ಮಳೆ ಸಂತ್ರಸ್ತರಿಗೆ ಬಿಜೆಪಿ ಮುಖಂಡರಿಂದ ನೆರವು

KannadaprabhaNewsNetwork |  
Published : Jun 09, 2024, 01:46 AM ISTUpdated : Jun 09, 2024, 01:31 PM IST
8ಕೆಬಿಪಿಟಿ.3.ಬಂಗಾರಪೇಟೆ ಪಟ್ಟಣದ ಸೇಟ್‌ಕಾಂಪೌಂಡ್ ಬಡಾವಣೆಯ ನಿವಾಸಿಗಳಿಗೆ ಬಿಜೆಪಿ ಮುಖಂಡ ಕೆ.ಚಂದ್ರಾರೆಡ್ಡಿ ಆಹಾರ ಧಾನ್ಯಗಳನ್ನು ವಿತರಿಸಿದರು. | Kannada Prabha

ಸಾರಾಂಶ

ಪ್ರತಿ ವರ್ಷ ಮಳೆ ಬಂದಾಗ ಇಂತಹ ಅವಾಂತರ ನಿರ್ಮಾಣವಾಗುವುದು ಸಾಮಾನ್ಯವಾಗಿದೆ. ಆದರೂ ಪುರಸಭೆ ಆಡಳಿತ ಮಂಡಳಿ ಹಾಗೂ ವಾರ್ಡಿನ ಸದಸ್ಯರು ಗಮನಹರಿಸಿ ಸಮಸ್ಯೆಗೆ ಪರಿಹಾರ ನೀಡದೆ ಕಾಲಹರಣ ಮಾಡುತ್ತಿರುವುದರಿಂದ ಜನರು ಸಂಕಷ್ಟಕ್ಕೆ ಸಿಲುಕುವಂತಾಗಿದೆ

 ಬಂಗಾರಪೇಟೆ :  ಪಟ್ಟಣದಲ್ಲಿ ಸುರಿದ ಧಾರಾಕಾರ ಮಳೆಗೆ ಸೇಟ್‌ ಕಾಂಪೌಂಡ್ ಸೇರಿದಂತೆ ಹಲವು ತಗ್ಗು ಪ್ರದೇಶದ ಬಡಾವಣೆಗಳ ವಾಸದ ಮನೆಗಳಿಗೆ ಮಳೆ ನೀರು ನುಗ್ಗಿ ಮನೆಯಲ್ಲಿದ್ದ ಆಹಾರ ಪದಾರ್ಥಗಳು ಸೇರಿದಂತೆ ಇತರೇ ವಸ್ತುಗಳು ನಾಶವಾಗಿವೆ. ಇದರಿಂದಾಗಿ ನಿರಾಶ್ರಿತರಾದವರಿಗೆ ಬಿಜೆಪಿ ಹಿರಿಯ ಮುಖಂಡ ಕೆ. ಚಂದ್ರಾರೆಡ್ಡಿ ಹಾಗೂ ಸ್ನೇಹಿತರು ಸಂತ್ರಸ್ತರಿಗೆ ಆಹಾರ ಧಾನ್ಯಗಳನ್ನು ವಿತರಿಸಿದರು.ಮನೆಗಳಿಗೆ ನುಗ್ಗಿದ ಚರಂಡಿ ನೀರು

ಗುರುವಾರ ರಾತ್ರಿ ಒಮ್ಮೆಲೆ ಧಾರಾಕಾರ ಮಳೆಯಾಗಿದ್ದರಿಂದ ಹಾಗೂ ಸೇಟ್‌ ಕಾಂಪೌಂಡ್ ಬಡಾವಣೆ ತಗ್ಗು ಪ್ರದೇಶವಾಗಿದ್ದು ಈ ಬಡಾವಣೆಯಲ್ಲಿ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಕೆಲವು ಕಡೆ ಚರಂಡಿಗಳನ್ನು ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಾಣ ಮಾಡಿರುವುದರಿಂದ ಮಳೆ ನೀರು ಚರಂಡಿಗಳಲ್ಲಿ ಹರಿಯದೆ ಕೊಳಚೆ ನೀರು ಮಿಶ್ರಣಗೊಂಡು ಮನೆಗಳಿಗೆ ನುಗ್ಗುತ್ತದೆ. ಗುರುವಾರ ಇಡೀ ರಾತ್ರಿ ಜನರು ನಿದ್ದೆಯಿಲ್ಲದೆ ಮನೆಗಳಿಂದ ನೀರನ್ನು ಹೊರ ಚೆಲ್ಲಲು ಸಾಹಸ ಮಾಡಿದರು. ಅಲ್ಲದೆ ಮಳೆಗೆ ಮನೆಯಲ್ಲಿದ್ದ ಆಹಾರ ಪದಾರ್ಥಗಳು ಸೇರಿದಂತೆ ಇತರೇ ಗೃಹಪಯೋಗಿ ವಸ್ತುಗಳು ನೀರಿನಲ್ಲಿ ನೆನೆದು ನಾಶವಾಗಿವೆ. ಶನಿವಾರ ಈ ಬಡಾವಣೆಗೆ ಕೆ. ಚಂದ್ರಾರೆಡ್ಡಿ ಹಾಗೂ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ವಿ. ಮಹೇಶ್ ಮತ್ತಿತರರು ಬೇಟಿ ನೀಡಿ ನಿರಾಶ್ರಿತರಿಗೆ ಸಾಂತ್ವನ ಹೇಳಿ ತಾತ್ಕಾಲಿಕವಾಗಿ ಅವರ ಸಂಕಷ್ಟಕ್ಕೆ ನೆರವಾಗಲೆಂದು ಬಡಾವಣೆಯ ಎಲ್ಲರಿಗೂ ಅಕ್ಕಿ ಮೂಟೆಗಳನ್ನು ವಿತರಿಸಿದರು.

