ಪುಟ...3ಕ್ಕೆಕಾಂಗ್ರೆಸ್ ಸೇರ್ಪಡೆಯಾದ ಬಿಜೆಪಿ ಮುಖಂಡರು

KannadaprabhaNewsNetwork |  
Published : May 25, 2026, 03:00 AM IST
ಫೋಟೋ ಶೀರ್ಷಿಕೆ ೨೪ಎಸ್‌ಡಿಟಿ೧ಸವದತ್ತಿಯ ಶಾಸಕರ ಗೃಹ ಕಚೇರಿಯಲ್ಲಿ ಅನೇಕ ಬಿಜಿಪಿ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಶಾಸಕ ವಿಶ್ವಾಸ ವೈದ್ಯ, ಮಾಜಿ ಶಾಸಕ ಆರ್.ವಿ.ಪಾಟೀಲ ಇತರರು ಉಪಸ್ಥಿತರಿದ್ದರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಸವದತ್ತಿ ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಮೆಚ್ಚಿ ಅನೇಕ ಬಿಜೆಪಿ ಮುಖಂಡರು ಭಾನುವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದು, ಸವದತ್ತಿ ಯಲ್ಲಮ್ಮಾ ಮತಕ್ಷೇತ್ರದಲ್ಲಿ ನಡೆಯುತ್ತಿರುವ ನಿರಂತರ ಅಭಿವೃದ್ಧಿಗೆ ಇದು ಪ್ರೇರಣೆಯಾಗಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಸವದತ್ತಿ

ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಮೆಚ್ಚಿ ಅನೇಕ ಬಿಜೆಪಿ ಮುಖಂಡರು ಭಾನುವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದು, ಸವದತ್ತಿ ಯಲ್ಲಮ್ಮಾ ಮತಕ್ಷೇತ್ರದಲ್ಲಿ ನಡೆಯುತ್ತಿರುವ ನಿರಂತರ ಅಭಿವೃದ್ಧಿಗೆ ಇದು ಪ್ರೇರಣೆಯಾಗಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಪಟ್ಟಣದ ಶಾಸಕರ ಗೃಹ ಕಚೇರಿಯಲ್ಲಿ ರವಿವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಬಯಸಿ ಬಂದ ಬಿಜೆಪಿ ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತಿಸಿ ಅವರು ಮಾತನಾಡಿದರು. ಸರ್ಕಾರದ ಜನಪರ ಗ್ಯಾರಂಟಿ ಯೋಜನೆಗಳ ಸತ್ಕಾರ್ಯಗಳನ್ನು ಮೆಚ್ಚಿ ಕ್ಷೇತ್ರಾದ್ಯಂತ ಪಕ್ಷದ ಸಂಘಟನೆ ದಿನದಿಂದ ದಿನಕ್ಕೆ ಬಲಿಷ್ಠವಾಗುತ್ತಿದೆ. ಮುಂಬರುವ ದಿನಗಳಲ್ಲಿ ಒಗ್ಗಟ್ಟಿನಿಂದ ಕ್ಷೇತ್ರದ ಸರ್ವತೋಮುಖ ಪ್ರಗತಿಗಾಗಿ ಹಾಗೂ ಪಕ್ಷದ ಬಲವರ್ಧನೆಗಾಗಿ ಪ್ರಾಮಾಣಿಕವಾಗಿ ಶ್ರಮಿಸೋಣ ಎಂದು ಕರೆ ನೀಡಿದರು.

ಮಾಜಿ ಶಾಸಕರಾದ ಆರ್.ವಿ.ಪಾಟೀಲ ಉಪಸ್ಥಿತಿಯಲ್ಲಿ ರೈನಾಪೂರ, ಸವದತ್ತಿ, ಮುನವಳ್ಳಿ, ಬೆನಕಟ್ಟಿ, ಆಲದಕಟ್ಟಿ, ಮಬನೂರ, ಮೆಳ್ಳಿಕೇರಿ, ಕಡಬಿ, ಜೀವಾಪೂರ ಸೇರಿದಂತೆ ವಿವಿಧ ಗ್ರಾಮಗಳ ಪ್ರಮುಖ ಬಿಜೆಪಿ ಮುಖಂಡರು, ಹಿರಿಯರು ಹಾಗೂ ಯುವ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಮಹಾಬಳೇಶ್ವರ ಪುರದಗುಡಿ, ಚಂದ್ರಣ್ಣ ಶಾಮರಾಯನವರ, ಸುಭಾಸಿಂಗ ರಜಪುತ, ಶಿವಾನಂದ ಹೂಗಾರ, ಪ್ರಭು ಪ್ರಭುನವರ, ಫಕ್ಕಿರಪ್ಪ ಹದ್ದನ್ನವರ, ಭರಮಪ್ಪ ಅಣ್ಣಿಗೇರಿ, ಪುಂಡಲೀಕ ಮೇಟಿ, ಸಿ.ಬಿ.ಬಾಳಿ, ಡಿ.ಡಿ.ಟೋಪೋಜಿ, ಅಶ್ವತ ವೈದ್ಯ, ಮಲ್ಲು ಜಕಾತಿ, ಅಮೀರ ಗೋರಿನಾಯಕ, ಚಂದ್ರು ಜಂಬ್ರಿ, ಮಲ್ಲಿಕಾರ್ಜುನ ಬೇವೂರ, ಮಂಜುನಾಥ ಪಾಚಂಗಿ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಂದಾಪುರ: ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ 12ನೇ ಶಾಖೆ ಉದ್ಘಾಟನೆ
ಕಾನೂನು ಅರಿವು ಅಗತ್ಯ: ಮುಕ್ತಾಬಾಯಿ