ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಪಣ

KannadaprabhaNewsNetwork | Published : Mar 10, 2024 1:48 AM

ಸಾರಾಂಶ

ವಿಜಯನಗರ ಜಿಲ್ಲಾ ಕೇಂದ್ರದಲ್ಲಿ ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ತಿರಂಗಾ ಯಾತ್ರೆ, ಮತ್ತೊಮ್ಮೆ ಮೋದಿ ಜಾಗೃತಿ ಯಾತ್ರೆ ಹಾಗೂ ಮಹಿಳಾ ಮೋರ್ಚಾದಿಂದ ಮಾತೃವಂದನ ಕಾರ್ಯಕ್ರಮ ನಡೆಯಿತು.

ಹೊಸಪೇಟೆ: ಸದೃಢ ದೇಶ ನಿರ್ಮಾಣಕ್ಕಾಗಿ ಮಾತಾ ರಾಜಲಕ್ಷ್ಮೀ ಅಮ್ಮನವರು ರಾಜ್ಯಾದ್ಯಂತ ಬೈಕ್ ರ‍್ಯಾಲಿ ಮೂಲಕ ಮತ್ತೊಮ್ಮೆ ಮೋದಿ ಜಾಗೃತಿ ಅಭಿಯಾನ ಆರಂಭಿಸಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಖಜಾಂಚಿ ಸಿದ್ಧಾರ್ಥ ಸಿಂಗ್ ತಿಳಿಸಿದರು.

ವಿಜಯನಗರ ಜಿಲ್ಲಾ ಕೇಂದ್ರದಲ್ಲಿ ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ನಡೆದ ತಿರಂಗಾ ಯಾತ್ರೆ, ಮತ್ತೊಮ್ಮೆ ಮೋದಿ ಜಾಗೃತಿ ಯಾತ್ರೆ ಹಾಗೂ ಮಹಿಳಾ ಮೋರ್ಚಾದಿಂದ ಮಾತೃವಂದನ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದಲ್ಲಿ ನಮೋ ಅಭಿಯಾನ ಶುರುವಾಗಿದ್ದು, 2024ರ ಲೋಕಸಭಾ ಚುನಾವಣೆಯಲ್ಲಿ 400ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ. ಬೈಕ್ ಮೂಲಕ ನಾಡಿನಾದ್ಯಂತ ಸಂಚಾರ ಮಾಡಿ ಯುವಕರಿಗೆ ಸ್ಫೂರ್ತಿ ತುಂಬುತ್ತಿರುವ ರಾಜಲಕ್ಷ್ಮಿ ಅಮ್ಮನವರು ಮಾದರಿಯಾಗಿದ್ದಾರೆ. ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯಾರೇ ಆದರೂ ಅವರನ್ನು ಗೆಲ್ಲಿಸುವ ಕೆಲಸವನ್ನು ಮಾಡುತ್ತೇವೆ ಎಂದರು.

ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕಿಚಿಡಿ ಕೊಟ್ರೇಶ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ದೇಶದ್ರೋಹಕ್ಕೆ ಕುಮ್ಮಕ್ಕು ನೀಡುತ್ತಿದ್ದು, ರಾಜ್ಯದಲ್ಲಿ ಅಶಾಂತಿ ಉಂಟಾಗಿದೆ. ಸಮಾಜದಲ್ಲಿ ದೇಶಾಭಿಮಾನ ಮೂಡಲು ಬಿಜೆಪಿ ಯುವ ಮೋರ್ಚಾ ರಾಜ್ಯಾದ್ಯಂತ ತಿರಂಗಾ ಯಾತ್ರೆಯನ್ನು ಹಮ್ಮಿಕೊಂಡಿದೆ ಎಂದರು.

ಜಾಗೃತಿ ಅಭಿಯಾನದ ಮುಖ್ಯಸ್ಥೆ ಮಾತಾ ರಾಜಲಕ್ಷ್ಮಿ ಮಾತನಾಡಿ, ರಾಷ್ಟ್ರ ಕಂಡ ಅತ್ಯುತ್ತಮ ನಾಯಕ ಮೋದಿ. ಅಂಥವರ ಪರವಾಗಿ ಈಗಾಗಲೇ ಒಂದು ಲಕ್ಷ ಕಿಮೀ ಬೈಕ್‌ನಲ್ಲಿ ಜನಜಾಗೃತಿ ಅಭಿಯಾನ ಮಾಡಿರುವುದು ಖುಷಿ ತಂದಿದೆ ಎಂದರು.

ಜಿಲ್ಲಾ ಉಪಾಧ್ಯಕ್ಷೆ ಭಾರತಿ, ಎಸ್ಟಿ ಮೋರ್ಚಾ ಅಧ್ಯಕ್ಷ ಜಗದೀಶ್ ಕಮಟಗಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸುವರ್ಣ, ಮಂಡಳ ಅಧ್ಯಕ್ಷ ಶಂಕರ್ ಮೇಟಿ, ನಗರ ಘಟಕ ಅಧ್ಯಕ್ಷ ರೇವಣಸಿದ್ದಪ್ಪ, ಯುವ ಮೋರ್ಚಾ ತಾಲೂಕು ಅಧ್ಯಕ್ಷ ಶ್ರೀಕಾಂತ ಪೂಜಾರ್, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಸೂರಿ ಬಂಗಾರು, ಕವಿತಾ, ಅನುರಾಧಾ, ರೇಖಾರಾಣಿ, ಸಂಧ್ಯಾ, ರೇಣುಕಾ, ಉಮಾ, ಚಂದ್ರು ದೇವಲಾಪುರ, ಆರ್. ನಾಗರಾಜ್, ಹೊನ್ನೂರಪ್ಪ, ರಾಘವೇಂದ್ರ, ಪ್ರಮೋದ್, ಅಭಿಷೇಕ್, ಪುನೀತ್, ಮಹಾಲಕ್ಷ್ಮಿ, ಕೊಲ್ಲಾಪುರಿ ಮತ್ತಿತರರಿದ್ದರು.

Share this article