ನಗರದ ಸುರಂಗ ರಸ್ತೆ ಪರಿಸರಕ್ಕೆ ಮಾರಕ, ಲಾಭವಿಲ್ಲ : ನಮ್ಮ ಬೆಂಗಳೂರು ಫೌಂಡೇಷನ್‌

ಸಾರಾಂಶ

  ಸಾರಿಗೆ ದರ ದುಬಾರಿ ಮಾಡಿ, ಕೋಟ್ಯಂತರ ರು. ವೆಚ್ಚದಲ್ಲಿ ಪರಿಸರಕ್ಕೆ ಮಾರಕವಾದ ಟನಲ್ ಯೋಜನೆಗಳನ್ನು ಅನುಷ್ಠಾನಕ್ಕೆ ಮುಂದಾಗಿ ರುವುಮ ಮಧ್ಯಮ ವರ್ಗ ಹಾಗೂ ಬಡವರ ಬದುಕನ್ನು ಮತ್ತಷ್ಟು ದುಬಾರಿಗೊಳಿಸಲಿದೆ ಎಂದು ನಮ್ಮ ಬೆಂಗಳೂರು ಫೌಂಡೇಷನ್‌ ಹಾಗೂ ನಗರ ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು :  ನಗರದ ಸಾರ್ವಜನಿಕ ಸಾರಿಗೆ ದರ ದುಬಾರಿ ಮಾಡಿ, ಕೋಟ್ಯಂತರ ರು. ವೆಚ್ಚದಲ್ಲಿ ಪರಿಸರಕ್ಕೆ ಮಾರಕವಾದ ಟನಲ್ ಯೋಜನೆಗಳನ್ನು ಅನುಷ್ಠಾನಕ್ಕೆ ಮುಂದಾಗಿ ರುವುಮ ಮಧ್ಯಮ ವರ್ಗ ಹಾಗೂ ಬಡವರ ಬದುಕನ್ನು ಮತ್ತಷ್ಟು ದುಬಾರಿಗೊಳಿಸಲಿದೆ ಎಂದು ನಮ್ಮ ಬೆಂಗಳೂರು ಫೌಂಡೇಷನ್‌ ಹಾಗೂ ನಗರ ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ಇತ್ತೀಚೆಗೆ ಬಿಎಂಟಿಸಿ ಬಸ್ ಪ್ರಯಾಣ ದರವನ್ನು ಏರಿಕೆ ಮಾಡಿ ಸರ್ಕಾರ ಆದೇಶಿಸಿದೆ. ಇದರ ಬೆನ್ನಲೇ ಮೆಟ್ರೋ ಪ್ರಯಾಣ ದರವನ್ನು ಶೇ.40 ರಿಂದ 45 ರಷ್ಟು ಹೆಚ್ಚಿಸುವುದು ಹಾಗೂ ಕನಿಷ್ಠ ದರವನ್ನು 10 ರು.ನಿಂದ 15 ರು.ಗೆ ಏರಿಕೆ ಮಾಡುವ ಪ್ರಸ್ತಾವನೆ ಬಗ್ಗೆ ಈಗಾಗಲೇ ಚರ್ಚೆ ನಡೆಸಲಾಗುತ್ತಿದೆ. ಬಸ್ ಮತ್ತು ಮೆಟ್ರೋದರ ಏರಿಕೆಯಿಂದ ಮಾಸಿಕವಾಗಿ 300 ರು. ನಿಂದ 600 ರು. ವರೆಗೆ ಪ್ರಯಾಣದ ವೆಚ್ಚದ ಹೆಚ್ಚಾಗಲಿದೆ. 

ಇದು ದಿನಗೂಲಿ ಕಾರ್ಮಿಕರಿಗೆ, ಬಡವರಿಗೆ ಹಾಗೂ ಮಧ್ಯಮ ವರ್ಗಗಳಿಗೆ ಗಮನಾರ್ಹ ಹೊರೆಯಾಗಲಿದೆ. ಜತೆಗೆ, ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಮಧ್ಯಮ ವರ್ಗ ಹಾಗೂ ಬಡವರು ಆರೋಗ್ಯ ಮತ್ತು ಶಿಕ್ಷಣ ಪಡೆಯಲು ಹೆಣಗಾಡುತ್ತಿ ದ್ದಾರೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇಂತಹ ಪರಿಸ್ಥಿತಿ ನಡುವೆ ಸರ್ಕಾರ ಬರೋಬರಿ 17 ಸಾವಿರ ಕೋಟಿ ರು. ವೆಚ್ಚದಲ್ಲಿ ಅವೈಜ್ಞಾನಿಕ ಹಾಗೂ ಪರಿಸರಕ್ಕೆ ಮಾರಕವಾಗಬಲ್ಲ ಟನಲ್ ರಸ್ತೆ ನಿರ್ಮಾಣಕ್ಕೆ ಮುಂದಾಗಿದೆ. ಸುರಂಗ ರಸ್ತೆಯಿಂದ ಖಾಸಗಿ ವಾಹ ನಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ. 

