ಸಂಡೂರು: ಬಸವಣ್ಣ ವಿಶ್ವಗುರು, ಸಾಂಸ್ಕೃತಿಕ ನಾಯಕ. ಬಸವಾದಿ ಶರಣರ ನಡೆ, ನುಡಿ ಒಂದಾಗಿತ್ತು. ಅವರ ಬದುಕು ಆದರ್ಶಮಯವಾಗಿತ್ತು ಎಂದು ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಬಿ. ಸಿದ್ದಲಿಂಗಪ್ಪ ಅಭಿಪ್ರಾಯಪಟ್ಟರು.
ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ತಾಲ್ಲೂಕು ಕದಳಿ ವೇದಿಕೆ ನೂತನ ಪದಾಧಿಕಾರಿಗಳ ಸೇವಾ ದೀಕ್ಷೆ, ಕಾಯಕ ದಿನಾಚರಣೆ ಹಾಗೂ ಬಸವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪರಶುರಾಂಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ತಿಪ್ಪೇರುದ್ರ ವಚನಗಳಲ್ಲಿ ವೈಚಾರಿಕತೆ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಬಿ.ನಾಗನಗೌಡ ಅಧ್ಯಕ್ಷತೆ ವಹಿಸಿದ್ದರು. ಹಗರಿ ಬಸವರಾಜಪ್ಪನವರು ಅಕ್ಕಮಹಾದೇವಿ ಕುರಿತಾದ ಸ್ವರಚಿತ ಕವನ ವಾಚಿಸಿದರು. ಕಾರ್ಯಕ್ರಮದಲ್ಲಿ ಪತ್ರಕರ್ತ ಅರಳಿ ಕುಮಾರಸ್ವಾಮಿ ಹಾಗೂ ಸಾವಯವ ಕೃಷಿಯಲ್ಲಿ ಸಾಧನೆ ಮಾಡಿದ ರೈತ ದುರುಗಪ್ಪ ಅವರನ್ನು ಕದಳಿ ವೇದಿಕೆಯಿಂದ ಸನ್ಮಾನಿಸಲಾಯಿತು.ಕದಳಿ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಗೌಡರ ನೀಲಾಂಬಿಕ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯ ತಾಲೂಕು ಘಟಕದ ನೂತನ ಪದಾಧಿಕಾರಿಗಳಿಗೆ ಸೇವಾದೀಕ್ಷೆ ಬೋಧಿಸಿದರು. ಕದಳಿ ವೇದಿಕೆಯ ನೂತನ ಅಧ್ಯಕ್ಷರಾಗಿ ಸೇವಾ ದೀಕ್ಷೆ ಪಡೆದ ಕುಸುಮಾ ಹಿರೇಮಠ್ ಮಾತನಾಡಿದರು. ಕಾರ್ಯಕ್ರಮದ ಸಾನ್ನಿಧ್ಯವನ್ನು ವಹಿಸಿದ್ದ ಸಂಡೂರಿನ ಶ್ರೀಪ್ರಭುದೇವರ ಸಂಸ್ಥಾನ ವಿರಕ್ತಮಠದ ಪ್ರಭುಸ್ವಾಮೀಜಿ ಆಶೀರ್ವಚನ ನೀಡಿ, ಶುಭಹಾರೈಸಿದರು.
