ಬಂಟವಾಳ‌ ಬಂಟರ ಸಂಘದ ವಿಂಶತಿ ಸಂಭ್ರಮಕ್ಕೆ ಅದ್ದೂರಿ ಚಾಲನೆ

KannadaprabhaNewsNetwork |  
Published : May 26, 2025, 01:19 AM IST
ಬಂಟವಾಳ‌ಬಂಟರ ಸಂಘದ ವಿಂಶತಿ ಸಂಭ್ರಮಕ್ಕೆ ಅದ್ದೂರಿ ಚಾಲನೆಬಂಟ ಸಮುದಾಯದ ಕೂಡುಕುಟುಂಬ ವ್ಯವಸ್ಥೆ ಮರೆಯಾಗುತ್ತಿದೆ : ಅಜಿತ್ ಕುನಾರ್ ರೈ ಮಾಲಾಡಿ ಕಳವಳ | Kannada Prabha

ಸಾರಾಂಶ

ಬ್ರಹ್ಮರಕೂಟ್ಲು ಬಂಟರ ಭವನದಲ್ಲಿ ಬಂಟವಾಳ ತಾಲೂಕು ಬಂಟರ ಸಂಘದ ವಿಂಶತಿ ಸಂಭ್ರಮ ಕಾರ್ಯಕ್ರಮ ನಡೆಯಿತು. ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಉದ್ಘಾಟಿಸಿದರು.

ಬಂಟ್ವಾಳ: ಮರೆಯಾಗುತ್ತಿರುವ ಕೂಡುಕುಟುಂಬ ವ್ಯವಸ್ಥೆ ನಾನಾ ಸಮಸ್ಯೆಗಳಿಗೆ ಕಾರಣವಾಗುತ್ತಿದ್ದು, ಎಲ್ಲರೂ ಇದ್ದು, ಎಲ್ಲವೂ ಇದ್ದು ನೋವು ಅನುಭವಿಸುವ ಹಿರಿಯ ಜೀವಗಳಿಗೆ ಸಾಂತ್ವಾನದ ಅಗತ್ಯವಿದೆ, ಈ ನಿಟ್ಟಿನಲ್ಲಿ ಬಂಟಸಮಾಜ ಹೆಚ್ಚು ಚಿಂತನೆ ನಡೆಸಬೇಕಿದೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಹೇಳಿದರು.

ಬ್ರಹ್ಮರಕೂಟ್ಲು ಬಂಟರ ಭವನದಲ್ಲಿ ಶನಿವಾರ ಸಂಜೆ ಬಂಟವಾಳ ತಾಲೂಕು ಬಂಟರ ಸಂಘದ ವಿಂಶತಿ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಂಟ ಸಮುದಾಯ ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಹೆಚ್ಚು ಬಲಿಷ್ಠ ಸಮುದಾಯವಾಗಿದೆ, ಆದರೆ ಉದ್ಯೋಗದ ಹೆಸರಿನಲ್ಲಿ ವಿದೇಶದ ವಾಸ ಅನಿವಾರ್ಯವಾಗಿರುವ ಈ ಕಾಲದಲ್ಲಿ ಹಿರಿಯ ಜೀವಗಳು ಮಕ್ಕಳಿಂದ, ಮೊಮ್ಮಕ್ಕಳಿಂದ ದೂರವಿರಬೇಕಾಗಿದೆ, ಇಳಿವಯಸ್ಸಿನಲ್ಲಿ ಹಿರಿಯರು ಹೆಚ್ಚು ಸಂಭ್ರಮಿಸುವ ಕ್ಷಣಗಳನ್ನು ನಾವೆಲ್ಲರೂ ಕಟ್ಟಿಕೊಡಬೇಕಾಗಿದೆ, ಶಿಕ್ಷಣ, ಸುಖ, ಸಂಪತ್ತು ಇದು ಶಾಪವಾಗದಂತೆ ನಾವು ಎಚ್ಚರ ವಹಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು. ಬಂಟ್ವಾಳದ ಬಂಟರ ಸಂಘದ ಸಾಧನೆಗಳನ್ನು ಪ್ರಶಂಸಿದ ಅವರು, ಮಾದರಿ ವ್ಯಕ್ತಿತ್ವಗಳನ್ನು ಸನ್ಮಾನಿಸುವ ಮೂಲಕ ಯುವ ಸಮುದಾಯಕ್ಕೆ ಉತ್ತಮ ಸಂದೇಶ ನೀಡಲಾಗಿದೆ ಎಂದರು.