ಇದರಿಂದ ಪರಿ ಸರದ ಮೇಲೆ ಸಾಕಷ್ಟು ವ್ಯತಿರಿಕ್ತ ಪರಿಣಾಮ ಉಂಟು ಮಾಡಲಿದೆ. ಸುರಂಗ ರಸ್ತೆ ನಿರ್ಮಾಣದಿಂದ ಬೆಂಗಳೂರಿನ ಶೇ.2 ರಿಂದ 3 ರಷ್ಟು ಮಂದಿ ಮಾತ್ರ ಅನುಕೂಲವಾಗಲಿದೆ. ಉದ್ಯಾನ ನಗರಿ ಎಂದು ಕರೆಸಿಕೊಳ್ಳುತ್ತಿದ್ದ ಬೆಂಗಳೂರು ನಗರವು ಇತ್ತೀಚಿನ ದಿನಗಳಲ್ಲಿ ಪ್ರವಾಹ, ಬಿಸಿಲಿನ ತಾವ ಸೇರಿದಂತೆ ಹಲವು ಹವಾಮಾನ ವೈಪರಿತ್ಯಗಳನ್ನು ಎದು ರಿಸುತ್ತಿದೆ. 

ಈ ರೀತಿಯ ಯೋಜನೆಗಳನ್ನು ಜಾರಿಗೊ ಇಸಿದರೆ ಮತ್ತಷ್ಟುದುಷ್ಪರಿಣಾಮವನ್ನು ಬೆಂಗಳೂರಿಗರು ಎದುರಿಸಬೇಕಾಗಲಿದೆ. ಜತೆಗೆ, ಐಟಿ-ಬಿಟಿ ಸಂಸ್ಥೆಗಳು, ನವೋದ್ಯಮಗಳು ಮತ್ತು ಬಹುರಾಷ್ಟ್ರೀಯ ಕಂಪನಿಗಳು ಬೆಂಗಳೂರಿನಿಂದ ವಿಮುಖವಾಗಬಹುದು ಎಂಬ ಕಳವಳ ವ್ಯಕ್ತಪಡಿಸಿದೆ. ಹಾಗಾಗಿ, ಸರ್ಕಾರವುಪರಿಸರಕ್ಕೆ ಮಾರಕ ಉಂಟು ಮಾಡುವ ಯೋಜನೆಗಳನ್ನು ಕೈಬಿಟ್ಟು ನಗರಕ್ಕೆ ಸುಸಿದ ಯೋಜನೆಗಳನ್ನು ಮುಖ್ಯವಾಗಿ ಇನ್ನಷ್ಟು ಬಸ್, ಮೆಟ್ರೋ, ಸರ್ಬನ್ ರೈಲು ಸಂಚಾರಿ ಮಾರ್ಗವನ್ನು ವಿಸ್ತರಣೆ ಮಾಡಬೇಕು.

 ಪಾದಚಾರಿ ಮತ್ತು ಸೈಕ್ಲಿಂಗ್ ಮೂಲ ಸೌಕರ್ಯಗಳನ್ನು ಸುಧಾರಿಸುವುದು, .ಈ ಕಾರ್ಯ ಗಳನ್ನು ಮಾಡುವುದಕ್ಕೆ ನಮ್ಮ ಬೆಂಗಳೂರು ಫೌಂಡೇಷನ್ ಹೇಳಿದೆ. ಆಡಳಿತಾರೂಢ ಸರ್ಕಾರವು ಅಧಿಕಾರ ಪಡೆಯಲು ಘೋಷಿಸಿದ ಗ್ಯಾರಂಟಿ ಯೋಜನೆಗಳಿಗೆ ಹಣ ಕೂಡಿಸು ವುದಕ್ಕೆ ದರ ಏರಿಕೆ ಕಾರ್ಯದಲ್ಲಿ ತೊಡಗಿದೆ. ಬಡವರಿಗೆ ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಿಂದ ಕಿತ್ತುಕೊಳ್ಳುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಫೌಂಡೇಶನ್ ಅಸಮಾಧಾನ ವ್ಯಕ್ತಪಡಿಸಿದೆ.

ರಾಜ್ಯ ಸರ್ಕಾರ ಬಸ್ ಪ್ರಯಾಣ 20 ರು. ಕೂಲಿ ಕಾರ್ಮಿಕರಿಗೆ ಮಾತ್ರವಲ್ಲದೇ  ಪರಿಸರಕ್ಕೂ ಮಾರಕ,  ಪ್ರಯಾಣಿಕರಿಗೆ ಅನುಕೂಲ ಮಾಡಬೇಕಾದ ಸರ್ಕಾರ ಅವರಿಗೆ ದಂಡ ಮಾದರಿಯಲ್ಲಿ ದರ ಹೆಚ್ಚಿಸಿ, ಖಾಸಗಿ ವಾಹನ ಮಾಲೀಕರಿಗೆ ಹೆಚ್ಚಿನ ಅನುಕೂಲ ಮಾಡುತ್ತಿದೆ. ಈ ಮೂಲಕ ಜನರನ್ನು ಸಾರ್ವಜನಿಕ ಸಾರಿಗೆಯಿಂದ ದೂರ ಹೋಗುವಂತೆ ಮಾಡುತ್ತಿದೆ. 

