ಲೋಕಾಪುರ: ತೀವ್ರ ಜಿದ್ದಾ ಜಿದ್ದಿನಿಂದ ಕೂಡಿದ್ದ ಲೋಕಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಬಿಜೆಪಿ ಮೇಲುಗೈ ಸಾಧಿಸಿದೆ. ಡಿ.೧೭ರಂದು ಚುನಾವಣೆ ನಡೆದಿತ್ತು. ಮತ ಎಣಿಕೆಗೆ ಹೈಕೂರ್ಟಿನಿಂದ ತಡೆಯಾಜ್ಞೆ ತಂದ ಕಾರಣ ಫಲಿತಾಂಶ ವಿಳಂಬವಾಗಿತ್ತು. ಕಳೆದ ವಾರ ಮತ ಎಣಿಕೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ್ದರಿಂದ ಭಾನುವಾರ ಮತ ಎಣಿಕೆ ನಡೆಯಿತು.
ಕನ್ನಡಪ್ರಭ ವಾರ್ತೆ ಲೋಕಾಪುರ
ತೀವ್ರ ಜಿದ್ದಾ ಜಿದ್ದಿನಿಂದ ಕೂಡಿದ್ದ ಲೋಕಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಬಿಜೆಪಿ ಮೇಲುಗೈ ಸಾಧಿಸಿದೆ.
ಡಿ.೧೭ರಂದು ಚುನಾವಣೆ ನಡೆದಿತ್ತು. ಮತ ಎಣಿಕೆಗೆ ಹೈಕೂರ್ಟಿನಿಂದ ತಡೆಯಾಜ್ಞೆ ತಂದ ಕಾರಣ ಫಲಿತಾಂಶ ವಿಳಂಬವಾಗಿತ್ತು. ಕಳೆದ ವಾರ ಮತ ಎಣಿಕೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ್ದರಿಂದ ಭಾನುವಾರ ಮತ ಎಣಿಕೆ ನಡೆಯಿತು.
ಬಿಜೆಪಿ ಬೆಂಬಲಿತರಾದ ಸಾಮಾನ್ಯ ವರ್ಗದಿಂದ ವಿವೇಕಾನಂದ ಹವಳಖೋಡ(೫೧೦), ಚನ್ನಪ್ಪ ಮುದ್ದಾಪುರ(೫೦೪), ರಮೇಶ ಯರಗಟ್ಟಿ (ದೇವರಡ್ಡಿ) (೪೭೩), ಹಿಂದುಳಿದ ವರ್ಗ ‘ಅ’ ದಿಂದ ಯಮನಪ್ಪ ಹೊರಟ್ಟಿ (೫೩೦), ಹಿಂದುಳಿದ ವರ್ಗ ‘ಬ’ ಅಯ್ಯಪ್ಪಗೌಡ ಪಾಟೀಲ (೫೫೪), ಸಾಲಗಾರ ಮಹಿಳಾ ಅನಸೂಯಾ ಪಾಟೀಲ (೪೭೭), ತಿಮ್ಮವ್ವ ಬೂಸರಡ್ಡಿ (೪೭೬), ಸಾಲಗಾರ ಪರಿಶಿಷ್ಟ ಜಾತಿ ತಿಪ್ಪಣ್ಣ ಅಗಸದವರ (೫೦೭), ಸಾಲಗಾರ ಪರಿಶಿಷ್ಟ ಪಂಗಡ ಮಾರುತಿ ರಂಗಣ್ಣವರ (೫೯೭), ಸಾಲೇತರ ಹೊಳಬಸು ಕಾಜಗಾರ(ಬಳಗಾರ) (೧೨೧) ಮತಗಳನ್ನು ಪಡೆದು ಜಯಶಾಲಿಯಾಗಿದ್ದಾರೆ.
ಸಾಮಾನ್ಯ ವರ್ಗದಿಂದ ಪವನ ಉದಪುಡಿ(೫೪೮), ಚನ್ನಯ್ಯ ಗಣಾಚಾರಿ(೪೭೦) (ಕಾಂಗ್ರೆಸ್ ಬೆಂಬಲಿತರು) ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಪಿ.ಎಲ್.ಬಗಲಿ ಘೋಷಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.