ಸಂಘದ ಸ್ಥಾಪಕಾಧ್ಯಕ್ಷ ಕಿರಣ್ ಹೆಗ್ಡೆ ಅನಂತಾಡಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿಗಳಾದ ಕೆ.ಪಿ.ಶೆಟ್ಟಿ ಮೊಡಂಕಾಪು ಗುತ್ತು, ರಘು ಎಲ್.ಶೆಟ್ಟಿ, ಸುಧಾಕರ ಶೆಟ್ಟಿ ಮುಗರೋಡಿ, ರೋಹಿತ್ ಶೆಟ್ಟಿ ನಗ್ರಿಗುತ್ತು, ಅಜಿತ್ ಚೌಟ ದೇವಸ್ಯ, ಅರವಿಂದ ಶೆಟ್ಟಿ, ಸತೀಶ್ ಆಳ್ವ ಮುಡಾರೆ, ಧೀರಜ್ ನಾಯ್ಕ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಡಾ.ಶಿವಪ್ರಸಾದ್ ಶೆಟ್ಟಿ, ಡಾ.ಸತ್ಯಶಂಕರ್ ಶೆಟ್ಟಿ, ವಿಂಶತಿ ಸಂಭ್ರಮ ಸಮಿತಿಯ ಕಾರ್ಯದರ್ಶಿ ಜಗನ್ನಾಥ ಚೌಟ ಬದಿಗುಡ್ಡೆ, ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಕುಳ, ಜೊತೆ ಕಾರ್ಯದರ್ಶಿ ರಂಜನ್ ಕುಮಾರ್ ಶೆಟ್ಟಿ ಅರಳ, ಜೊತೆ ಕೋಶಾಧಿಕಾರಿ ಪ್ರತಿಭಾ ಎ.ರೈ, ಸದಸ್ಯ ಗಣೇಶ್ ಶೆಟ್ಟಿ ಗೋಳ್ತಮಜಲು ಉಪಸ್ಥಿತರಿದ್ದರು. ವಿವಿಧ ವಲಯಗಳ ಬಂಟರ ಸಂಘದ ಅಧ್ಯಕ್ಷರುಗಳು ಹಾಗೂ ಯುವ ಬಂಟರ ಸಂಘ ಹಾಗೂ ಮಹಿಳಾ ಸಂಘಟನೆಯ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ವಿಂಶತಿ ಸಂಭ್ರಮದ ಅಧ್ಯಕ್ಷ, ಬಂಟರ ಸಂಘ ಬಂಟವಾಳ ತಾಲೂಕು ಅಧ್ಯಕ್ಷ ಚಂದ್ರಹಾಸ ಡಿ. ಶೆಟ್ಟಿ ಸ್ವಾಗತಿಸಿದರು.

ಕೊಡಾಜೆ ಬಾಲಕೃಷ್ಣ ಆಳ್ವ ಕಾರ್ಯಕ್ರಮ ನಿರ್ವಹಿಸಿದರು.ಸಾಧಕರಿಗೆ ವಿಂಶತಿ ಸನ್ಮಾನವಿವಿಧ ಕ್ಷೇತ್ರಗಳ ಸಾಧಕರಾದ ಬಿ.ರಮಾನಾಥ ರೈ, ಡಾ. ಸತೀಶ್ ಭಂಡಾರಿ ಬಾವಬೀಡು, ರವಿಶಂಕರ ಶೆಟ್ಟಿ ಬಡಾಜೆಗುತ್ತು, ಕ.ಜಗಜೀವನ್ ಭಂಡಾರಿ ಅಗರಿ, ವಿಠಲ ರೈ ಬಾಲಾಜಿಬೈಲು, ಶೀನ ಶೆಟ್ಟಿ ವೀರಕಂಭ, ರವಿ ಶೆಟ್ಟಿ ದೋಣಿಂಜೆಗುತ್ತು, ಕಾಂತಪ್ಪ ಶೆಟ್ಟಿ ಅಗರಿ, ಜಯರಾಮ ರೈ ಮಲಾರು, ಸುರೇಶ್ ರೈ ಮಕರಜ್ಯೋತಿ, ರವೀಂದ್ರ ಕಂಬಳಿ ಸುಜೀರುಬೀಡು, ಸಚ್ಚಿದಾನಂದ ಶೆಟ್ಟಿ ಬೊಂಡಾಲ, ಸಿಎ ಯತೀಶ್ ಭಂಡಾರಿ ಬಿ.ಸಿ.ರೋಡ್, ಪ್ರದೀಪ್ ಆಳ್ವ ಅಜೆಕಲಗುತ್ತು, ಪುರಂದರ ಶೆಟ್ಟಿ ಗೋಳ್ತಮಜಲು, ಆನಂದ ಶೆಟ್ಟಿ ಕಾಂಪ್ರಬೈಲು, ಚೇತನ್ ರೈ ಮಾಣಿ ಅವರಿಗೆ ವಿಂಶತಿ ಸನ್ಮಾನ ನಡೆಯಿತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