ನೂತನ ಪದಾಧಿಕಾರಿಗಳು: ಎಸ್.ಡಿ. ಪ್ರೇಮಲೀಲಾ (ಗೌರವಾಧ್ಯಕ್ಷೆ), ಕುಸುಮಾ ಹಿರೇಮಠ (ಅಧ್ಯಕ್ಷೆ) ಶಿವಲೀಲಾ ವೀರೇಶ್ (ಉಪಾಧ್ಯಕ್ಷೆ), ನಳಿನಾ ಪ್ರದೀಪ್ ಕುಮಾರ್ (ಪ್ರಧಾನ ಕಾರ್ಯದರ್ಶಿ), ವಿ.ಎಂ. ವಿಜಯಲಕ್ಷ್ಮಿ (ಕಾರ್ಯದರ್ಶಿ), ಎಂ.ಪುಷ್ಪ ಪಂಪನಗೌಡ (ಖಜಾಂಚಿ), ಎಚ್.ಸಾವಿತ್ರಿ, ವೀಣಾ ಶಿವಸಾಲಿ, ಯು.ಶ್ವೇತಾ, ಶೋಭಾ ಲಕ್ಷ್ಮೀಪುರ, ಜಿ.ಟಿ. ಸುಮಿತ್ರಾ, ಸವಿತಾ ಚಿತ್ರಿಕಿ, ಸುಧಾ ಹಿರೇಮಠ, ಪ್ರತಿಭಾ ಸಾಲಿಮಠ, ಶಾಂತಮ್ಮ ಅಂಕಮನಾಳ್, ಆಶಾ ಬಂಡೆಮೇಗಳ, ಗಂಗಮ್ಮ ಬಂಡೆಮೇಗಳ, ಕಾವ್ಯ, ಶೋಭ ಬಸವನಗೌಡ, ಜಯಮ್ಮ, ಶಿಲ್ಪಾ (ಸದಸ್ಯರು).ಎಸ್.ಸಾವಿತ್ರಿ ಸ್ವಾಗತಿಸಿದರು. ಜಿ.ನಳಿನ ಪ್ರದೀಪ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಶಿವಲೀಲಾ ವೀರೇಶ್ ವಂದಿಸಿದರು. ನರಿ ಬಸವರಾಜ, ಕೆ.ಉಮೇಶ್ ವಚನ ಗಾಯನ ಕಾರ್ಯಕ್ರಮ ನೀಡಿದರು. ಪಟ್ಟಣದ ಅಕ್ಕನ ಬಳಗದ ಅಧ್ಯಕ್ಷೆ ಜ್ಯೋತಿ ನಾಗರಾಜ ಗುಡೆಕೋಟೆ, ಯಶವಂತನಗರದ ಅಕ್ಕನಬಳಗದ ಅಧ್ಯಕ್ಷೆ ಚಿತ್ರಿಕಿ ಸುಮಂಗಲಮ್ಮ, ಶರಣ ಸಾಹಿತ್ಯ ಪರಿಷತ್ ಹೊಸಪೇಟೆ ತಾಲೂಕು ಘಟಕದ ಅಧ್ಯಕ್ಷ ಎಚ್.ಸೌಭಾಗ್ಯಲಕ್ಷ್ಮಿ, ಬಳ್ಳಾರಿ, ಸಿರುಗುಪ್ಪ ಹಾಗೂ ಕುರುಗೋಡು ಕದಳಿ ವೇದಿಕೆಯ ಅಧ್ಯಕ್ಷೆ ಈರಮ್ಮ, ತ್ರಿವೇಣಿ, ಲಲಿತಮ್ಮ, ಮುಖಂಡರಾದ ಗಡಂಬ್ಲಿ ಚನ್ನಬಸಪ್ಪ, ಜಿ.ವೀರೇಶ್, ಜಿ.ಕೆ. ನಾಗರಾಜ, ಎಚ್.ಎಂ.ಶಿವಮೂರ್ತಿ, ಪರಿಮಳ, ಜೆ.ಎಂ. ಶರಣಬಸವ ಶಾಸ್ತ್ರಿ, ಪ್ರದೀಪ್‌ಕುಮಾರ್, ಎಂಪಿಎಂ ಕಾರ್ತಿಕ್ ಉಪಸ್ಥಿತರಿದ್ದರು. ಎಂ.ಪಿ.ಎಂ. ಸುರೇಂದ್ರನಾಥ ದಾಸೋಹ ಸೇವೆ ಸಲ್ಲಿಸಿದರು.