ಸರ್ಕಾರಿ ಯೋಜನೆಗಳ ಲಾಭ ಪಡೆಯಿರಿ: ಡಾ. ವೈಶಾಲಿ

KannadaprabhaNewsNetwork |  
Published : Jun 09, 2024, 01:37 AM IST
ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. | Kannada Prabha

ಸಾರಾಂಶ

ಜನರು ಉಚಿತವಾಗಿ ಸಿಗುವ ಚಿಕಿತ್ಸೆಗಾಗಿ ಮಾಹಿತಿ ಕೊರತೆಯಿಂದ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಸಾಲದ ಹೊರೆ ಸಿಲುಕುತ್ತಿ ದ್ದಾರೆ. ಇದನ್ನು ಬದಲಾಯಿಸಲು ಇಂಥ ಶಿಬಿರಗಳ ಮೂಲಕ ಪ್ರಯತ್ನಿಸಲಾಗಿದೆ.

ಜೋಯಿಡಾ: ಸರ್ಕಾರಗಳು ಜನರ ಆರೋಗ್ಯಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಇದರಿಂದ ಆರೋಗ್ಯ ಸಮಸ್ಯೆಗಳಿಗೆ ಉಚಿತ ಚಿಕಿತ್ಸೆ, ಔಷಧಿಗಳನ್ನು ಪಡೆಯಲು ಸಾಧ್ಯ ಎಂದು ಬೆಳಗಾವಿಯ ಡಾ. ವೈಶಾಲಿ ಕಿತ್ತೂರ ತಿಳಿಸಿದರು.

ಭಾಗ್ಯಲಕ್ಷ್ಮಿ ಮಹಿಳಾ ಸ್ವಸಹಾಯ ಸಂಘ, ಪೋಟೋಲಿ, ಸಂಜೀವಿನಿ ಸೇವಾ ಟ್ರಸ್ಟ್ ಜೋಯಿಡಾ, ಕ್ರೂಗರ್ ಫೌಂಡೇಶನ್ ಕಾರವಾರ ಹಾಗೂ ಏಕಲ ಅಭಿಯಾನದ ಆಶ್ರಯದಲ್ಲಿ ಪೋಟೋಲಿಯಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಜನರು ಉಚಿತವಾಗಿ ಸಿಗುವ ಚಿಕಿತ್ಸೆಗಾಗಿ ಮಾಹಿತಿ ಕೊರತೆಯಿಂದ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಸಾಲದ ಹೊರೆ ಸಿಲುಕುತ್ತಿ ದ್ದಾರೆ. ಇದನ್ನು ಬದಲಾಯಿಸಲು ಇಂಥ ಶಿಬಿರಗಳ ಮೂಲಕ ಪ್ರಯತ್ನಿಸಲಾಗಿದೆ ಎಂದುರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಜೀವಿನಿ ಸೇವಾ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ರವಿ ರೇಡ್ಕರ ವಹಿಸಿ, ಆರೋಗ್ಯ ನಮ್ಮ ಒಳ್ಳೆಯ ಸ್ನೇಹಿತ, ಸಂಬಂಧಿ ಎಂದು ಭಾವಿಸಿ, ಪ್ರತಿಯೊಬ್ಬರೂ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಪೋಟೋಲಿಯ ಭಾಗ್ಯಲಕ್ಷ್ಮಿ ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷೆ ವಾಣಿ ಪೈ ಪ್ರಾಸ್ತಾವಿಕವಾಗಿ ಹಾಗೂ ಸಂಜೀವಿನಿ ಸೇವಾ ಟ್ರಸ್ಟ್ ಅಧ್ಯಕ್ಷ ಸುನೀಲ ದೇಸಾಯಿ ಮಾತನಾಡಿದರು. ಅಣಶಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ವಹಿಸಿದ್ದರು.

ಸಂಜೀವಿನಿ ಸೇವಾ ಟ್ರಸ್ಟ್ ಅಧ್ಯಕ್ಷ ಸುನೀಲ ದೇಸಾಯಿ ಮಾತನಾಡಿದರು. ಬೆಳಗಾವಿಯ ಸ್ತ್ರೀರೋಗ ತಜ್ಞೆ ಡಾ. ಮೀನಾ ಕಾಮತ, ವಸಂತ ಬಾಳಿಗಾ, ಬೆಳಗಾವಿಯ ಕಣ್ಣಿನ ತಜ್ಞ ಶ್ರೇಯಸ್, ಸಂಜೀವಿನಿ ಸೇವಾ ಟ್ರಸ್ಟ್ ಅಧ್ಯಕ್ಷ ಸುನೀಲ ದೇಸಾಯಿ, ಗಣೇಶ ವಿರಕ್ತಮಠ, ಜಯಂತ ಗಾವಡಾ, ಈಶ್ವರಿ ದೇಸಾಯಿ, ಶ್ರೀಪಾದ ಆಚಾರಿ, ಊರ ಪ್ರಮುಖರಾದ ರಾಘವೇಂದ್ರ ಪೈ, ಸುದರ್ಶನ ಹೆಗಡೆ, ಸುಭಾಷ್ ಮಾಂಜ್ರೇಕರ ಇತರರು ಭಾಗವಹಿಸಿದ್ದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