ಭಜರಂಗದಳ ಸಖರಾಯಪಟ್ಟಣ ಘಟಕ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸಮಾಜದಲ್ಲಿ ಹಿಂದೂಗಳನ್ನು ರಕ್ಷಿಸುವ ಹಾಗೂ ಮತಾಂಧ ಶಕ್ತಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪ್ರತಿ ಭಾಗದಲ್ಲಿ ಭಜರಂಗದಳದ ಯುವಪಡೆ ರಚಿಸಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಬಜರಂಗದಳ ದಕ್ಷಿಣ ಕರ್ನಾಟಕ ಪ್ರಾಂತ ಸಂಯೋಜಕ ಪ್ರಭಂಜನ್ ಸೂರ್ಯ ಹೇಳಿದರು.ತಾಲೂಕಿನ ಸಖರಾಯಪಟ್ಟಣ ಗ್ರಾಮದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದಿಂದ ಏರ್ಪಡಿಸಿದ್ದ ಬಜರಂಗದಳ ಸಖರಾಯಪಟ್ಟಣ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಸ್ತುತ ಯುವ ಪೀಳಿಗೆಗೆ ಗುರಿಯಾಗಿಸಿರುವ ಕೆಲವು ಸಂಘಟನೆಗಳು ಲವ್ ಜಿಹಾದ್, ಮತಾಂತರ ಮುಂದಿಟ್ಟು ಹಿಂದೂಗಳನ್ನು ತನ್ನತ್ತ ಸೆಳೆಯುವಲ್ಲಿ ಮುಂದಾಗಿವೆ. ಇವುಗಳಿಂದ ಅದೆಷ್ಟೋ ಯುವತಿಯರು ಅನ್ಯಾಯಕ್ಕೆ ಒಳಗಾಗಿ ತವರಿಗೂ ತೆರಳಲಾರದ ಸ್ಥಿತಿ ತಂದೊಡ್ಡಿದ್ದಾರೆ ಎಂದರು.
ಪ್ರಪಂಚದಲ್ಲಿ ಭಾರತ ಅತ್ಯಂತ ವಿಭಿನ್ನ ಸಂಸ್ಕೃತಿ, ಸಂಪ್ರದಾಯ ಹಾಗೂ ಆಚಾರ ವಿಚಾರ ಒಳಗೊಂಡಿದೆ. ಪುರಾಣ, ಇತಿಹಾಸದಲ್ಲಿ ಧರ್ಮಕ್ಕೆ ಸಂಕಟ ಎದುರಾದಾಗ ಭಗವಾನ್ ಶ್ರೀ ವಿಷ್ಣು ಭೂಮಿಯಲ್ಲಿ ರಾಮ, ಕೃಷ್ಣನಾಗಿ ಅವತಾರವೆತ್ತಿ ಧರ್ಮದ ಉಳಿವಿಗೆ ಭದ್ರಬುನಾದಿ ಹಾಕಿದವರು ಎಂದರು.ತದನಂತರದ ಕಾಲಘಟ್ಟದಲ್ಲಿ ಶಿವಾಜಿ ಮಹಾರಾಜರು, ವಿವೇಕಾನಂದರು ಸೇರಿದಂತೆ ಅನೇಕ ಮಹನೀಯರು ಹಿಂದುತ್ವದ ಸಂಕೇತವಾಗಿ ಹೋರಾಡಿ ಸಂಸ್ಕೃತಿ ಉಳಿಸಿದ್ದಾರೆ. ಆದರೆ, ಈಚೆಗೆ ಕೆಲವು ಸಂಘಟನೆಗಳು ಹಿಂದೂಗಳನ್ನು ಮತಾಂತರಗೊಳಿಸುವ ಮೂಲಕ ಹಿಂದುತ್ವವನ್ನು ಅಳಿಸಲು ಮುಂದಾಗಿರುವುದು ಖಂಡನೀಯ ಎಂದು ಹೇಳಿದರು.ಭಾರತದ ಇತಿಹಾಸವನ್ನು ಒಮ್ಮೆ ತಿರುಗಿಸಿ ನೋಡಿದರೆ ಮಹಮ್ಮದ್ ಘಜಿನಿ ಸೇರಿದಂತೆ ಅನೇಕರು ದೇಶ ಲೂಟಿಮಾಡಿದ್ದಾರೆ. ಸಾವಿರಾರು ದೇವಾಲಯವನ್ನು ಧ್ವಂಸಗೊಳಿಸಿ ಚಿನ್ನಾಭರಣ, ವಜ್ರವೈಡೂರ್‍ಯಗಳನ್ನು ದೋಚಿ ಪರಾರಿಯಾದರೂ ಭಾರತ ಇಂದಿಗೂ ಸಂಪದ್ಭರಿತ ರಾಷ್ಟ್ರ ವಾಗಿದೆ ಎಂದರು.