ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಹೇಗಾದರೂ ಮಾಡಿ ಕಾಂಗ್ರೆಸ್ ಸರ್ಕಾರದ ಹೆಸರು ಹಾಳು ಮಾಡಬೇಕೆಂಬ ದುರಾಲೋಚನೆಯಿಂದ ಬಿಜೆಪಿಯವರು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಜನರಿಗೆ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ ಕಿಡಿಕಾರಿದರು.ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಪುರಸಭೆಗೆ ಹಾಗೂ ಆಶ್ರಯ ಸಮಿತಿಗೆ ಸರ್ಕಾರದಿಂದ ನಾಮನಿರ್ದೇಶನಗೊಂಡ ಸದಸ್ಯರನ್ನು ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಉತ್ತಮ ಜನಪರ ಆಡಳಿತ ನಡೆಸುತ್ತಿದೆ. ಆದರೆ, ಬಿಜೆಪಿವರಿಗೆ ಮತ್ತು ಜೆಡಿಎಸ್‌ನವರಿಗೆ ಕಾಂಗ್ರೆಸ್ ಸರ್ಕಾರದ ಸಾಧನೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.ಸದ್ಯ ಪುರಸಭೆಯ 2ನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆಗೆ ಸರ್ಕಾರ ಮೀಸಲಾತಿ ಪ್ರಕಟಿಸಿದೆ. ಕಾರಣ ಸದ್ಯ ನಾಮನಿದೇಶಿತ ಸದಸ್ಯರಿಗೂ ಮತ ಹಾಕುವ ಹಕ್ಕು ನೀಡಿದರೇ ಈ ಬಾರಿ 2ನೇ ಅವಧಿಗೂ ಕಾಂಗ್ರೆಸ್ ಪಕ್ಷದವದರೇ ಅಧ್ಯಕ್ಷರಾಗಿ ಆಯ್ಕೆಯಾಗುವ ಯಾವುದೇ ಸಂದೇಹವಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು ಈ ಕೂಡಲೇ ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇನೆ ಎಂದರು.ಪಟ್ಟಣದ ಪುರಸಭೆಗೆ ಹಾಗೂ ಆಶ್ರಯ ಸಮಿತಿಗೆ ಸರ್ಕಾರದಿಂದ ನಾಮನಿರ್ದೇಶನಗೊಂಡ ರಾಜು ಹೊನ್ನುಟಗಿ, ವಿರೂಪಾಕ್ಷಿ ಈರಣ್ಣ ಪತ್ತಾರ, ನಬೀರಸೂಲ್ ಬಡೇಸಾಬ್ ಮುದ್ನಾಳ, ನೀಲಮ್ಮ ಲಕ್ಷಣ ಚಲವಾದಿ, ಅಕ್ರಮ್ ಸಕ್ರಮ್ ಸಮಿತಿ ನಾಮನಿರ್ದೇಶನ ಸದಸ್ಯರಾಗಿ, ಶಾಂತು ಮೇಲ್ಮನಿ, ಪದಾಧಿಕಾರಿಗಳನ್ನು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ ಅವರು ಸನ್ಮಾನಿಸಿದರು.ಮುಖಂಡರಾದ ರುದ್ರಗೌಡ ಅಂಗಡಗೇರಿ, ತಾಲೂಕು ಯೂರ್ಥ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಫೀಕ್ ಶಿರೋಳ, ಸಿಕಂದರ್ ಜಾನ್ವೇಕರ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗೋಪಿ ಮಡಿವಾಳರ, ಬೀರಪ್ಪ ಯರಝರಿ, ಸಂತೋಷ ನಾಯ್ಕೋಡಿ, ಹರೀಶ ಬೇವೂರ, ಲಕ್ಷಣ ಚವ್ಹಾಣ, ಮುತ್ತು ಬಿಳೆಭಾವಿ, ಶಬೀರ್ ಮುಂತಾದ ಮುಖಂಡರು ಉಪಸ್ಥಿತರಿದ್ದರು.ನೂತನವಾಗಿ ನಾಮ ನಿರ್ದೇಶನಗೊಂಡ ಎಲ್ಲ ಮುಖಂಡರು ಕಾಂಗ್ರೆಸ್ ಸರ್ಕಾರದ ಸಾಧನೆ ಮತ್ತು ಜನಪರ ಯೋಜನೆಗಳನ್ನು ಜನರಿಗೆ ತಿಳಿಸುವ ಮೂಲಕ ಪಕ್ಷ ಸಂಘಟೆನೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಪಕ್ಷದಶಕ್ತಿ ಬಲಪಡಿಸಬೇಕು.
-ಗುರು ತಾರನಾಳ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು.