ಕನ್ನಡಪ್ರಭ ವಾರ್ತೆ, ಕಮಾಲ್‌ನಗರದೇಶಾದ್ಯಂತ ಹೆದ್ದಾರಿಗಳು ಒದಕ್ಕಿಂದ ಮತ್ತೊಂದು ಅದ್ಭುತ ಎನ್ನುವಂತೆ ನಿರ್ಮಾಣವಾಗ್ತಿವೆ. ಆದರೆ ಬೀದರ್‌ನಲ್ಲಿ ನಿರ್ಮಾಣವಾದ ಈ ಹೆದ್ದಾರಿ ಕಾಮಗಾರಿ ನಿಜಕ್ಕೂ ಅಧೋಗತಿಯಾಗಿದೆ.ಕಂಡಕಂಡಲ್ಲಿ ರಸ್ತೆ ತುಂಬೆಲ್ಲಾ ಅಲ್ಲಲ್ಲಿ ಬಿರುಕು ಬಿಟ್ಟಿವೆ. ರಸ್ತೆ ನಡುವೆ ಉಬ್ಬು-ತಗ್ಗುಗಳು ನಿರ್ಮಾಣವಾಗಿವೆ. ಅತೀ ವೇಗದಲ್ಲಿ ವಾಹನ ಸಂಚಾರ ಮಾಡಿದಲ್ಲಿ ಸಾವು ಕಟ್ಟಿಟ್ಟ ಬುತ್ತಿ. ಇಂಥ ಭಯಾನಕ ಹೆದ್ದಾರಿ ಕಾಮಗಾರಿಗೆ ಖರ್ಚು ಮಾಡಿದ್ದು ಬರೋಬ್ಬರಿ 396.96 ಕೋಟಿ ರು. ಇಷ್ಟಾದರೂ ಸುಸಜ್ಜಿತ ಸಂಚಾರ ಮಾರ್ಗ ಸಿಗಲಿಲ್ಲ ಎಂಬ ಕೊರಗು ಸಾಮಾನ್ಯ ಜನರದ್ದಾಗಿದೆ.2018ರಲ್ಲಿ ಆರಂಭವಾದ ಕಾಮಗಾರಿ ಆರಂಭದಿಂದಲೂ ಕಳಪೆ ಕಾಮಗಾರಿಯ ಆರೋಪದ ಸುತ್ತ ಸುತ್ತಕೊಂಡಿತ್ತು. ಕಾಮಗಾರಿ ವಿಳಂಬ ಸಂಚಾರಕ್ಕೆ ಅಡ್ಡಿ ಹೀಗೆ ಗುತ್ತಿಗೆದಾರರನ ನಿರ್ಲಕ್ಷ್ಯತನದ ವಿರುದ್ಧ ಜನಪ್ರತಿನಿಧಿಗಳು ಸಾಲು ಸಾಲು ಆರೋಪಗಳು ಮಾಡಿಕೊಂಡೆ ಬಂದಿದ್ದಾರೆ. ಆದ್ರೆ ಕಾಮಗಾರಿ ಪೂರ್ಣ ಆಗುವರೆಗೆ ಒಂದ ಕಡೆ ಹೆದ್ದಾರಿ ನಿರ್ಮಾಣವಾಗ್ತಿದ್ದಂತೆ ಮತ್ತೊಂದು ಕಡೆ ಬಿರುಕು ಬಿಟ್ಟು ರಸ್ತೆ ಕಳಪೆಯಾಗುತ್ತಿತ್ತು.ಈ ಕಳಪೆ ಕಾಮಗಾರಿಯ ಸ್ಥಿತಿಯನ್ನು ಮಾಜಿ ಸಚಿವ ಔರಾದ್ ಶಾಸಕ ಪ್ರಭು ಚವ್ಹಾಣ ಅವರು ಬೆಳಗಾವಿಯ ಅಧಿವೇಶನದಲ್ಲಿ ಚುಕ್ಕೆ ಗುರುತಿನ ಪ್ರಶ್ನೆಯನ್ನು ಪ್ರಸ್ತಾಪಿಸಿ, ಸರ್ಕಾರದ ಗಮನ ಸೆಳೆದಿದ್ದಾರೆ. ಇದಕ್ಕೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಕಳಪೆ ಕಾಮಗಾರಿಯಾಗಿರುವುದು ಒಪ್ಪಿಕೊಂಡಿರುವ ನಂತರ ಈ ಹೆದ್ದಾರಿಗೆ ಮಹತ್ವ ಬಂದಿದೆ. ಈಗಲಾದರೂ ಹದಗೆಟ್ಟ ಹೆದ್ದಾರಿ ಕಾಮಗಾರಿಯನ್ನು ಯಥಾವಥ ಸರಿಪಡಿಸಿ ತಪ್ಪಿತಸ್ಥರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುತ್ತಾ ಎನ್ನುವುದೇ ಯಕ್ಷ ಪ್ರಶ್ನೆ.
