ಉನ್ನತ ಶಿಕ್ಷಣಕಿಂತ ಉತ್ತಮ ಸಂಸ್ಕಾರ ಮುಖ್ಯ: ವಾಗ್ಮಿ ಹಾರಿಕಾ

KannadaprabhaNewsNetwork | Published : Nov 25, 2023 1:15 AM

ಸಾರಾಂಶ

ಕೆಂಭಾವಿ ಸಮೀಪದ ಕೂಡಲಗಿ ಗ್ರಾಮದ ಶಾಂತಾನಂದ ಸರಸ್ವತಿ ಸ್ವಾಮಿಗಳ (ಬಾಬಾ ಮಹಾರಾಜ) ಜಾತ್ರಾ ಮಹೋತ್ಸವದ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಭಾರತ ದೇಶ ಧರ್ಮದ ತಳಹದಿಯ ಮತ್ತು ಉತ್ತಮ ಸಂಸ್ಕಾರದ ದೇಶವಾಗಿದೆ. ಹಿಂದೂ ಸಮಾಜದಲ್ಲಿ ಜನಸಿರುವ ಪ್ರತಿಯೊಬ್ಬರೂ ಉತ್ತಮ ಸಂಸ್ಕಾರ ಹೊಂದುವುದು ಅವಶ್ಯಕವಾಗಿದೆ ಎಂದು ಹೇಳಿದರು

ಕನ್ನಡಪ್ರಭ ವಾರ್ತೆ ಸುರಪುರತಮ್ಮ ಮಕ್ಕಳಿಗೆ ಎಷ್ಟೇ ಶಿಕ್ಷಣ ಕೊಡಿಸಿದರೂ ಮೊದಲು ಉತ್ತಮ ಸಂಸ್ಕಾರ ನೀಡುವುದು ಪಾಲಕರ ಕರ್ತವ್ಯವಾಗಿದೆ ಎಂದು

ಖ್ಯಾತ ವಾಗ್ಮಿ ಹಾರಿಕಾ ಹೇಳಿದರು.

ತಾಲೂಕಿನ ಕೆಂಭಾವಿ ಸಮೀಪದ ಕೂಡಲಗಿ ಗ್ರಾಮದ ಶಾಂತಾನಂದ ಸರಸ್ವತಿ ಸ್ವಾಮಿಗಳ (ಬಾಬಾ ಮಹಾರಾಜ) ಜಾತ್ರಾ ಮಹೋತ್ಸವದ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಭಾರತ ದೇಶ ಧರ್ಮದ ತಳಹದಿಯ ಮತ್ತು ಉತ್ತಮ ಸಂಸ್ಕಾರದ ದೇಶವಾಗಿದೆ. ಹಿಂದೂ ಸಮಾಜದಲ್ಲಿ ಜನಸಿರುವ ಪ್ರತಿಯೊಬ್ಬರೂ ಉತ್ತಮ ಸಂಸ್ಕಾರ ಹೊಂದುವುದು ಅವಶ್ಯಕವಾಗಿದೆ ಎಂದು ಹೇಳಿದರು. ಬಾಲ್ಯದಲ್ಲೇ ಧಾರ್ಮಿಕ, ಆಧ್ಯಾತ್ಮಿಕ ಮನೋಭಾವನೆ ಬೆಳೆಸಬೇಕು. ಮಕ್ಕಳಿಗೆ ರಾಮಾಯಣ, ಮಹಾಭಾರತದಂತಹ ಉತ್ತಮ ಗ್ರಂಥಗಳ ಬಗ್ಗೆ ಓದುವ ಜ್ಞಾನ ಬೆಳೆಸಬೇಕು. ಪ್ರತಿಯೊಬ್ಬ ತಾಯಂದಿರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ, ಧರ್ಮ ಬೋಧನೆಯ ತತ್ವಗಳನ್ನು ಬಿತ್ತುವ ಮೂಲಕ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು. ಕೆಲವೇ ತಿಂಗಳುಗಳಲ್ಲಿ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಶ್ರೀ ರಾಮಮಂದಿರಕ್ಕೆ ಪ್ರತಿಯೊಬ್ಬ ಹಿಂದೂಗಳು ತಮ್ಮ ನುಡಿಪುಷ್ಪಗಳನ್ನು ಸಮರ್ಪಣೆ ಮಾಡಬೇಕು. ಪ್ರತಿ ಮನೆಯಿಂದ ರಾಮತಾರಕ ಮಂತ್ರವನ್ನು ಪಠಿಸಿ ಶ್ರೀ ರಾಮನಿಗೆ ಸಮರ್ಪಣೆ ಮಾಡಬೇಕು ಎಂದು ಹೇಳಿದರು.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸುರಪುರದ ರಾಜಾ ವಂಕಟಪ್ಪ ನಾಯಕರ ಹೋರಾಟ ಅತ್ಯಂತ ಸ್ಮರಣೀಯವಾಗಿದೆ. ಬ್ರಿಟಿಷರ ವಿರುದ್ಧ ಹೋರಾಟದಲ್ಲಿ ಒಬ್ಬಂಟಿಗರಾಗಿ ಹೋರಾಟ ಮಾಡಿ ದೇಶಕ್ಕೆ ಸ್ವತಂತ್ರ ತಂದುಕೊಟ್ಟ ಮಹಾನ ನಾಯಕರಲ್ಲಿ ಸುರಪುರದ ಅರಸರ ಪ್ರಾತ್ರ ಪ್ರಮುಖವಾಗಿದೆ ಎಂದು ಹೇಳುತ್ತಾ ವಿವಿಧ ವಿಷಯಗಳನ್ನು ತಮ್ಮ ವಿಶಿಷ್ಠ ವಾಕ್ಚಾತುರ್ಯದ ಮೂಲಕ ನೆರೆದಿದ್ದ ಅಪಾರ ಸಭಿಕರನ್ನು ಮಂತ್ರಮುಗ್ಧಗೊಳಿಸಿದರು.

