ಬೈಕ್ ಕಳವು: ಆರೋಪಿ ಬಂಧನ

KannadaprabhaNewsNetwork | Published : Feb 29, 2024 2:06 AM

ಸಾರಾಂಶ

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಉಪವಿಭಾಗದ ಕಡೂರು, ಬೀರೂರು, ತರೀಕೆರೆ ಹಾಗೂ ಇತರೆ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದಿದ್ದ ಬೈಕ್ ಕಳವು ಪ್ರಕರಣಗಳ ಆರೋಪಿಯನ್ನುಬಂಧಿಸಿದ ಕಡೂರು ಪೊಲೀಸರು 1,38,400 ರು. ಮೌಲ್ಯದ 4 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಕನ್ನಡ ಪ್ರಭ ವಾರ್ತೆ, ಕಡೂರು

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಉಪವಿಭಾಗದ ಕಡೂರು, ಬೀರೂರು, ತರೀಕೆರೆ ಹಾಗೂ ಇತರೆ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದಿದ್ದ ಬೈಕ್ ಕಳವು ಪ್ರಕರಣಗಳ ಆರೋಪಿಯನ್ನುಬಂಧಿಸಿದ ಕಡೂರು ಪೊಲೀಸರು 1,38,400 ರು. ಮೌಲ್ಯದ 4 ಬೈಕ್ ಗಳ ಮಾಲಿನ ವಶಪಡಿಸಿಕೊಂಡಿದ್ದಾರೆ.

ಕಡೂರು ಪಟ್ಟಣದ ವಿಜಯಲಕ್ಷಿ ಚಿತ್ರಮಂದಿರದ ಬಳಿ ಆರೋಪಿ ಮಹಮ್ಮದ್ ಅಫ್ಜಲ್ ಬಿನ್ ಮಹಮ್ಮದ್ ರಿಜ್ವಾನ್ (18 ), ನ್ನು ಬಂಧಿಸಲಾಗಿದೆ. ಹಣ್ಣಿನ ವ್ಯಾಪಾರಿಯಾದ ಈತ ಶಿವಮೊಗ್ಗದ ಟಿಪ್ಪುನಗರ ವಾಸಿ. ಈತನ ವಿರುದ್ಧ ಕಡೂರು, ತರೀಕೆರೆ, ಬೀರೂರು ಠಾಣೆ ಹಾಗೂ ಅರಸೀಕೆರೆ ರೈಲ್ವೆ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳಲ್ಲಿ ಕಳುವಾಗಿದ್ದ ತಲಾ ಒಂದೊಂದು ಬೈಕ್ ಗಳನ್ನು ಪತ್ತೆ ಮಾಡಿ ಒಟ್ಟು 1,38,400 ರು. ಮೌಲ್ಯದ 4 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೈಕ್ ಕಳ್ಳರ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ: ವಿಕ್ರಂ ಅಮಟೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕೃಷ್ಣಮೂರ್ತಿ, ಯೋಗೇಂದ್ರ ನಾಥ್ ಮತ್ತು ಹಾಲಮೂರ್ತಿ ರಾವ್ ಪೊಲೀಸ್ ಉಪಾಧಿಕ್ಷಕರು ತರೀಕೆರೆ ಉಪವಿಭಾಗ, ಸಿಪಿಐ ದುರುಗಪ್ಪ ಕಡೂರು ವೃತ್ತ ರವರ ಮಾರ್ಗದರ್ಶನದಲ್ಲಿ ಪಿಎಸ್ಐ ಪವನ್ ಕುಮಾರ್, ಧನಂಜಯ್, ಸಿ.ಸಿ. ನವೀನ್ , ಶೋಭಾ ಮತ್ತು ಪೊಲೀಸ್ ಪೇದೆಗಳಾದ ಜಿ.ಕೆ. ಮಧುಕುಮಾರ್, ಧನಪಾಲ ನಾಯಕ್, ರಿಯಾಜ್, ರೇಣುಕಾ ಪ್ರಸಾದ್, ಹರೀಶ್, ಸ್ವಾಮಿ, ಜಯಮ್ಮ,ಚಾಲಕ ಮಧು ಸೇರಿದಂತೆ ವಿಶೇಷ ಅಪರಾಧ ತನಿಖಾ ತಂಡ ರಚಿಸಲಾಗಿತ್ತು.

ಆರೋಪಿ ಹಾಗೂ ಕಳುವಾದ ಬೈಕ್ ಗಳ ಪತ್ತೆಗಾಗಿ ಶ್ರಮಿಸಿದ ತನಿಖಾ ತಂಡದ ಕಾರ್ಯವನ್ನು ಪೊಲಿಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ..

28ಕೆಕೆಡಿಯು1, ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಮಾಲುಗಳ ಸಮೇತ ಕಡೂರು ಪೋಲೀಸರು ಬಂಧಿಸಿರುವುದು.

Share this article