಂತರ ನಗರದ ಹೈದ್ರಾಬಾದ್‌ ರಸ್ತೆಯಲ್ಲಿರುವ ಡಾ.ಬಾಬು ಜಗಜೀವನರಾಂ ಪುತ್ಥಳಿಗೆ ತೆರಳಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ಇತರೆ ಗಣ್ಯರು ಹೂಮಾಲೆ ಹಾಕುವ ಮೂಲಕ ಗೌರವ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೆಶಕ ಸಿಂಧು.ಎಚ್‌.ಎಸ್‌, ಜಗಜೀವನರಾಂ ಸಮಾಜದ ಮುಖಂಡ ಫರ್ನಾಂಡೀಸ್‌ ಹಿಪ್ಪಳಗಾಂವ್‌, ಮಾರುತಿ ಬೌದ್ದೆ, ರಾಜು ಕಡ್ಯಾಳ, ಅಭಿ ಕಾಳೆ, ರೋಹಿದಾಸ ಘೋಡೆ, ಚಂದ್ರಕಾಂತ ಹಿಪ್ಪಳಗಾಂವ್‌, ವಿಜಯಕುಮಾರ ಸೋನಾರೆ ಸೇರಿದಂತೆ ಹಲವಾರು ಜನರು ಉಪಸ್ಥಿತರಿದ್ದರು.

Share this article