ಮೂರು ದಶಕದ ಸಮಸ್ಯೆ

ಬಳಿಕ ಮಾತನಾಡಿದ ಕೆ. ಚಂದ್ರಾರೆಡ್ಡಿ ಈ ಬಡಾವಣೆಯಲ್ಲಿ ಕಳೆದ ೩೦ವರ್ಷಗಳಿಂದ ಮೂಲಭೂತ ಸೌಲಭ್ಯಗಳಿಲ್ಲದೆ ವಂಚಿತವಾಗಿದೆ. ಚರಂಡಿ ವ್ಯವಸ್ಥೆ ಇಲ್ಲವೆ ಇಲ್ಲ. ಪ್ರತಿ ವರ್ಷ ಮಳೆ ಬಂದಾಗ ಇಂತಹ ಅವಾಂತರ ನಿರ್ಮಾಣವಾಗುವುದು ಸಾಮಾನ್ಯವಾಗಿದೆ. ಆದರೂ ಪುರಸಭೆ ಆಡಳಿತ ಮಂಡಳಿ ಹಾಗೂ ವಾರ್ಡಿನ ಸದಸ್ಯರು ಗಮನಹರಿಸಿ ಸಮಸ್ಯೆಗೆ ಪರಿಹಾರ ನೀಡದೆ ಕಾಲಹರಣ ಮಾಡುತ್ತಿರುವುದರಿಂದ ಜನರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಶಾಸಕರು, ಸಂಸದರು ಸ್ಥಳಕ್ಕೆ ಭೇಟಿ ನೀಡಿ ಮಳೆ ನೀರು ಚರಂಡಿಗಳಲ್ಲಿ ಹರಿಯುವಂತೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರಲ್ಲದೆ ಯಾವುದೇ ಸಮಸ್ಯೆ ಬಂದರೂ ನಿಮ್ಮ ಜೊತೆ ನಾವಿದ್ದೇವೆ ಭಯಪಡುವ ಅಗತ್ಯವಿಲ್ಲ ಎಂದು ಸಂತ್ರಸ್ತರಿಗೆ ಧೈರ್ಯ ತುಂಬಿದರು.ಈ ವೇಳೆ ಪುರಸಭೆ ಸದಸ್ಯ ವಸಂತ್ ಕುಮಾರ್, ಕೃಷಿಕ ಸಮಾಜದ ಅಧ್ಯಕ್ಷ ಜಿ.ರಾಜಾರೆಡ್ಡಿ, ಮುಖಂಡರಾದ ಹೆಚ್.ಆರ್.ಶ್ರೀನಿವಾಸ್, ಹನುಮಪ್ಪ, ಬಿಂದುಮಾಧವ್, ಕರವೇ ಚಲಪತಿ, ಕಾರ್ತಿಕ್, ನರಸಾರೆಡ್ಡಿ, ಮಂಜುನಾಥ್, ವಿನೋದ್, ನರಸರೆಡ್ಡಿ, ಜೋಗಿ, ಮುರುಗೇಶ್ ಇತರರು ಇದ್ದರು.

PREV

Recommended Stories

ಧರ್ಮಸ್ಥಳ ಗ್ರಾಮದಲ್ಲಿ ಕಳೇಬರ ಸಿಗದಿದ್ರೆ ಮುಸುಕುಧಾರಿ ಲೋಪವಲ್ಲ
ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ 35 ಬೀದಿ ನಾಯಿಗಳ ಬಂಧನ