ಗುರುಹಾಲುಸ್ವಾಮಿ ಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವಿಶಿಷ್ಟ ಹಿಂದೂ ಸಂಸ್ಕೃತಿ ಮೆಚ್ಚಿ ಪ್ರಪಂಚದ ಅನೇಕರು ಹಿಂದೂ ಸಂಪ್ರದಾಯವನ್ನು ಬದುಕಿನಲ್ಲಿ ಅಳವಡಿಸಿ ಕೊಂಡಿದ್ದಾರೆ. ಇಂಥ ಅಪ್ರತಿಮ ಶಕ್ತಿ ಹೊಂದಿದ ಹಿಂದೂ ಸಮಾಜಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.ಹಿಂದೂಗಳಾದ ನಾವು ಮೊದಲು ನಮ್ಮನ್ನು ತಿದ್ದಿಕೊಂಡು ಸ್ವಾಭಿಮಾನ ಮೂಡಿಸಿಕೊಂಡರೆ ದೇಶಾಭಿಮಾನ ತಾನಾಗಿಯೇ ಬರಲಿದೆ. ಜೊತೆಗೆ ದೇಶದ ಸಂಸ್ಕೃತಿ ವಿಚಾರಕ್ಕೆ ತೊಡಕುಂಟಾದಲ್ಲಿ ಎದೆಗುಂದದೇ ಮುನ್ನಡೆಯಬೇಕು ಎಂದು ತಿಳಿಸಿದರು.ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ರಂಗನಾಥ್ ಮಾತನಾಡಿ, ಭಾರತೀಯರು ದೇಶವನ್ನು ತಾಯಿ ಸ್ವರೂಪವೆನ್ನುತ್ತಾರೆ. ಇಲ್ಲಿನ ಮಣ್ಣಿನ ವಿಶಿಷ್ಟ ಗುಣವಿದೆ. ಹೀಗಾಗಿ ಪ್ರತಿಯೊಬ್ಬ ರೈತ ಭೂತಾಯಿ ಕೆಲಸದಲ್ಲಿ ತೊಡಗಿದಾಗ ಚಪ್ಪಲಿ ಧರಿಸುವುದಿಲ್ಲ. ಅಂಥಹ ಪಾವಿತ್ರ್ಯತೆ ಪುಣ್ಯ ಭೂಮಿ ನಮ್ಮದು ಎಂದು ಹೇಳಿದರು.ಇದೇ ವೇಳೆ ಬಜರಂಗದಳ ಸಖರಾಯಪಟ್ಟಣ ಘಟಕಕ್ಕೆ ಸಂಯೋಜಕರಾಗಿ ಎಸ್.ಜಿ.ಸಂಜಯ್, ಸಹ ಸಂಯೋಜಕರಾಗಿ ಇಂದುಕುಮಾರ್, ದರ್ಶನ್‌ನಾಯ್ಕ್, ಸುರಕ್ಷಾ ಪ್ರಮುಖ್‌ಗೆ ಎಸ್.ಎಸ್.ನಿತಿನ್, ಲೋಕೇಶ್, ಗೋರಕ್ಷಕ್ ಪ್ರಮುಖ್‌ಗೆ ಜಿ.ವಿನಯ್, ಪ್ರವೀಣ್, ವಿದ್ಯಾರ್ಥಿ ಪ್ರಮುಖ್ ಎಸ್.ಆರ್. ಯಶವಂತ್, ಬೋಲೋ ಪಾಸನ ಕೇಂಧ್ರ ಪ್ರಮುಖ್ ದರ್ಶನ್‌ಗೌಡ, ಸಪ್ತಾಯಿಕ್ ಮಿಲನ್ ಪ್ರಮುಖ್ ಎಚ್.ಪಿ.ಸುಬ್ರಹ್ಮಣ್ಯ. ವಿಎಚ್‌ಪಿ ಖಜಾಂಚಿ ಎಸ್.ಆರ್.ನಾಗಭೂಷಣ್, ಉಪಾಧ್ಯಕ್ಷ ದೀಪು ಹಾಗೂ ಕಾರ್‍ಯದರ್ಶಿಯಾಗಿ ವಿಜಯ್‌ಕುಮಾರ್ ರನ್ನು ನೇಮಿಸಲಾಯಿತು. ಈ ಸಂದರ್ಭದಲ್ಲಿ ಮುಖಂಡರಾದ ಈಶ್ವರಹಳ್ಳಿ ಮಹೇಶ್, ರವೀಂದ್ರ ಬೆಳವಾಡಿ, ಎಚ್.ಸಿ. ಕಲ್ಮರುಡಪ್ಪ, ಅರುಣ್, ಜಯಪ್ಪ, ತುಡಕೂರು ಮಂಜು, ನಂದೀಶ್ ಮದಕರಿ, ಹುಲಿಕೆರೆ ಚಂದ್ರು, ಲೋಕೇಶ್ ಮಾಸ್ಟರ್, ಎಸ್.ಆರ್.ಯೋಗೇಂದ್ರ, ಮಿಥುನ್, ಪ್ರದೀಪ್‌ನಾಯ್ಕ್, ನಾಗೇಗೌಡ, ರಮೇಶ್ ಹಾಜರಿದ್ದರು.ಪೋಟೋ ಫೈಲ್ ನೇಮ್ 22 ಕೆಸಿಕೆಎಂ 3ಸಖರಾಯಪಟ್ಟಣದಲ್ಲಿ ನಡೆದ ಸಮಾರಂಭದಲ್ಲಿ ಭಜರಂಗದಳ ಘಟಕವನ್ನು ಗುರುಹಾಲುಸ್ವಾಮಿ ಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಭಜರಂಗದಳ ದಕ್ಷಿಣ ಕರ್ನಾಟಕ ಪ್ರಾಂತ ಸಂಯೋಜಕ ಪ್ರಭಂಜನ್ ಸೂರ್ಯ ಹಾಗೂ ರಂಗನಾಥ್ ಇದ್ದರು.