ಹಸಿರು ಕ್ರಾಂತಿಯ ಹರಿಕಾರ ಬಾಬೂಜಿ

KannadaprabhaNewsNetwork |  
Published : Apr 06, 2024, 12:53 AM IST
೫ಕೆಎಲ್‌ಆರ್-೨ಕೋಲಾರದ ಕಾಂಗ್ರೆಸ್ ಭವನದಲ್ಲಿ ಭಾರತದ ಮಾಜಿ ಉಪ ಪ್ರಧಾನಿಮಂತ್ರಿ ಡಾ.ಬಾಬು ಜಗಜೀವನ್ ರಾಂ ೧೧೭ನೇ ಜಯಂತಿ ಆಚರಿಸಿದರು. ಕಾಂಗ್ರೆಸ್ ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷ ಊರಬಾಗಿಲು ಶ್ರೀನಿವಾಸ್ ಇದ್ದರು. | Kannada Prabha

ಸಾರಾಂಶ

ಡಾ.ಜಗಜೀವನ ರಾಂ ಹಸಿರು ಕ್ರಾಂತಿಯ ಹರಿಕಾರ, ದೇಶ ಕಂಡ ಮಾಹಾನ್ ನಾಯಕ, ದೇಶ ಕಟ್ಟಿದ ಮಹನೀಯನ ಗುಣ ಎಲ್ಲ ರಾಜಕಾರಣಿಗಳಿಗೂ ಬರಬೇಕು. ಜಗಜೀವನರಾಂ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಕೋಲಾರಡಾ.ಬಾಬು ಜಗಜೀವನರಾಂ ಅವರ ವಿಚಾರಗಳನ್ನು ಮತ್ತು ನೀತಿಗಳನ್ನು ಪ್ರಸ್ತುತ ದಿನಮಾನಗಳಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ದೇಶದ ಸಮಗ್ರ ಅಭಿವೃದ್ಧಿ ಸಾಧಿಸಬೇಕು ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷ ಊರಬಾಗಿಲು ಶ್ರೀನಿವಾಸ್ ತಿಳಿಸಿದರು.ನಗರದ ಕಾಂಗ್ರೆಸ್ ಭವನದಲ್ಲಿ ಭಾರತದ ಮಾಜಿ ಉಪ ಪ್ರಧಾನಿಮಂತ್ರಿ ಡಾ.ಬಾಬು ಜಗಜೀವನ್ ರಾಂ ೧೧೭ನೇ ಜಯಂತಿ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಹಸಿರು ಕ್ರಾಂತಿಯ ಹರಿಕಾರ

ಹಸಿರು ಕ್ರಾಂತಿಯ ಹರಿಕಾರ, ದೇಶ ಕಂಡ ಮಾಹಾನ್ ನಾಯಕ, ದೇಶ ಕಟ್ಟಿದ ಮಹನೀಯನ ಗುಣ ನಮ್ಮ ಪಕ್ಷದ ಎಲ್ಲರಿಗೂ ಬರಬೇಕು. ಜಗಜೀವನರಾಂ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು. ಡಾ.ಬಾಬು ಜಗಜೀವನರಾಂ ಸಮಾಜಕ್ಕೆ ಸಮಾನತೆಯ ಸಂದೇಶ ಸಾರಿದ ಸಂಪನ್ನ ರಾಜಕಾರಣಿ. ಜಗಜೀವನ ರಾಂ ಸುಮಾರು ೪೦ ವರ್ಷಗಳ ಕಾಲ ಸಂಸತ್‌ನಲ್ಲಿ ಹಲವಾರು ಮಹತ್ತರ ಖಾತೆಗಳ ನಿರ್ವಹಣೆಯನ್ನು ಮಾಡಿದ ಏಕೈಕ ರಾಜಕಾರಣಿ ಎಂದು ಹೇಳಿದರು.

ಕಾಂಗ್ರೆಸ್ ಎಸ್.ಟಿ ವಿಭಾಗದ ಜಿಲ್ಲಾಧ್ಯಕ್ಷ ಜಯದೇವ ಮಾತನಾಡಿ, ಜಗಜೀವನರಾಂರು ದಕ್ಷ ಹಾಗೂ ಉತ್ತಮ ರಾಜಕಾರಣಿ ಅಷ್ಟೇ ಅಲ್ಲದೆ ಮುತ್ಸದ್ಧಿ ಆಡಳಿತಗಾರರು. ಪರರಿಗಾಗಿ ಸೇವೆ ಸಲ್ಲಿಸುವುದು ಹೇಗೆ ಎನ್ನುವುದನ್ನು ತಮ್ಮ ಜೀವನ ಶೈಲಿಯಿಂದ ತಿಳಿಸಿಕೊಟ್ಟವರು ಎಂದು ಹೇಳಿದರು.

ಸಾಮಾಜಿಕ, ಆರ್ಥಿಕ ಬದಲಾವಣೆ

ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಪ್ರಸಾದ್ ಬಾಬು ಮಾತನಾಡಿ, ದೇಶದ ರಾಜಕೀಯ, ಸಾಮಾಜಿಕ, ಆರ್ಥಿಕ ಬದಲಾವಣೆಗೆ ಬಾಬು ಜಗಜೀವನರಾಂ ಮೂಲ ಕಾರಣರಾಗಿದ್ದಾರೆ. ದೀನ ದಲಿತರ ಏಳಿಗೆಗಾಗಿ ಸದಾ ಶ್ರಮಿಸುತ್ತಿದ್ದರು. ಸಾಮಾಜಿಕ ಕಳಕಳಿ ಹೊಂದಿದ್ದ ವ್ಯಕ್ತಿಯಾಗಿದ್ದರು. ಅವರ ತತ್ವಗಳನ್ನು ಪಾಲಿಸುವ ಮೂಲಕ ದೇಶದ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ತಿಳಿಸಿದರು.ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎಂ. ವೆಂಕಟಪತಿ, ಎಸ್.ಟಿ. ವಿಭಾಗದ ಜಿಲ್ಲಾ ಅಧ್ಯಕ್ಷ ನಾಗರಾಜ್, ಮುಖಂಡರಾದ ಲಾಲ್ ಬಹದ್ದೂರ್ ಶಾಸ್ತ್ರಿ, ಖಾದ್ರಿಪುರ ಬಾಬು, ಯಲ್ಲಪ್ಪ, ಬೆಳಗಾನಹಳ್ಳಿ ಮುನಿವೆಂಕಟಪ್ಪ, ತ್ಯಾಗರಾಜ್, ಪ್ಯಾರಾಜಾನ್, ಮುನಿವೆಂಕಟಮ್ಮ, ವೆಂಕಟಲಕ್ಷ್ಮಮ್ಮ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