ಪೀಠಾಧಿಪತಿ ಉಮಾಕಾಂತ ಸಿದ್ಧರಾಜ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಮಾತೋಶ್ರೀ ಶರಣಮ್ಮ ತಾಯಿ, ಚನ್ನವೀರಸ್ವಾಮಿ, ಗಡಗಿಸೋಮನಾಳದ ಗಾಂಗೇಯಪಿತ, ಬ್ರಾಹ್ಣ ಸಂಘದ ಜಿಲ್ಲಾ ಗೌರವಾಧ್ಯಕ್ಷ ವಾಮನರಾವ ದೇಶಪಾಂಡೆ, ಶ್ರೀಪದಭಟ್ಟ ಜೋಷಿ, ಮೃತ್ಯುಂಜಯ ಮಹಾರಾಜ, ಗಜಾನನ ಮಹಾರಾಜ, ಗಂಗಾಧರ ಮಹಾರಾಜ ಇದ್ದರು. ನಾಗರಾಜ ಸಜ್ಜನ ನಿರೂಪಿಸಿದರು. ಕಳೆದ ಮೂರು ದಿನಗಳಿಂದ ಶ್ರೀ ಶಾಂತಾನಂದ ಸರಸ್ವತಿ ಸ್ವಾಮಿಗಳ (ಬಾಬಾ ಮಹಾರಾಜ) ಜಾತ್ರಾ ಮಹೋತ್ಸವದ ನಿಮಿತ್ಯ ಶ್ರೀ ಉಮಾಕಾಂತ ಸಿದ್ಧರಾಜ ಮಹಾರಾಜರ ನೇತೃತ್ವದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ನಿತ್ಯ ಅಭಿಷೇಕ, ವಿಶೇಷಪೂಜೆ, ಕೀರ್ತನೆ, ಭಜನೆ, ಕುಮಾರಿಕಾ ಪೂಜೆ ಸೇರಿ ಹಲವು ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ಮಠದ ವಕ್ತಾರ ಗಜಾನನ ಮಹಾರಾಜ ತಿಳಿಸಿದ್ದಾರೆ.

Share this article