ಕನ್ನಡಪ್ರಭ ವಾರ್ತೆ ವಿಜಯಪುರಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಹರ್ ಘರ್ ತಿರಂಗಾ ಯಾತ್ರೆ ಪ್ರಯುಕ್ತ ಬೈಕ್ ರ್‍ಯಾಲಿ ನಡೆಸಿದರು. ಬಿಜೆಪಿಯ ನೂರಾರು ಕಾರ್ಯಕರ್ತರು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಭಾರತ ಮಾತಾ ಕೀ ಜೈ, ವಂದೇ ಮಾತರಂ ಘೋಷಣೆಗಳನ್ನು ಮೊಳಗಿಸಿದರು.
ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಸೇರಿದಂತೆ ಅನೇಕ ನಾಯಕರು ಬೈಕ್ ರ್‍ಯಾಲಿಯಲ್ಲಿ ಭಾಗವಹಿಸಿದ್ದರು.ನಗರದ ಅಥಣಿ ರಸ್ತೆಯ ಸೆಟ್‌ಲೈಟ್ ಬಸ್ ನಿಲ್ದಾಣದಿಂದ ಆರಂಭಗೊಂಡ ರ್‍ಯಾಲಿ ಶಿವಾಜಿ ವೃತ್ತ, ಗಾಂಧಿ ವೃತ್ತ ಮಾರ್ಗವಾಗಿ ಬಸವೇಶ್ವರ ವೃತ್ತ, ಡಾ.ಅಂಬೇಡ್ಕರ್ ವೃತ್ತ ಮಾರ್ಗವಾಗಿ ಶಿವಾಜಿ ವೃತ್ತಕ್ಕೆ ಸಂಪನ್ನಗೊಂಡಿತು.ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ವೀರ ಸಾವರಕರ ಸೇರಿದಂತೆ ಅನೇಕ ಮಹನೀಯರು ತಮ್ಮ ಜೀವನವನ್ನೇ ಮುಡುಪಾಗಿರಿಸಿದ್ದರು. ಕಠಿಣ ಜೈಲು ಶಿಕ್ಷೆ ಅನುಭವಿಸಿದರು. ಅವರೆಲ್ಲರ ತ್ಯಾಗದ ಫಲವಾಗಿ ಇಂದು ನಾವು ಸ್ವಾತಂತ್ರ್ಯ ಅನುಭವಿಸುತ್ತಿದ್ದೇವೆ, ದೇಶಭಕ್ತಿ ಎನ್ನುವುದು ನಮ್ಮ ಉಸಿರಾಗಬೇಕು, ದೇಶಭಕ್ತಿ ಜಾಗೃತಿಗಾಗಿ ಹರ್ ಹರ್ ಘರ್ ತಿರಂಗಾ ಕಾರ್ಯಕ್ರಮ ಭಾರತೀಯರ ಮನ ಗೆದ್ದಿದೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಪ್ರಮಖರಾದ ಭೀಶಂಕರ ಹದನೂರ, ಡಾ.ಸುರೇಶ ಬಿರಾದಾರ, ಚಂದ್ರಶೇಖರ್ ಕವಟಗಿ, ಮಳುಗೌಡ ಪಾಟೀಲ, ಸಾಬು ಮಾಶ್ಯಾಳ, ಸಂಜಯ ಕನಮಡಿ, ಸ್ವಪ್ನಾ ಕಣಮುಚನಾಳ, ಉಮೇಶ ಕಾರಜೋಳ, ಉಮೇಶ್ ಕೋಳಕೂರ, ಈರಣ್ಣ ಪಟ್ಟಣಶೆಟ್ಟಿ, ಗೋಪಾಲ್ ಘಟಕಾಂಬಳೆ, ರಾಹುಲ ಜಾಧವ, ಚಿದಾನಂದ ಚಲವಾದಿ, ಭರತ್ ಕೋಳಿ, ಮಂಜುನಾಥ್ ಮೀಸೆ, ಬಸವರಾಜ್ ಬೈಚಬಾಳ, ಕಾಸುಗೌಡ ಬಿರಾದಾರ, ಮಹೇಂದ್ರ ನಾಯಕ್, ಸಂದೀಪ್ ಪಾಟೀಲ್, ವಿಕಾಸ ಪದಕಿ, ರಾಜಕುಮಾರ್ ಸಗಾಯಿ, ವಿಜಯ ಜೋಶಿ, ತಾವಸೆ, ಕಾಂತು ಸಿಂಧೆ, ವಿನಾಯಕ್ ಗೌಳಿ, ಸಂತೋಷ್ ನಿಂಬರಗಿ, ರವಿ ಬಿರಾದಾರ, ಉಮೇಶ್ ವೀರಕರ, ಪಾಪು ಸಿಂಗ್ ರಜಪೂತ, ಆನಂದ್ ಮುಚ್ಚಂಡಿ, ಅನಿಲ್ ಉಪ್ಪಾರ, ಸಾಗರ್ ಶೇರಖಾನೆ, ಸಂಗು ಉಕಲಿ, ಭಾರತಿ ಶಿವಣ್ಣಗಿ, ವಿಠ್ಠಲ ಹೊಸಪೇಟೆ, ಸಂತೋಷ ಜಾಧವ ಪಾಲ್ಗೊಂಡಿದ್ದರು.