ವಿನಯ್ ಶ್ರೀನಿವಾಸ್ ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ

 ಹಣದ ಕೊರತೆ ಇದೆ ಎಂದು ಬಸ್ ಪ್ರಯಾಣ ದರ ಹೆಚ್ಚಳ ಮಾಡಲಾಗಿದೆ.   50000 ರು. ವೆಚ್ಚದಲ್ಲಿ ಟನಲ್ ರಸ್ತೆ ನಿರ್ಮಾ ಣಕ್ಕೆ ಮುಂದಾಗಿದೆ. ಇದನ್ನು ಬಿಟ್ಟು ಬಸ್ ಸಂಖ್ಯೆ ಹೆಚ್ಚಳ ಮಾಡಬೇಕು. ಖಾಸಗಿ ವಾಹನಗಳಿಗೆ ಸಂಚಾರಿ ದಟ್ಟಣೆ ತೆರಿಗೆ, ಪಾರ್ಕಿಂಗ್ ಫೀ. ಮಾಲೀಕತ್ವ ತೆರಿಗೆ ವಿಧಿಸಿದರೆ ಬರುವ ಆದಾಯದಲ್ಲಿ ಸ್ತ್ರೀಯರಿಗಷ್ಟೇ ಅಲ್ಲದೇ ಪುರುಷರಿಗೂ ಬಸ್ ಫ್ರೀ ಮಾಡಬಹುದು. 

ಸಂದೀಪ್ ಅನಿರುದ್ಧ ಸಿಟಿಜನ್ ಅಜೆಂಡಾ ಫಾರ್ ಬೆಂಗಳೂರು

ವಿಶ್ವದ ದೊಡ್ಡ ನಗರಗಳಲ್ಲಿ ಸಾರ್ವಜನಿಕ ಸಾರಿಗೆಯನ್ನು ಅಗ್ಗಗೊಳಿಸಿ, ಖಾಸಗಿ ಸಾರಿಗೆ ವ್ಯವಸ್ಥೆಯನ್ನು ದುಬಾರಿಗೊಳಿಸುತ್ತಿರುವ ಈ ಸಂದರ್ಭದಲ್ಲಿ ಬೆಂಗಳೂರು ಮಾತ್ರ ವಿರುದ್ಧ ದಿಕ್ಕಿನ ಕಡೆ ಸಾಗುತ್ತಿದೆ. ಆರ್ಥಿಕ ಹಿತದೃಷ್ಟಿಯಿಂದ ಹಾಗೂ ಪರಿಸರ ಸಂರಕ್ಷಣೆಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಹೆಚ್ಚಿನ ರಿಯಾಯ್ತಿ ನೀಡಬೇಕು. ಬೆಂಗಳೂ ರಿನ 'ಉದ್ಯಾನ ನಗರ' ಎಂಬ ಖ್ಯಾತಿಯನ್ನು ಮರಳಿ ಪಡೆಯುವಂತೆ ಮಾಡಬೇಕು. 

ವಿಸೋದ್ ಜೇಕಬ್ ಪ್ರಧಾನ ವ್ಯವಸ್ಥಾಪಕ, ನಮ್ಮ ಬೆಂಗಳೂರು ಫೌಂಡೇಷನ್

  ನಗರಕ್ಕೆ ಉಪಯೋಗಕ್ಕಿಂತ ಅನಾನುಕೂಲಗಳೇ ಹೆಚ್ಚಾಗಲಿದೆ. ಟನಲ್ ಯೋಜನೆಯೊಂದಕ್ಕೆ 40 ಸಾವಿರ ಕೋಟಿ ರು. ವೆಚ್ಚ ಮಾಡುವ ಬದಲು ಈ ಮೊತ್ತ ವನ್ನು ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅಭಿವೃದ್ಧಿ ಪಡಿಸುವುದಕ್ಕೆ ಹಾಗೂ ರಾಜ್ಯದ ಇತರೆ ನಗರಗಳಿಗೆ ಹೂಡಿಕೆ ಮಾಡುವುದ ರಿಂದ ಬೆಂಗಳೂರಿನ ಮೇಲೆ ಇರುವ ವಾಹನ ಸಂಚಾರ ದಟ್ಟಣೆ ಶಾಶ್ವತವಾಗಿ ಕಡಿಮೆಯಾಗಲಿವೆ. 

ರಾಜಕುಮಾರ್ ದುಗರ್ ಸಿಟಿಜನ್ ಫಾರ್ ಸಿಟಿಜನ್

Share this article