- ಜಗಳೂರು ಶಾಸಕರಿಂದ ಉದ್ಘಾಟನೆ, ವಿವಿಧ ಗಣ್ಯರು ಉಪಸ್ಥಿತಿ
- - -ದಾವಣಗೆರೆ: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಬೇವಿನಹಳ್ಳಿ ದೊಡ್ಡ ತಾಂಡದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 100 ವರ್ಷ ತುಂಬಿದೆ. ಈ ಹಿನ್ನೆಲೆ ಮೇ 18ರಂದು ಬೇವಿನಹಳ್ಳಿ ದೊಡ್ಡ ತಾಂಡದಲ್ಲಿ ಶಾಲಾ ಶತಮಾನೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ತಾಂಡಾ ಮುಖಂಡ ಮಹಾಂತೇಶ್ ನಾಯ್ಕ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಬೆಳಗ್ಗೆ 10 ಗಂಟೆಗೆ ಶಾಲಾ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಗಣಿ ಮತ್ತು ಭೂ ವಿಜ್ಞಾನ ಮತ್ತು ತೋಟಗಾರಿಕೆ ಹಾಗೂ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮ್ಮದ್ ಖಾನ್ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಉಚ್ಚಂಗಿದುರ್ಗ ಗ್ರಾಪಂ ಉಪಾಧ್ಯಕ್ಷ ಮಡ್ರಳ್ಳಿ ಕೆಂಚಪ್ಪ ವಹಿಸಲಿದ್ದಾರೆ ಎಂದರು.ವಿಶೇಷ ಆಹ್ವಾನಿತರಾಗಿ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಬಳ್ಳಾರಿ ಸಂಸದ ಈ.ತುಕಾರಾಂ, ಹರಪನಹಳ್ಳಿ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹಾಗೂ ರಾಜ್ಯಸಭೆ ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್, ವಿಧಾನ ಪರಿಷತ್ತು ಸದಸ್ಯರಾದ ಡಾ.ಚಂದ್ರಶೇಖರ್ ಬಿ. ಪಾಟೀಲ್, ವೈ.ಎಂ. ಸತೀಶ್, ಶಶೀಲ್ ಜಿ. ನಮೋಶಿ ಪಾಲ್ಗೊಳ್ಳುವರು ಎಂದು ಹೇಳಿದರು.
ಅತಿಥಿಗಳಾಗಿ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್, ವಿಜಯನಗರ ಜಿಲ್ಲೆಯ ಜಿಪಂ ಸಿಇಒ ನೋಂಗ್ಟಾಯ್ ಮಹಮ್ಮದ್ ಅಲಿ ಅಕ್ರಮ್ ಶಾ, ವಿಜಯಪುರ ಜಿಲ್ಲಾ ಎಸ್‌ಪಿ ಬಿ.ಎಲ್. ಶ್ರೀಹರಿಬಾಬು, ಹರಪನಹಳ್ಳಿ ಎಸಿ ಚಿದಾನಂದ ಗುರುಸ್ವಾಮಿ, ತಹಸೀಲ್ದಾರ ಬಿ.ವಿ. ಗಿರೀಶ ಬಾಬು, ಶಿಕ್ಷಣ ಇಲಾಖೆಯ ವೆಂಕಟೇಶ್ ರಾಮಚಂದ್ರಪ್ಪ, ಒ.ಆರ್. ಪ್ರಕಾಶ್, ಡಿವೈಎಸ್.ಪಿ ಡಾ. ವೆಂಕಟಪ್ಪನಾಯಕ, ಜಿಪಂ ಸಿಇಒ ವೈ.ಎಚ್.ಚಂದ್ರಶೇಖರ, ಸಿಪಿಐ ಮಹಾಂತೇಶ್ ಜಿ.ಸಜ್ಜನ್, ಎಚ್.ಲೇಪಾಕ್ಷಪ್ಪ, ಎಸ್.ಹೊನ್ನತ್ತೆಪ್ಪ, ರಂಗಯ್ಯ, ರೇಣುಕಮ್ಮ ತಳವಾರ ಮಂಜಪ್ಪ, ಬಿ.ದೇವೇಂದ್ರ ನಾಯ್ಕ, ಗೀತಾ ಕುಮಾರಸ್ವಾಮಿ ಆಗಮಿಸಲಿದ್ದಾರೆ ಎಂದು ವಿವರಿಸಿದರು.ಸುದ್ದಿಗೋಷ್ಟಿಯಲ್ಲಿ ಕೆ.ಮಾರುತಿ, ಎಂ.ಶಿವಕುಮಾರ್, ಆರ್.ಮಂಜುನಾಥ್, ಎಲ್.ಮೋಹನ್ ನಾಯ್ಕ, ಮಲ್ಲೇಶ್ ನಾಯ್ಕ, ಸತೀಶ್ ನಾಯ್ಕ ಇತರರು ಇದ್ದರು.
- - --16ಕೆಡಿವಿಜಿ33:
ಶಾಲೆ ಶತಮಾನೋತ್ಸವ ಸಮಾರಂಭ ಕುರಿತು ಮಹಾಂತೇಶ್ ನಾಯ್ಕ ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.