ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರಿಕೆ ವಹಿಸಿ: ತಹಸೀಲ್ದಾರ್ ಪರಶುರಾಮ್ ಸತ್ತೀಗೆರಿ

KannadaprabhaNewsNetwork | Published : May 1, 2024 1:16 AM

ಸಾರಾಂಶ

ಜನ-ಜಾನುವಾರುಗಳಿಗೆ ನೀರಿನ ಸಮಸ್ಯೆ ಉಂಟಾದ ವೇಳೆಯಲ್ಲಿ ಗ್ರಾಮದ 500 ಮೀ ವರೆಗೆ ಇರುವ ಖಾಸಗಿಯವರ ಬೋರ್ ಗಳ ವಶಕ್ಕೆ ಪಡೆದುಕೊಳ್ಳಬೇಕು. ಅದರಿಂದ ನೀರು ಒದಗಿಸುವ ಕೆಲಸ ಆಗಬೇಕು. ಒಂದು ವೇಳೆ ಬೋರ್‌ಗಳಲ್ಲಿ ನೀರು ಬರದೆ ಸಮಸ್ಯೆ ಉಂಟಾದರೆ ತುರ್ತಾಗಿ ನೀರಿನ ಸಮಸ್ಯೆ ಎದುರಾದರೆ ಟ್ಯಾಂಕ್ ಮೂಲಕವಾದರೂ ನೀರು ಒದಗಿಸುವ ಕ್ರಮ ಕೈಗೊಳ್ಳಬೇಕು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಬೇಸಿಗೆ ಬಿಸಿಲು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಗ್ರಾಮಗಳಿಗೆ ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರಿಕೆ ವಹಿಸಿ ನಿರ್ವಹಣೆ ಮಾಡಬೇಕು ಎಂದು ತಹಸೀಲ್ದಾರ್ ಪರುಶುರಾಮ್ ಸತ್ತಿಗೇರಿ ತಿಳಿಸಿದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಪರಿಹಾರಕ್ಕಾಗಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಕಸಬಾ, ಕೆ.ಶೆಟ್ಟಹಳ್ಳಿ, ಬೆಳಗೊಳ, ಅರಕೆರೆ ಹೋಬಳಿ ಸೇರಿದಂತೆ ಇತರ ಗ್ರಾಮಗಳ ಕೆರೆ, ಕಟ್ಟೆಗಳು ಬತ್ತಿಹೋಗುತ್ತಿದ್ದು, ಖಾಸಗಿ ಬೋರ್‌ಗಳ ಮೂಲಕ ಆಯ್ಕೆ ಮಾಡಿಕೊಂಡು ಆಯಾ ಗ್ರಾಮಗಳ ಜನ-ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಜನ-ಜಾನುವಾರುಗಳಿಗೆ ನೀರಿನ ಸಮಸ್ಯೆ ಉಂಟಾದ ವೇಳೆಯಲ್ಲಿ ಗ್ರಾಮದ 500 ಮೀ ವರೆಗೆ ಇರುವ ಖಾಸಗಿಯವರ ಬೋರ್ ಗಳ ವಶಕ್ಕೆ ಪಡೆದುಕೊಳ್ಳಬೇಕು. ಅದರಿಂದ ನೀರು ಒದಗಿಸುವ ಕೆಲಸ ಆಗಬೇಕು. ಒಂದು ವೇಳೆ ಬೋರ್‌ಗಳಲ್ಲಿ ನೀರು ಬರದೆ ಸಮಸ್ಯೆ ಉಂಟಾದರೆ ತುರ್ತಾಗಿ ನೀರಿನ ಸಮಸ್ಯೆ ಎದುರಾದರೆ ಟ್ಯಾಂಕ್ ಮೂಲಕವಾದರೂ ನೀರು ಒದಗಿಸುವ ಕ್ರಮ ಕೈಗೊಳ್ಳಬೇಕು ಎಂದು ಖಡಕ್ ಸೂಚನೆಗಳ ನೀಡಿದರು.

ಬೇಸಿಗೆಯಲ್ಲಿ ಹೆಚ್ಚಿನ ಸಮಸ್ಯೆಗಳು ಉಂಟಾದರೆ ತಕ್ಷಣ ತಾಪಂ ಇಒ ಹಾಗೂ ನಮ್ಮ ಗಮನಕ್ಕೆ ತರಬೇಕು. ಮುಂಜಾಗ್ರತ ಕ್ರಮಕ್ಕೆ ಜಿಲ್ಲಾಧಿಕಾರಿಗಳೊಂಂದಿಗೆ ಚರ್ಚೆ ನಡೆಸಲಾಗುತ್ತದೆ ಎಂದು ಸಿಬ್ಬಂದಿಗೆ ತಿಳಿಸಿದರು.

ಈ ವೇಳೆ ತಾಪಂ ಇಒ ವೇಣು, ಪುರಸಭೆ ಮುಖ್ಯಾಧಿಕಾರಿ ಎಂ.ರಾಜಣ್ಣ ಸೇರಿದಂತೆ ಇತರ ಅಧಿಕಾರಿ ವರ್ಗ ಉಪಸ್ಥಿತರಿದ್ದರು.

ವಾರ್ತಾ ಇಲಾಖೆ ವಾಹನ ಚಾಲಕ ಮಂಜುನಾಥ್‌ಗೆ ಆತ್ಮೀಯ ಬೀಳ್ಕೊಡುಗೆ

ಮಂಡ್ಯ:ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ 30 ವರ್ಷಗಳ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಮಂಜುನಾಥ ಅವರು ಮಂಗಳವಾರ ವಯೋನಿವೃತ್ತರಾಗಿದ್ದು, ಅವರನ್ನು ಇಲಾಖೆಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಎಸ್‌.ಎಚ್‌.ನಿರ್ಮಲಾ ಅವರು ಮಾತನಾಡಿ, ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸಿ ಮಂಜಣ್ಣ ಎಂದು ಹೆಸರುವಾಸಿಯಾಗಿದ್ದರು. ಇವರ ನಿವೃತ್ತಿ ಜೀವನ ಸುಖಕರ, ಆರೋಗ್ಯಕರವಾಗಿರಲಿ ಎಂದು ಶುಭಹಾರೈಸಿದರು. ಇದೇ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಇಲಾಖೆಯ ಸಿಬ್ಬಂದಿ ಪುಷ್ಫಲತಾ, ಚಲುವರಾಜು, ಸಿದ್ದೇಗೌಡ, ನಯನ ಇತರರಿದ್ದರು.

Share this article