‘ಕನ್ನಡಪ್ರಭ’ಸ್ಥಳ ಪರಿಶಿಲನೆ: ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಬೀದರ್ ಕಮಲಾನಗರ ಹೆದ್ದಾರಿ ಪ್ರಸ್ತಾಪದ ನಂತರ ‘ಕನ್ನಡಪ್ರಭ’ ಹೆದ್ದಾರಿಗೆ ಸಂಚರಿಸಿ ರಿಯಾಲಿಟಿ ಚೆಕ್ ಮಾಡಿದೆ. ನೌಬಾದ್‌ನಿಂದ ಕಮಾಲ್‌ನಗರ ಬಾರ್ಡರ್ ವರೆಗೆ ನಡೆದ ಕಾಮಗಾರಿಯಲ್ಲಿ ಅಲ್ಲಲ್ಲಿ ಬಿರುಕುಗಳು ಬಿದ್ದಿವೆ. ರಸ್ತೆ ಕಾಮಗಾರಿಯಲ್ಲಿ ಸಮಾನಾಂತರ ಇಲ್ಲದೆ ಇರುವುದು ಮತ್ತು ಹಲವಾರು ಬಾರಿ ರಸ್ತೆಯನ್ನು ಕತ್ತರಿಸಿ ಸರಿಪಡಿಸಿರುವುದು ಬೆಳಕಿಗೆ ಬಂದಿದೆ.ಸದನದಲ್ಲಿ ಸರ್ಕಾರದ ಗಮನ ಸೆಳೆದಿದ್ದೇನೆ. ಲೋಕೋಪಯೋಗಿ ಸಚಿವರು ತಂಡದೊಂದಿಗೆ ಹೆದ್ದಾರಿಯ ಕಳಪೆ ಕಾಮಗಾರಿ ಸ್ಥಳ ಪರಿಶೀಲನೆ ಮಾಡುವಂತೆ ಕೊರಿದ್ದೇನೆ. ರಸ್ತೆ ಅಪಘಾತಗಳು, ಅಪಘಾತಗಳಲ್ಲಿ ಸಾವನಪ್ಪಿರುವ ಕುಟುಂಬಸ್ಥರ ನೋವು ಆಲಿಸುವಂತೆ ಕೇಳಿದಕ್ಕೆ ಸರ್ಕಾರ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದೆ ಎಂದು ಶಾಸಕ ಪ್ರಭು ಚವ್ಹಾಣ ಹೇಳಿದರು.ಸ್ಥಳೀಯ ಮುಖಂಡ ಶಿವಕುಮಾರ್ ಝುಲ್ಪೆ ಮಾತನಾಡಿ, ಈ ಹೆದ್ದಾರಿ ಮೇಲೆ ನಾವಂತೂ ಹೇಗೊ ಸಂಚಾರ ಮಾಡ್ತೀವಿ ದಿನ ಬೀದರ್‌ಗೆ ಹೊಗುವಾಗ ಎಲ್ಲಿ ಬಿರುಕು ಇದೆ, ಎಲ್ಲಿ ತಗ್ಗಿದೆ ವಾಹನ ಎಷ್ಟು ವೇಗ ಇಡಬೇಕು ಎಂಬುದು ಆದ್ರೆ ಹೊಸಬರು ಯಾರಾದ್ರು ಪ್ರಯಾಣಿಕರಿಗೆ ಇದೆಲ್ಲ ಸುಲಭವಿಲ್ಲ. ಹೀಗಾಗಿ ರಸ್ತೆ ಅಪಘಾತ ಆಗ್ತಿವೆ ಎಂದರು.